ETV Bharat / bharat

ರೈತರ ಪ್ರತಿಭಟನೆ ಅಂತ್ಯಗೊಳಿಸುವ ಬಗ್ಗೆ ನಾಳೆ ಫೈನಲ್​​ ನಿರ್ಧಾರ : ರಾಕೇಶ್​ ಟಿಕಾಯತ್​​ - ಕನಿಷ್ಠ ಬೆಂಬಲ ಬೆಲೆ ವಿಚಾರವಾಗಿ ರೈತ ಸಂಘಟನೆ ಸಭೆ

ಕಳೆದ ಒಂದು ವರ್ಷದಿಂದ ಕೇಂದ್ರ ಸರ್ಕಾರದ ವಿರುದ್ಧ ಅನ್ನದಾತರ ನಡೆಸುತ್ತಿದ್ದ ಹೋರಾಟಕ್ಕೆ ಬಹುತೇಕ ನಾಳೆಗೆ ತೆರೆ ಬೀಳುವ ಸಾಧ್ಯತೆಯಿದೆ. ರೈತರ ಹೋರಾಟಕ್ಕೆ ಮಣೆದಿರುವ ಕೇಂದ್ರ ಸರ್ಕಾರ, ಅನ್ನದಾತರ ಎಲ್ಲ ಬೇಡಿಕೆ ಈಡೇರಿಕೆಗೆ ಮುಂದಾಗಿದೆ ಎನ್ನಲಾಗಿದೆ..

Rakesh Tikait on farmers protest
Rakesh Tikait on farmers protest
author img

By

Published : Dec 7, 2021, 7:07 PM IST

ನವದೆಹಲಿ : ರೈತರ ಎಲ್ಲ ಬೇಡಿಕೆ ಈಡೇರಿಸುವುದಾಗಿ ಕೇಂದ್ರ ಸರ್ಕಾರ ಲಿಖಿತ ರೂಪದಲ್ಲಿ ಆಶ್ವಾಸನೆ ನೀಡಿದೆ. ಇದರ ಬೆನ್ನಲ್ಲೇ ನಾಳೆ ಅಂತಿಮ ಸಭೆ ನಡೆಸಲಿರುವ 40ಕ್ಕೂ ಅಧಿಕ ರೈತ ಸಂಘಟನೆಗಳು, ಪ್ರತಿಭಟನೆ ಅಂತ್ಯಗೊಳಿಸುವ ಕುರಿತು ಫೈನಲ್​ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಅನ್ನದಾತರ ಪ್ರತಿಭಟನೆ ಅಂತ್ಯಗೊಳಿಸುವ ಬಗ್ಗೆ ನಾಳೆ ಫೈನಲ್​ ನಿರ್ಧಾರ ಎಂದ ಟಿಕಾಯತ್..​​

ಹರಿಯಾಣದಲ್ಲಿ ಇಂದು ರೈತ ಸಂಘಟನೆಯ ಸಭೆ ನಡೆದಿದೆ. ಈ ವೇಳೆ ಕೇಂದ್ರ ಸರ್ಕಾರದಿಂದ ಅನ್ನದಾತರ ಎಲ್ಲ ಬೇಡಿಕೆ ಅಂಗೀಕಾರಗೊಳಿಸುವುದಾಗಿ ಪ್ರಸ್ತಾಪ ಬಂದಿರುವ ಕಾರಣ, ನಾಳೆ ಮಧ್ಯಾಹ್ನ 2 ಗಂಟೆಗೆ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ.

ಇದೇ ವಿಚಾರವಾಗಿ ಮಾತನಾಡಿರುವ ಭಾರತ್​ ಕಿಸಾನ್​​​ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್​, ಕೇಂದ್ರ ಸರ್ಕಾರ ನಮ್ಮ ಬೇಡಿಕೆ ಒಪ್ಪುವ ಬಗ್ಗೆ ಪ್ರಸ್ತಾಪ ಮಾಡಿದೆ. ಹೋರಾಟ ಅಂತ್ಯಗೊಳಿಸುವಂತೆ ತಿಳಿಸಿದೆ.

ಆದರೆ, ಕೇಂದ್ರದ ಪ್ರಸ್ತಾಪ ಸ್ಪಷ್ಟವಾಗಿಲ್ಲ. ಆಶ್ವಾಸನೆ ಬಗ್ಗೆ ಅನೇಕ ಆತಂಕ ಹೊಂದಿದ್ದೇವೆ. ನಾಳೆ ಮಧ್ಯಾಹ್ನ ಇದೇ ವಿಚಾರವಾಗಿ ಸಭೆ ನಡೆಸಿ ಚರ್ಚಿಸಲಾಗುವುದು ಎಂದರು.

ಪ್ರತಿಭಟನೆ ಹಿಂಪಡೆದುಕೊಳ್ಳುವ ಬಗ್ಗೆ ನಾಳೆಯ ಸಭೆ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದಿರುವ ಟಿಕಾಯತ್​, ನಮ್ಮ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದ ನಂತರವೇ ಪ್ರತಿಭಟನೆ ಕೈಬಿಡಲಿದ್ದೇವೆ ಎಂದರು.

  • For compensation to over 700 deceased farmers' kin, we want the Centre to follow Punjab model; Rs 5 lakh compensation and a job as announced by Punjab govt should be implemented by Govt of India as well: Gurnam Singh Charuni, BKU pic.twitter.com/2lIuQVWMl1

    — ANI (@ANI) December 7, 2021 " class="align-text-top noRightClick twitterSection" data=" ">

ಇದನ್ನೂ ಓದಿರಿ: ತಂಗಿ ಮದುವೆಗೆ ಚಿನ್ನ ಖರೀದಿಸಲು ಬ್ಯಾಂಕ್​​​ನಲ್ಲಿ ಸಿಗದ ಸಾಲ.. ಆತ್ಮಹತ್ಯೆಗೆ ಶರಣಾದ ಸಹೋದರ..

ಇದೇ ವೇಳೆ ಮಾತನಾಡಿರುವ ಮತ್ತೋರ್ವ ರೈತ ಮುಖಂಡ ಗುರ್ನಾಮ್​​ ಸಿಂಗ್​​, ರೈತ ಪ್ರತಿಭಟನೆ ವೇಳೆ 700ಕ್ಕೂ ಅಧಿಕ ಅನ್ನದಾತರು ಸಾವನ್ನಪ್ಪಿದ್ದಾರೆ. ಇವರೆಲ್ಲರಿಗೂ ಪಂಜಾಬ್​​ ಸರ್ಕಾರದ ಮಾದರಿ ಅನುಸರಣೆ ಮಾಡುವಂತೆ ತಿಳಿಸಿದ್ದಾರೆ.

ಮೃತ ರೈತರ(ಪಂಜಾಬ್​) ಕುಟುಂಬಕ್ಕೆ ಪಂಜಾಬ್​ ಸರ್ಕಾರ ಈಗಾಗಲೇ 5 ಲಕ್ಷ ರೂ. ಪರಿಹಾರ ಹಾಗೂ ಸರ್ಕಾರಿ ಕೆಲಸ ನೀಡುವುದಾಗಿ ತಿಳಿಸಿದೆ. ಕೇಂದ್ರವೂ ಈ ನಿರ್ಧಾರ ಕೈಗೊಳ್ಳಬೇಕು ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.