ನವದೆಹಲಿ: ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್ (ಎಲ್ಎಸಿ) ನಲ್ಲಿ ಚೀನಾದೊಂದಿಗೆ ನಡೆಯುತ್ತಿರುವ ಮಿಲಿಟರಿ ಬಿಕ್ಕಟ್ಟಿನ ಮಧ್ಯೆಯೇ, ರಕ್ಷಣಾ ಗುಪ್ತಚರ ಸಂಸ್ಥೆಗಳು ಮಹತ್ವದ ಸಲಹೆಗಳನ್ನು ನೀಡಿವೆ. ಹೌದು, ಭಾರತ ಪಡೆಗಳು ಚೀನಾದ ಮೊಬೈಲ್ ಫೋನ್‌ಗಳನ್ನು ಬಳಸುತ್ತಿಲ್ಲವೇ ಎನ್ನುವುದನ್ನು ಖಚಿತಪಡಿಸಬೇಕು ಎಂದು ಸಲಹೆ ಕೊಟ್ಟಿವೆ.
"ರಕ್ಷಣಾ ಘಟಕಗಳು ಚೀನಾದ ಮೊಬೈಲ್ ಫೋನ್ ಸಾಧನಗಳನ್ನು ಬಗ್ಗೆ ಎಚ್ಚರಿಕೆವಹಿಸಬೇಕು. ರಕ್ಷಣಾ ವ್ಯಾಯಾಮ ಮಾಡುವ ವೇಳೆ, ವಿವಿಧ ರೂಪಗಳ ಮತ್ತು ಸಾಧನಗಳ ಮೂಲಕ ಸಿಬ್ಬಂದಿ ದುರ್ಬಲಗೊಳಿಸುವ ಸಾಧ್ಯತೆ ಹೆಚ್ಚಿದೆ'' ಎಂದು ರಕ್ಷಣಾ ಗುಪ್ತಚರ ಸಂಸ್ಥೆಗಳು ನೀಡಿದ ಸಲಹೆಯಲ್ಲಿ ತಿಳಿಸಲಾಗಿದೆ.
ಮಿಲಿಟರಿ ಬೇಹುಗಾರಿಕಾ ಏಜೆನ್ಸಿ ಸಲಹೆ: "ಪಡೆಗಳ ಮತ್ತು ಅವರ ಕುಟುಂಬಗಳು ಭಾರತಕ್ಕೆ ಪ್ರತಿಕೂಲವಾದ ಚೀನಾ ದೇಶದ ಫೋನ್‌ಗಳನ್ನು ಖರೀದಿಸುವುದು ಅಥವಾ ಬಳಸುವುದರ ಬಗ್ಗೆ ನಿರುತ್ಸಾಹ ತೋರಿಸಬೇಕು. ಏಜೆನ್ಸಿಗಳಿಂದ ಖರೀದಿಸಲಾದ ಚೀನಾ ಮೂಲದ ಮೊಬೈಲ್ ಫೋನ್‌ಗಳಲ್ಲಿ ದೇಶದ ರಕ್ಷಣೆ ಹಿನ್ನಲೆಯಲ್ಲಿ ಪ್ರತಿಕೂಲವಾದ ಅಂಶಗಳು ಇರುವುದು ಕಂಡುಬಂದಿದೆ ಎಂದು ಮಿಲಿಟರಿ ಬೇಹುಗಾರಿಕಾ ಏಜೆನ್ಸಿಯ ಮೂಲಗಳು ತಿಳಿಸಿವೆ.
ಚೀನಾ ಮೊಬೈಲ್ ಫೋನ್‌ಗಳು, ಅಪ್ಲಿಕೇಶನ್‌ಗಳನ್ನು ಬಳಸಬೇಡಿ: ಸಲಹೆಯೊಂದಿಗೆ ಲಗತ್ತಿಸಲಾದ ಪಟ್ಟಿಯಲ್ಲಿ ಉಲ್ಲೇಖಿಸಲಾದ "ಚೀನಾದ ಫೋನ್‌ಗಳ ವಿರುದ್ಧವಾಗಿ ಇತರ ಫೋನ್‌ಗಳನ್ನು ಬಳಸಲು ಮುಂದಾಗಬೇಕು'' ಎಂದು ರಕ್ಷಣಾ ಗುಪ್ತಚರ ಸಂಸ್ಥೆಗಳು ಹೇಳಿವೆ. ದೇಶದಲ್ಲಿ ವಾಣಿಜ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಚೀನೀ ಮೊಬೈಲ್ ಫೋನ್‌ಗಳು ನೋಡೋದಾದ್ರೆ, ವಿವೋ, ಓಪ್ಪೊ, ಎಂಐ, ಓನ್ಪ್ಲಸ್, ಹೊನರ್, ರಿಯಲ್ ಮೀ, ಜೆಡ್ಟಿಇ, ಜಿಯೋನಿ, ಎಎಸ್ಯುಎಸ್ ಇನ್ಫಿನಿಕ್ಸ್ ಜಿ.
