ಹೈದರಾಬಾದ್: ಬಾಲಿವುಡ್ ತಾರೆಗಳಾದ ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಶನ್ ಪರದೆ ಹಂಚಿಕೊಳ್ಳಲು ಸಜ್ಜಾಗಿದ್ದಾರೆ ಎನ್ನಲಾಗುತ್ತದೆ. ಇದಕ್ಕೆ ಕಾರಣ ಹೃತಿಕ್ ರೋಷನ್, ದೀಪಿಕಾ ಹುಟ್ಟುಹಬ್ಬಕ್ಕೆ ಶುಭಕೋರಿ ವಿಶೇಷ ಟಿಪ್ಪಣಿ ಬರೆದು ಹಂಚಿಕೊಂಡಿರುವುದು.
ಪಡುಕೋಣೆ ಜನವರಿ 5 ರಂದು ತನ್ನ 35 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ದೀಪಿಯ ವಿಶೇಷ ದಿನದಂದು, ಅವರ ಸಾಮಾಜಿಕ ಜಾಲತಾಣದ ಪುಟಗಳು ಸೆಲೆಬ್ರಿಟಿಗಳು, ಅಭಿಮಾನಿಗಳು ಮತ್ತು ಸ್ನೇಹಿತರ ಹುಟ್ಟುಹಬ್ಬದ ಶುಭಾಶಯಗಳಿಂದ ತುಂಬಿದ್ದವು. ಈ ಮಧ್ಯೆ ಹೃತಿಕ್ ಅವರ ಶುಭಾಶಯ ಮಾತ್ರ ಗರಿಷ್ಠ ಗಮನವನ್ನು ಸೆಳೆದಿದೆ, ಇದು ಭವಿಷ್ಯದಲ್ಲಿ ಜೊತೆಯಾಗಿ ಕೆಲಸ ಮಾಡುವ ಸುಳಿವು ನೀಡುತ್ತಿದೆ.
ಹೃತಿಕ್ ರೋಷನ್, ದೀಪಿಕಾ ಹುಟ್ಟುಹಬ್ಬಕ್ಕೆ ಶುಭಕೋರಿ ವಿಶೇಷ ಟಿಪ್ಪಣಿ ಬರೆದು ಅದನ್ನು ತನ್ನ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಅವರ ಶುಭಾಶಯಕ್ಕೆ ಆಕೆಯೂ ಆತ್ಮೀಯವಾಗಿ ಉತ್ತರಿಸಿರುವುದು ಮುಂಬರುವ ಚಿತ್ರಕ್ಕಾಗಿ ಇಬ್ಬರು ಒಟ್ಟಿಗೆ ಸೇರುವ ಬಗ್ಗೆ ಊಹಾಪೋಹಗಳಿಗೆ ನಾಂದಿ ಹಾಡಿದೆ.
ಶುಭಾಶಯ ಕೋರಿದ ರೋಷನ್ ಗೆ ಉತ್ತರಿಸಿದ ದೀಪಿಕಾ, "ತುಂಬಾ ಧನ್ಯವಾದಗಳು ಹೆಚ್ಆರ್! ಈಗ ಒಂದೆರಡು ದಿನಗಳಲ್ಲಿ ಮತ್ತೊಂದು ದೊಡ್ಡ ಆಚರಣೆಗೆ ಬರಲಿದೆ ...!". ಒಂದೆಡೆ ದೀಪಿಕಾ ಮತ್ತು ಹೃತಿಕ್ ಅವರನ್ನು ಒಟ್ಟಿಗೆ ಒಂದು ಚಿತ್ರದಲ್ಲಿ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದರೆ, ಇನ್ನೊಂದೆಡೆ ದೀಪಿಕಾ ರೀಟ್ವೀಟ್ ನ ಅರ್ಥ ಜನವರಿ 10 ರಂದು ಬರುವ ಹೃತಿಕ್ ಅವರ ಜನ್ಮದಿನವನ್ನು ಸಹ ಸೂಚಿಸುತ್ತಿರಬಹುದು.