ETV Bharat / bharat

ಬಾಲಕಿ ರೇಪ್​, ಕೊಲೆ ಪ್ರಕರಣ: ಕೇಜ್ರಿವಾಲ್​ ಸರ್ಕಾರದಿಂದ 10 ಲಕ್ಷ ರೂ.ಪರಿಹಾರ

ದೆಹಲಿಯಲ್ಲಿ 9 ವರ್ಷದ ಬಾಲಕಿ ಮೇಲೆ ನಡೆದಿರುವ ಅತ್ಯಾಚಾರ ಹಾಗೂ ಕೊಲೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಸಂತ್ರಸ್ತೆ ಕುಟುಂಬಕ್ಕೆ ಕೇಜ್ರಿವಾಲ್​ ಸರ್ಕಾರ ಪರಿಹಾರ ಘೋಷಣೆ ಮಾಡಿದೆ.

Kejriwal
Kejriwal
author img

By

Published : Aug 10, 2021, 3:11 PM IST

ನವದೆಹಲಿ: ದೆಹಲಿಯಲ್ಲಿ ಕಳೆದ ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ನಡೆದಿರುವ ಪೈಶಾಚಿಕ ಕೃತ್ಯಕ್ಕೆ 9 ವರ್ಷದ ಬಾಲಕಿಯೊಬ್ಬಳು ಬಲಿಯಾಗಿದ್ದು, ಇದೀಗ ಸಂತ್ರಸ್ತೆ ಕುಟುಂಬಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ 10 ಲಕ್ಷ ರೂಪಾಯಿ ನಗದು ಪರಿಹಾರ ಘೋಷಣೆ ಮಾಡಿದ್ದಾರೆ.

ಆಗಸ್ಟ್​ 1ರ ಸಂಜೆ ಈ ಘಟನೆ ನಡೆದಿದ್ದು, ಸಂಜೆ 5.30ಕ್ಕೆ ಮನೆಯಿಂದ ಹೊರ ಬಂದಾಗ ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು. ದೆಹಲಿಯ ಕಂಟೋನ್ಮೆಂಟ್​ ಏರಿಯಾದ ನಂಗಲ್ ಗ್ರಾಮದಲ್ಲಿ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕರು ತಂದನಂತರ ಕೊಲೆ ಮಾಡಿ, ಆಕೆಯ ಶವ ಸುಟ್ಟು ಹಾಕಿದ್ದರು.

ಘಟನೆ ನಡೆದ ಬಳಿಕ ಈ ಪ್ರಕರಣ ದೇಶಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇದೇ ಪ್ರಕರಣವನ್ನಿಟ್ಟುಕೊಂಡು ದೆಹಲಿಯಲ್ಲಿ ವಿವಿಧ ಪಕ್ಷಗಳು ಆಮ್​​ ಆದ್ಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದವು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಗಸ್ಟ್​ 4ರಂದು​​ ಮೃತ ಬಾಲಕಿ ಪೋಷಕರ ಭೇಟಿ ಮಾಡಿದ್ದರು. ಈ ವೇಳೆ, ಆರ್ಥಿಕ ಸಹಾಯ ನೀಡುವ ಭರವಸೆ ಸಹ ನೀಡಿದ್ದರು.

ಇದೀಗ ಮೃತ ಬಾಲಕಿ ಕುಟುಂಬಕ್ಕೆ 10 ಲಕ್ಷ ರೂ. ನೀಡಲು ಅನುಮೋದನೆ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಇಲ್ಲಿಯವರೆಗೆ ನಾಲ್ವರು ಆರೋಪಿಗಳ ಬಂಧನ ಮಾಡಿದ್ದು, ಅವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಬಂಧಿತರನ್ನ ರಾಧಾ ಶ್ಯಾಮ್​, ಸಲೀಂ, ಲಕ್ಷ್ಮಿ ನಾರಾಯಣ ಹಾಗೂ ಕುಲ್ದೀಪ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿರಿ: ಅತ್ಯಾಚಾರ ಸಂತ್ರಸ್ತೆಯ ಗುರುತು ಬಹಿರಂಗ: ರಾಗಾ ವಿರುದ್ಧ FIR ದಾಖಲಿಸಲು ಹೈಕೋರ್ಟ್​ಗೆ ಅರ್ಜಿ

ಇನ್ನ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಂತ್ರಸ್ತೆ ಪೋಷಕರನ್ನ ಭೇಟಿ ಮಾಡಿ, ಅವರೊಂದಿಗೆ ಮಾತುಕತೆ ನಡೆಸಿದ್ದ ಫೋಟೋ ಟ್ವಿಟರ್​ನಲ್ಲಿ ಹಾಕಿಕೊಂಡಿದ್ದರು. ಈ ವಿಷಯವನ್ನಿಟ್ಟುಕೊಂಡು ಅನೇಕರು ವಾಗ್ದಾಳಿ ನಡೆಸಿ, ಪ್ರಕರಣ ದಾಖಲು ಮಾಡುವಂತೆ ಆಗ್ರಹಿಸಿದ್ದರು. ಇದಾದ ಬಳಿಕ ತಮ್ಮ ಟ್ವಿಟರ್​ನಲ್ಲಿ ಹಾಕಿಕೊಂಡಿದ್ದ ಫೋಟೋ ಡಿಲೀಟ್ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.