ಮಿಲಿಟರಿ ಸಿಬ್ಬಂದಿಯ ಫೋನ್‌ಗಳಿಂದ ಚೀನಾದ ಅನೇಕ ಅಪ್ಲಿಕೇಶನ್‌ಗಳನ್ನು ಅಳಿಸಿಹಾಕಿದ್ದಾರೆ. ಈ ಹಿಂದೆ, ಚೀನಾದ ಮೊಬೈಲ್ ಫೋನ್ ಅಪ್ಲಿಕೇಶನ್‌ಗಳ ವಿರುದ್ಧ ಗೂಢಚಾರಿಕೆ ಸಂಸ್ಥೆಗಳು ತುಂಬಾ ಸಕ್ರಿಯ ಕಾರ್ಯನಿರ್ವಹಿಸುತ್ತಿವೆ. ರಕ್ಷಣಾ ಪಡೆಗಳು ತಮ್ಮ ಸಾಧನಗಳಲ್ಲಿ ಚೀನಾ ಮೊಬೈಲ್ ಫೋನ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ಬಳಸುವುದನ್ನು ನಿಲ್ಲಿಸಿವೆ.
ಭಾರತ ಮತ್ತು ಚೀನಾ ಮಾರ್ಚ್ 2020ರಿಂದ ಮಿಲಿಟರಿ ಬಿಕ್ಕಟ್ಟು ಎದುರಾಗಿವೆ. ಪೂರ್ವ ಲಡಾಖ್‌ನಲ್ಲಿ ಅರುಣಾಚಲ ಪ್ರದೇಶದ ಸಮೀಪದ ಎಲ್‌ಎಸಿಯಲ್ಲಿ ಪರಸ್ಪರರ ವಿರುದ್ಧ ಉಭಯ ದೇಶಗಳು ಭಾರೀ ಪ್ರಮಾಣದಲ್ಲಿ ಸೇನೆ ತುಕುಡಿಯನ್ನು ನಿಯೋಜಿಸಿದ್ದವು.
ಭಾರತ ಮತ್ತು ಚೀನಾ ಗಡಿ ಬಿಕ್ಕಟ್ಟು ವಿಚಾರ: ಭಾರತ ಮತ್ತು ಚೀನಾ ಗಡಿ ಬಿಕ್ಕಟ್ಟು ವಿಷಯವಾಗಿ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಹೇಳಿಕೆಗೆ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಅವರಿಗೆ (ರಾಹುಲ್) ಈ ಬಗ್ಗೆ ಉನ್ನತ ಜ್ಞಾನ ಮತ್ತು ಬುದ್ಧಿವಂತಿಕೆ ಇದ್ದರೆ, ನಾನು ಯಾವಾಗಲೂ ಅವರ ಮಾತು ಕೇಳಲು ಸಿದ್ಧ ಎಂದು ತಿರುಗೇಟು ನೀಡಿದ್ದರು.
ವಿದೇಶಾಂಗ ವ್ಯವಹಾರ ಸಚಿವರಿಗೆ ವಿದೇಶಾಂಗ ನೀತಿ ಬಗ್ಗೆ ಹೆಚ್ಚು ತಿಳಿದಿಲ್ಲ. ಅವರು ಇನ್ನಷ್ಟು ತಿಳಿದುಕೊಳ್ಳಬೇಕೆಂದು ರಾಹುಲ್ ಗಾಂಧಿ ಇತ್ತೀಚೆಗೆ ಹೇಳಿದ್ದರು. ಈ ಬಗ್ಗೆ ಎಎನ್ಐ ಸುದ್ದಿ ಸಂಸ್ಥೆಯ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ ಜೈಶಂಕರ್, 1962ರಲ್ಲಿ ಏನಾಯಿತು ಎಂಬುದನ್ನು ತಿಳಿದುಕೊಳ್ಳುವ ಪ್ರಾಮಾಣಿಕತೆ ಪ್ರತಿಪಕ್ಷಕ್ಕೆ ಇರಬೇಕು. ಚೀನಾದ ಸೇನೆಯ ನಿಯೋಜನೆಗೆ ಪ್ರತಿಯಾಗಿ ಸೇನೆಯನ್ನು ಪೂರ್ವ ಲಡಾಖ್‌ನ ಎಲ್‌ಎಸಿಗೆ ಕಳುಹಿಸಿದ್ದು ರಾಹುಲ್ ಗಾಂಧಿಯಲ್ಲ, ಪ್ರಧಾನಿ ನರೇಂದ್ರ ಮೋದಿ ಎಂದಿದ್ದರು.
ಆ ಪ್ರದೇಶವು ನಿಜವಾಗಿಯೂ ಯಾವಾಗ ಚೀನಾದ ನಿಯಂತ್ರಣಕ್ಕೆ ಒಳಪಟ್ಟಿತ್ತು?. 'ಸಿ'ಯಿಂದ ಪ್ರಾರಂಭವಾಗುವ ಪದಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಅವರು (ಕಾಂಗ್ರೆಸ್) ಕೆಲವು ಸಮಸ್ಯೆಗಳನ್ನು ಹೊಂದಿರಬೇಕು. ಉದ್ದೇಶಪೂರ್ವಕವಾಗಿಯೇ ಈಗಿನ ಪರಿಸ್ಥಿತಿಯನ್ನು ತಪ್ಪಾಗಿ ಪ್ರಸ್ತಾಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ: ಉಮೇಶ್ ಪಾಲ್ ಹತ್ಯೆ ಪ್ರಕರಣ: ಶೂಟರ್ ವಿಜಯ್ ಚೌಧರಿ ಎನ್‌ಕೌಂಟರ್..!