ETV Bharat / bharat

ಭಾರತದ ಇತಿಹಾಸ ಸಾರುವ ಅಂಚೆ ಚೀಟಿ, ನಾಣ್ಯಗಳ ಮಹಾಸಂಗ್ರಹ.. ವೈದ್ಯರೊಬ್ಬರ ಅಪರೂಪದ ಹವ್ಯಾಸ! - ಡಾ.ಜಿಕೆ ಅಗರ್ವಾಲ್.

ನಾಣ್ಯ ಮತ್ತು ಅಂಚೆಚೀಟಿಗಳ ಸಂಗ್ರಹದಿಂದಾಗಿ ನಾವು ಇತಿಹಾಸ ತಿಳಿದುಕೊಳ್ಳಬಹದು. ನಮ್ಮ ದೇಶದಲ್ಲಿ ಯಾವ ಮಹಾ ಪುರುಷರು ಜೀವಿಸಿದ್ದರು ಎಂಬುದು ಈ ಚೀಟಿಗಳ ಮೂಲಕ ತಿಳಿಯಬಹುದು. ಇಂತಹ ಅಪರೂಪದ ವಸ್ತುಗಳ ಸಂಗ್ರಹ ಈ ವೈದ್ಯರ ಬಳಿ ಇದೆ..

ಭಾರತದ ಇತಿಹಾಸ ಸಾರುವ ಅಂಚೆ ಚೀಟಿ
ಭಾರತದ ಇತಿಹಾಸ ಸಾರುವ ಅಂಚೆ ಚೀಟಿ
author img

By

Published : Jun 28, 2021, 6:09 AM IST

ಭೋಪಾಲ್(ಮಧ್ಯಪ್ರದೇಶ): ಡಾ.ಜಿಕೆ ಅಗರ್ವಾಲ್​​ ತಮ್ಮ ವೃತ್ತಿಯ ಜತೆ ವಿಭಿನ್ನ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಮಕ್ಕಳ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಅವರು ಮನೆಯಲ್ಲಿಯೇ ಚಿಕ್ಕದಾದ ನರ್ಸರಿ ಹಾಗೂ ದಶಕಗಳ ಹಿಂದಿನ ನಾಣ್ಯ ಮತ್ತು ಅಂಚೆ ಚೀಟಿಗಳ ಸಂಗ್ರಹ ಹೊಂದಿದ್ದಾರೆ. ಅವರ ನರ್ಸರಿಯಲ್ಲಿ ಮಾಮೂಲಿಯಷ್ಟೇ ಅಲ್ಲ, ಔಷಧಿ ಸಸ್ಯಗಳು ಹಾಗೂ ಬೇರೆಲ್ಲೂ ಕಾಣಲು ಸಿಗದ ವಿಶೇಷ ಗಿಡಗಳಿವೆ.

ಪ್ರತಿಯೊಬ್ಬರು ತಮ್ಮ ವೃತ್ತಿಯೊಂದಿಗೆ ಬೇರೆ ಹವ್ಯಾಸ ಬೆಳೆಸಿಕೊಂಡಿರುತ್ತಾರೆ. ಆದರೆ, ಇಂತಹ ಅಪರೂಪದ ಹವ್ಯಾಸ ಬೆಳೆಸಿಕೊಳ್ಳೋರು ಅಪರೂಪ. ಇವರು ತಮ್ಮ ಮನೆಯ ಮೇಲೆ ರುದ್ರಾಕ್ಷಿ, ಕಾಫಿ, ರಾಮ್​ಫಾಲ್​, ಮಲ್ಬೆರಿ, ಅಂಜೂರ, ಬೇವಿನ ಗಿಡಗಳನ್ನ ನೆಟ್ಟು ಪೋಷಿಸುತ್ತಿದ್ದಾರೆ. ಇದಲ್ಲದೆ ಮಾವು, ಪೇರಲ, ಕಲ್ಲಂಗಡಿ ಸೇರಿ 50ಕ್ಕೂ ಹೆಚ್ಚು ಹಣ್ಣು ನೀಡುವ ಸಸ್ಯಗಳನ್ನ ಬೆಳೆಸಿದ್ದಾರೆ.

ಭಾರತದ ಇತಿಹಾಸ ಸಾರುವ ಅಂಚೆ ಚೀಟಿ, ನಾಣ್ಯಗಳ ಮಹಾಸಂಗ್ರಹ

ಇದೆಲ್ಲದರ ನಡುವೆ, ಸುಮಾರು 150 ವರ್ಷಗಳ ಹಿಂದಿನ ನಾಣ್ಯಗಳು ಇವರ ಮನೆಯಲ್ಲಿವೆ. ಇದ್ರಲ್ಲಿ 1862ರ ವಿಕ್ಟೋರಿಯಾ ರಾಣಿ ಹೆಸರಿರುವ ನಾಣ್ಯ ಸಹ ಇದ್ದೂ, ಕೆಲ ಬೆಳ್ಳಿ ನಾಣ್ಯಗಳ ಸಂಗ್ರಹವೂ ಇದೆ. ನಮ್ಮ ದೇಶದಲ್ಲದೆ ವಿದೇಶಿ ನಾಣ್ಯಗಳ ಸಂಗ್ರಹವೂ ಅವರ ಬಳಿಯಿದೆ.

ಅಗರ್ವಾಲ್ ಬಳಿ ಬರೀ ನಾಣ್ಯಗಳಷ್ಟೇ ಅಲ್ಲ, ದಶಕದ ಹಿಂದಿನ ಅಂಚೆ ಚೀಟಿಗಳಿವೆ. 1800ರ ಇಸವಿಯ ಅಂಚೆ ಚೀಟಿಗಳ ಸಂಗ್ರಹವೂ ಇದೆ. ಇಂಡಿಯನ್ ಪೋಸ್ಟ್ ಮತ್ತು ಟೆಲಿಗ್ರಾಫ್ ಇಲಾಖೆ ಹೊರಡಿಸಿದ್ದ ರಾಮಾಯಣ ಚೀಟಿಯಿಂದ ಹಿಡಿದು ಈಗಿನವರೆಗಿನ ವಿಶೇಷ ಅಂಚೆ ಚೀಟಿಗಳ ಸಂಗ್ರಹವಿದೆ. ಅಲ್ಲದೆ ವಿವಿಧ ಮಹಾಪುರುಷರ ಜನ್ಮದಿನದ ಅಂಗವಾಗಿ ಸರ್ಕಾರ ಹೊರ ತಂದಿದ್ದ ಚೀಟಿಗಳನ್ನು ಇವರು ಸಂಗ್ರಹಿಸಿ, ಅವುಗಳ ಸಂರಕ್ಷಣೆ ಮಾಡಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.