ETV Bharat / bharat

ಸತ್ತ ಮಹಿಳೆ ಅಂತ್ಯ ಸಂಸ್ಕಾರ ಮಾಡಲು ಹೋಗುವಾಗ ಮತ್ತೇ ಜೀವಂತ: ಎರಡು ಬಾರಿ ಸಾವಿಗೀಡಾದ ಮಹಿಳೆ!

73 ವರ್ಷದ ಮಹಿಳೆ ಸಾವಿಗೀಡಾಗಿದ್ದಾರೆ ಎಂದು ರಾಯ್‌ಪುರ ಆಸ್ಪತ್ರೆ ದೃಢಪಡಿಸಿತ್ತು. ಅದರಂತೆ ಅಂತ್ಯ ಸಂಸ್ಕಾರ ಮಾಡಲು ಕೊಂಡೊಯ್ಯುವಾಗ ಜೀವಂತ ಇರುವುದು ತಿಳಿದುಬಂದಿದೆ.

declared-dead-by-raipur-hospital-woman-turns-out-to-be-alive
ಸತ್ತ ಮಹಿಳೆ ಅಂತ್ಯ ಸಂಸ್ಕಾರ ಮಾಡಲು ಹೋಗುವಾಗ ಮತ್ತೇ ಜೀವಂತ
author img

By

Published : Apr 29, 2021, 12:03 AM IST

ರಾಯ್‌ಪುರ: ಛತ್ತೀಸ್‌ಗಢದ ರಾಜಧಾನಿಯಲ್ಲಿ ವೈದ್ಯಕೀಯ ವ್ಯವಸ್ಥೆಯ ನಿರ್ಲಕ್ಷ್ಯದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜೀವಂತ ರೋಗಿಯನ್ನು ರಾಯ್‌ಪುರದ ಅಂಬೇಡ್ಕರ್ ಆಸ್ಪತ್ರೆಯ ವೈದ್ಯರು ಸಾಯಿಸಿರುವ ಆರೋಪ ಕೇಳಿಬಂದಿದೆ.

ಏನಿದು ಘಟನೆ:

ಕೊರೊನಾ ಪಾಸಿಟಿವ್​ ಬಂದ ನಂತರ 73 ವರ್ಷದ ಮಹಿಳೆ ಲಕ್ಷ್ಮಿಬಾಯಿ ಅಗರ್ವಾಲ್ ಎಂಬುವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಈಕೆ ಸಾವಿಗೀಡಾದರು ಎಂದು ಆಸ್ಪತ್ರೆಯವರು ಇವರ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ.

ಕುಟುಂಬದವರು ಕೂಡ ಸತ್ತಳೆಂದು ತಿಳಿದು ಅಂತಿಮ ವಿಧಿವಿಧಾನ ಪೂರೈಸುವ ಹಿನ್ನೆಲೆ ಆಂಬ್ಯುಲೆನ್ಸ್​ನಲ್ಲಿ ಕರೆದೊಯ್ಯುವಾಗ ಮಹಿಳೆ ಜೀವಂತ ಇದ್ದಾಳೆ ಎಂದು ತಿಳಿದುಬಂದಿದೆ. ಮಹಿಳೆಯನ್ನು ತಕ್ಷಣವೇ ಅಂಬೇಡ್ಕರ್ ಆಸ್ಪತ್ರೆಗೆ ಕರೆತರುವಾಗ ದುರಾದೃಷ್ಟವಶಾತ್ ​ ಸಾವಿಗೀಡಾಗಿದ್ದಾರೆ.

ಘಟನೆ ಸಂಬಂಧ ಕುಟುಂಬವು ವೈದ್ಯರ ಮೇಲೆ ಆರೋಪ ಹೊರಿಸಿದ್ದು, ವೈದ್ಯಕೀಯ ನಿರ್ಲಕ್ಷ್ಯ ಸಂಬಂಧ ಆಸ್ಪತ್ರೆಯನ್ನು ದೂಷಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.