ETV Bharat / bharat

ಚೀನಾ- ಭಾರತ ಗಡಿ ಘರ್ಷಣೆಗೆ ಅಂತ್ಯ ಹಾಡುವ ಕಾಲ ಸಮೀಪಿಸಿದೆ: ರಾಜನಾಥ್ ಸಿಂಗ್ ವಿಶ್ವಾಸ - Rajnath Singh in Rajya Sabha

ಚೀನಾದೊಂದಿಗಿನ ನಮ್ಮ ನಿರಂತರ ಮಾತುಕತೆಗಳು ಪಾಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ತೀರದಲ್ಲಿ ಉಂಟಾಗಿದ್ದ ಗಡಿ ಘರ್ಷಣೆಗೆ ಅಂತ್ಯ ಹಾಡುವ ಕಾಲ ಸಮೀಪಿಸಿರುವ ಲಕ್ಷಣ ಗೋಚರವಾಗುತ್ತಿದೆ

Defence Minister Rajnath Singh
ರಾಜನಾಥ್ ಸಿಂಗ್
author img

By

Published : Feb 11, 2021, 11:03 AM IST

Updated : Feb 11, 2021, 12:45 PM IST

ನವದೆಹಲಿ: ನೀವು ಯಾವ ಪಕ್ಷಕ್ಕೆ ಸೇರಿದವರೆಂಬುದು ಮುಖ್ಯವಲ್ಲ, ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ದೇಶವು ಒಗ್ಗಟ್ಟಾಗಿ ನಿಲ್ಲುತ್ತದೆ. ದೇಶದ ಸಾರ್ವಭೌಮತ್ವ ರಕ್ಷಿಸಲು ಯಾವುದೇ ಸವಾಲು ಎದುರಿಸಲು ಭಾರತದ ಭದ್ರತಾ ಪಡೆ ಸಿದ್ಧವಿರುವುದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಾಜ್ಯಸಭೆಯಲ್ಲಿ ಘೋಷಿಸಿದರು.

ರಾಜ್ಯಸಭಾ ಕಲಾಪದಲ್ಲಿ ರಾಜನಾಥ್ ಸಿಂಗ್ ಮಾತು

ಇಂದಿನ ರಾಜ್ಯಸಭಾ ಕಲಾಪದಲ್ಲಿ ಮಾತನಾಡುತ್ತಿರುವ ರಾಜನಾಥ್ ಸಿಂಗ್, ಪೂರ್ವ ಲಡಾಖ್​​ನಲ್ಲಿನ ಪ್ರಸ್ತುತ ಪರಿಸ್ಥಿತಿ ಕುರಿತು ಹೇಳಿಕೆ ನೀಡಿದ್ದಾರೆ. ಗಡಿ ನಿಯಂತ್ರಣ ರೇಖೆಯಲ್ಲಿ ಶಾಂತಿ ಕಾಪಾಡಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಭಾರತ ಎಂದಿಗೂ ದ್ವಿಪಕ್ಷೀಯ ಸಂಬಂಧವನ್ನು ಕಾಪಾಡಿಕೊಳ್ಳಲು ಒತ್ತು ನೀಡಿದೆ. ಆದರೆ ಪೂರ್ವ ಲಡಾಖ್​​ನ ವಾಸ್ತವಿಕ ಗಡಿ ರೇಖೆ (ಎಲ್‌ಎಸಿ) ಬಳಿ ಚೀನಾ ಭಾರಿ ಪ್ರಮಾಣದ ಸೇನೆ, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಿ ನಿಯೋಜಿಸಿದೆ. ಇದಕ್ಕೆ ಪ್ರತಿಯಾಗಿ ನಮ್ಮ ಪಡೆಯನ್ನೂ ಸಜ್ಜುಗೊಳಿಸಲಾಗಿದೆ ಎಂದರು.

ಮೂರು ತತ್ವಗಳು

ಕಳೆದ ವರ್ಷದಿಂದ, ನಾವು ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ನಡೆಸಿ ಚೀನಾದೊಂದಿಗೆ ಸಂಬಂಧವನ್ನು ಉಳಿಸಿಕೊಂಡಿದ್ದೇವೆ. ಮೊದಲಿಗೆ, ಎರಡೂ ಪಕ್ಷಗಳು ಎಲ್‌ಎಸಿ ಸಂಬಂಧದ ನಿಯಮಗಳ ಒಪ್ಪಿಕೊಳ್ಳಬೇಕು ಮತ್ತು ಅದನ್ನು ಗೌರವಿಸಬೇಕು. ಎರಡನೆಯದಾಗಿ, ಯಾವುದೇ ಪಕ್ಷವು ಏಕಪಕ್ಷೀಯವಾಗಿ ಸ್ಥಾನಮಾನವನ್ನು ಬದಲಾಯಿಸುವ ಪ್ರಯತ್ನ ಮಾಡಬಾರದು. ಮೂರನೆಯದಾಗಿ, ಎಲ್ಲಾ ರಾಜಿಗಳನ್ನು ಎರಡೂ ಪಕ್ಷಗಳು ಸಂಪೂರ್ಣವಾಗಿ ಒಪ್ಪಿಕೊಳ್ಳಬೇಕು. ಈ ಮೂರು ತತ್ವಗಳ ಆಧಾರದ ಮೇಲೆ ಸಮಸ್ಯೆಯ ಪರಿಹಾರವನ್ನು ಬಯಸುತ್ತೇವೆ ಎಂದು ಮಾತುಕತೆ ವೇಳೆ ಚೀನಾಕ್ಕೆ ತಿಳಿಸಿದ್ದೇವೆ ಎಂದು ರಾಜ್ಯಸಭೆಯಲ್ಲಿ ರಾಜನಾಥ್​ ಸಿಂಗ್​ ಮಾಹಿತಿ ನೀಡಿದರು.

ಇದನ್ನೂ ಓದಿ: ಸೀತಾರಾಮನ್ ಮಂಡಿಸಿದ 2021ರ ಬಜೆಟ್ 21ನೇ ಶತಮಾನದ ದಿಕ್ಸೂಚಿ: ತೇಜಸ್ವಿ ಸೂರ್ಯ

ಚೀನಾದೊಂದಿಗಿನ ನಮ್ಮ ನಿರಂತರ ಮಾತುಕತೆಗಳು ಪಾಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ತೀರದಿಂದ ಉಭಯ ಸೇನೆಗಳು ಹಿಂದೆ ಸರಿಯುವ ಒಪ್ಪಂದ ಮಾಡಿಕೊಳ್ಳಲು ಕಾರಣವಾಗಿವೆ. ಒಪ್ಪಂದ ಪ್ರಕಾರ ಗಡಿ ಘರ್ಷಣೆಗೆ ಅಂತ್ಯ ಹಾಡುವ ಕಾಲ ಸಮೀಪಿಸಿರುವ ಲಕ್ಷಣ ಗೋಚರವಾಗುತ್ತಿದೆ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.ಈ ಒಪ್ಪಂದದ ನಂತರ, ಭಾರತ ಹಾಗೂ ಚೀನಾ ಹಂತ ಹಂತವಾಗಿ ಸಮನ್ವಯದಿಂದ ತಮ್ಮ ತಮ್ಮ ಸೈನಿಕರನ್ನು ನಿಯೋಜಿಸುವುದನ್ನು ತಡೆಯುತ್ತದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದ್ದಾರೆ

Last Updated : Feb 11, 2021, 12:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.