ETV Bharat / bharat

ತೈಲ ಬೆಲೆ ಗಗನಕ್ಕೇರುವ ಆತಂಕ: ಜನ ಹಿತಾಸಕ್ತಿ ಗಮನದಲ್ಲಿರಿಸಿ ನಿರ್ಧಾರ- ಕೇಂದ್ರ ಸರ್ಕಾರ - ಜನರ ಹಿತಾಸಕ್ತಿ ಗಮನದಲ್ಲಿರಿಸಿ ನಿರ್ಧಾರ ಎಂದ ಕೇಂದ್ರ ಸರ್ಕಾರ

ಜನರ ಹಿತಾಸಕ್ತಿಯನ್ನು ಪ್ರಮುಖವಾಗಿ ಗಮನದಲ್ಲಿ ಇಟ್ಟುಕೊಂಡು ತೈಲ ಬೆಲೆ ಏರಿಕೆ ಸಂಬಂಧ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಕೇಂದ್ರ ಪೆೆಟ್ರೋಲಿಯಂ ಖಾತೆ ಸಚಿವ ಹರ್ದೀಪ್‌ ಸಿಂಗ್‌ ಪುರಿ ತಿಳಿಸಿದ್ದಾರೆ.

Decision On Fuel Prices To Be Based On Public Interest: Oil Minister Hardeep Singh Puri
ತೈಲ ಬೆಲೆ ಗಗನಕ್ಕೇರುವ ಆತಂಕ..!: ಜನರ ಹಿತಾಸಕ್ತಿ ಗಮನದಲ್ಲಿರಿಸಿ ನಿರ್ಧಾರ ಎಂದ ಕೇಂದ್ರ ಸರ್ಕಾರ
author img

By

Published : Mar 8, 2022, 5:29 PM IST

ನವದೆಹಲಿ: ಉಕ್ರೇನ್‌ ಮೇಲೆ ರಷ್ಯಾ ದಾಳಿ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್‌ಗೆ 130 ಡಾಲರ್‌ ಗಡಿ ತಲುಪಿದೆ. ಇದರ ಪರಿಣಾಮವಾಗಿ ದೇಶದಲ್ಲೂ ಪೆಟ್ರೋಲ್‌, ಡೀಸೆಲ್‌ ಬೆಲೆ ಭಾರಿ ಹೆಚ್ಚಳವಾಗುತ್ತೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ ಪುರಿ, ಜನರ ಹಿತಾಸಕ್ತಿಯ ಆಧಾರದ ಮೇಲೆ ಕೇಂದ್ರ ಸರ್ಕಾರ ತೈಲ ಬೆಲೆ ಏರಿಕೆಯ ನಿರ್ಧಾರ ಮಾಡಲಿದೆ ಎಂದರು.

ಜಾಗತಿಕ ಬೆಲೆಗಳ ಮೇಲೆ ದೇಶದ ತೈಲ ಬೆಲೆ ಆಧರಿಸಿದೆ. ಪ್ರಪಂಚದ ಒಂದು ಭಾಗದಲ್ಲಿ ಯುದ್ಧ ನಡೆಯುತ್ತಿದೆ. ಇದನ್ನು ತೈಲ ಕಂಪನಿಗಳು ಅರಿತಿದ್ದು, ನಮ್ಮ ಜನರ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಧಾರ ಮಾಡುತ್ತೇವೆ ಎಂದು ಸಚಿವರು ಹೇಳಿದ್ದಾರೆ.

ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ತೈಲ ಬೆಲೆ ಏರಿಕೆಯನ್ನು ತಡೆ ಹಿಡಿಯಲಾಗಿದೆ ಎಂಬ ಆರೋಪಗಳಿಗೆ ಉತ್ತರಿಸಿದ ಸಿಂಗ್‌, ಯುಪಿ, ಪಂಜಾಬ್‌, ಗೋವಾ, ಉತ್ತರಾಖಂಡ್‌ ಹಾಗೂ ಮಣಿಪುರ ವಿಧಾನಸಭೆ ಚುನಾವಣೆಗಳಿಗಾಗಿ ತೈಲ ಬೆಲೆ ಏರಿಕೆಯನ್ನು ತಡೆದಿಲ್ಲ. ರಷ್ಯಾ-ಉಕ್ರೇನ್‌ ಯುದ್ಧದಿಂದಾಗಿ ಪ್ರಸ್ತುತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬ್ಯಾರಲ್‌ಗೆ 126 ಡಾಲರ್‌ ಇದೆ ಎಂದರು.

ಇದನ್ನೂ ಓದಿ: ರಷ್ಯಾ ದಾಳಿ ಮುಂದುವರಿಕೆ ಎಫೆಕ್ಟ್‌; ಹೊಸ ದಾಖಲೆ ಬರೆದ ತೈಲ, ಬ್ಯಾರಲ್‌ಗೆ 130 ಡಾಲರ್​​​ಗೆ ಏರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.