ETV Bharat / bharat

ಗಲ್ಲು ಶಿಕ್ಷೆಗೆ ಗುರಿಯಾದ ಶಬ್ನಮ್​​ರನ್ನು ರಾಂಪುರ್ ಜೈಲಿನಿಂದ ಬರೇಲಿ ಜೈಲಿಗೆ ಸ್ಥಳಾಂತರ: ಕಾರಣ

author img

By

Published : Mar 3, 2021, 11:38 AM IST

ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬಳನ್ನು ಗಲ್ಲಿಗೇರಿಸಲಾಗುತ್ತಿದ್ದು, ಆಕೆಯನ್ನು ರಾಂಪುರ್ ಜೈಲಿನಿಂದ ಬರೇಲಿ ಜೈಲಿಗೆ ಸ್ಥಳಾಂತರಿಸಲಾಗಿದೆ.

Shabnam
ಶಬ್ನಮ್

ಬರೇಲಿ (ಉತ್ತರ ಪ್ರದೇಶ): ತನ್ನ ಕುಟುಂಬದ ಏಳು ಸದಸ್ಯರನ್ನು ಕೊಂದಿದ್ದಕ್ಕಾಗಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಉತ್ತರಪ್ರದೇಶ ಅಮರೋಹಿ ಜಿಲ್ಲೆಯ ಶಬ್ನಮ್ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅವರನ್ನು ರಾಂಪುರ್ ಜೈಲಿನಿಂದ ಬರೇಲಿ ಜೈಲಿಗೆ ಸ್ಥಳಾಂತರಿಸಲಾಗಿದೆ.

ಜೈಲಿನ ಅಧಿಕಾರಿಗಳು ತಮ್ಮ ಫೋನ್​ನಲ್ಲಿ ಫೋಟೋಗಳನ್ನು ಕ್ಲಿಕ್ ಮಾಡಿ, ಅವುಗಳನ್ನು ಪ್ರಸಾರ ಮಾಡಿದ್ದಾರೆ ಎಂದು ಜೈಲಿನ ಅಧಿಕಾರಿಗಳು ಕಂಡುಕೊಂಡ ನಂತರ ರಾಂಪುರ್ ಜೈಲಿನ ಇಬ್ಬರು ಗಾರ್ಡ್‌ಗಳನ್ನು ಸಹ ಅಮಾನತುಗೊಳಿಸಲಾಗಿದೆ.

ಈ ವರ್ಷ ಜನವರಿ 26 ರಂದು ಜೈಲು ಆವರಣದೊಳಗೆ ಚಿತ್ರಗಳನ್ನು ತೆಗೆಯಲಾಗಿದೆ ಎಂದು ಜೈಲು ಆಡಳಿತ ಅಧಿಕಾರಿಗಳು ತಿಳಿಸಿದ್ದಾರೆ. "ಇದು ಭದ್ರತೆಯ ಉಲ್ಲಂಘನೆ ಮತ್ತು ಜೈಲು ಕೈಪಿಡಿಯ ಉಲ್ಲಂಘನೆಯಾಗಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅದೇ ಜೈಲಿನ ಇನ್ನೊಬ್ಬ ಕೈದಿಯನ್ನು (ಫೋಟೋಗಳಲ್ಲಿ ಕಾಣಿಸಿಕೊಂಡಿದ್ದ) ಅವರನ್ನು ಸಹ ಬರೇಲಿ ಜೈಲಿಗೆ ಸ್ಥಳಾಂತರಿಸಲಾಗಿದೆ.

ಇದನ್ನು ಓದಿ: ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಗೆ ಗಲ್ಲು.. ಯಾರು ಈ ಶಬ್ನಮ್​!? ಏನು ಆಕೆ ಎಸಗಿದ ಅಪರಾಧ!?

ರಾಂಪುರ ಜೈಲು ಅಧೀಕ್ಷಕ ಪಿ.ಡಿ. ಸಲೋನಿಯಾ, "ರಾಂಪುರ್ ಜಿಲ್ಲಾಡಳಿತವು ಎರಡೂ ಅಪರಾಧಿಗಳನ್ನು ಬರೇಲಿ ಜಿಲ್ಲಾ ಜೈಲಿಗೆ ಸ್ಥಳಾಂತರಿಸುವ ಆದೇಶವನ್ನು ಹೊರಡಿಸಿತ್ತು. ವಿಚಾರಣೆಯಲ್ಲಿ ಪುರುಷ ಜೈಲು ಸಿಬ್ಬಂದಿ ಮತ್ತು ಜೈಲಿನಲ್ಲಿ ನಿಯೋಜಿಸಲಾದ ಮಹಿಳಾ ಸಿಬ್ಬಂದಿ ಅಪರಾಧಿಗಳ ಫೋಟೋಗಳನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ" ಎಂದರು.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬಳನ್ನು ಗಲ್ಲಿಗೇರಿಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.