ETV Bharat / bharat

ಕೊಲೆಯಾಗಿ ಏಳು ವರ್ಷದ ಬಳಿಕ ಬದುಕಿ ಬಂದ ಮಹಿಳೆ.. ತಮ್ಮ ಮೇಲಿದ್ದ ಮರ್ಡರ್​ ಕೇಸ್​ಗೆ ತಾವೇ ತನಿಖಾಧಿಕಾರಿಗಳಾದ ಆರೋಪಿಗಳು!

ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಕೊಲೆ ಆರೋಪ ಹೊತ್ತ ಆರೋಪಿಗಳಿಬ್ಬರು ತಮ್ಮ ಪ್ರಕರಣವನ್ನು ತಾವೇ ತನಿಖೆ ಮಾಡಿ ನಿರಪರಾಧಿ ಎಂದು ಸಾಬೀತು ಪಡೆಸಿರುವುದು ಬೆಳಕಿಗೆ ಬಂದಿದೆ.

Dead woman found alive  two youths of Dausa charged of murder  dead Up woman found alive in Dausa  Mathura district of Uttar Pradesh  Dausa Mehandipur police station officer  Murdered woman Aarti found alive  Murder accused Sonu Saini Gopal Singh  DNA profiling  ಕೊಲೆಯಾಗಿ ಏಳು ವರ್ಷಗಳ ಬಳಿಕ ಬದುಕಿ ಬಂದ ಮಹಿಳೆ  ಮರ್ಡರ್​ ಕೇಸ್​ನ್ನು ತಾವೇ ತನಿಖೆ ಮಾಡಿಕೊಂಡ ಆರೋಪಿ  ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ವಿಚಿತ್ರ ಘಟನೆ  ಪ್ರಕರಣವನ್ನು ತಾವೇ ತನಿಖೆ ಮಾಡಿ ನಿರಪರಾಧಿ ಎಂದು ಸಾಬೀತು  ಅಪರಿಚಿತ ಮಹಿಳೆಯ ಶವ ಪತ್ತೆ  ನನ್ನ ಮಗಳನ್ನು ಅವರಿಬ್ಬರು ಕೊಲೆ ಮಾಡಿದ್ದಾರೆ  ಜಾಮೀನಿನ ಮೇಲೆ ಹೊರ ಬಂದ ಆರೋಪಿಗಳಿಂದ ತನಿಖೆ  ಮಾರುವೇಷದಲ್ಲಿ ತೆರಳಿ ಮಹಿಳೆಯನ್ನು ಪತ್ತೆ ಹಚ್ಚಿದ ವ್ಯಕ್ತಿ  ಪ್ರಕರಣದಿಂದ ನನ್ನ ತಂದೆಯನ್ನು ಕಳೆದುಕೊಂಡಿದ್ದೇನೆ
ಕೊಲೆಯಾಗಿ ಏಳು ವರ್ಷಗಳ ಬಳಿಕ ಬದುಕಿ ಬಂದ ಮಹಿಳೆ
author img

By

Published : Dec 12, 2022, 9:53 AM IST

ದೌಸಾ (ರಾಜಸ್ಥಾನ): ಮಹಿಳೆಯೊಬ್ಬರ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ. ಏಳು ವರ್ಷಗಳ ಹಿಂದೆ ಕೊಲೆಯಾಗಿದ್ದಾರೆ ಎಂದು ನಂಬಲಾಗಿದ್ದ ಮಹಿಳೆ ಮತ್ತೆ ಬದುಕಿ ಬಂದಿದ್ದಾರೆ. ಆದ್ರೆ ಈ ಪ್ರಕರಣದ ತನಿಖೆಯನ್ನು ಆರೋಪಿಗಳೇ ಮಾಡಿದ್ದು ವಿಶೇಷವಾಗಿದ್ದು, ಈಗ ಕೊಲೆ ಆರೋಪಿಗಳಿಬ್ಬರು ನಿಟ್ಟುಸಿರು ಬಿಟ್ಟಿದ್ದಾರೆ.

ಅಪರಿಚಿತ ಮಹಿಳೆಯ ಶವ ಪತ್ತೆ: ಪೊಲೀಸರ ಪ್ರಕಾರ, ರಾಜಸ್ಥಾನದ ದೌಸಾ ಜಿಲ್ಲೆಯ ಬೈಜುಪಾದ ಪೊಲೀಸ್ ಠಾಣೆ ವ್ಯಾಪ್ತಿಯ ವಿಶಾಲಾ ಗ್ರಾಮದಲ್ಲಿ ಆರತಿ ಎಂಬ ಮಹಿಳೆ ತನ್ನ ಪತಿಯೊಂದಿಗೆ ವಾಸಿಸುತ್ತಿದ್ದಾರೆ. 2015ರಲ್ಲಿ ಆರತಿ ನಾಪತ್ತೆಯಾಗಿದ್ದರು. ಈ ಮಧ್ಯೆ ವೃಂದಾವನದ ನಾಗ್ಲಾ ಜಿಂಗಾ ಕಾಲುವೆಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಶವವನ್ನು ಗುರುತಿಸಲು ಸಾಧ್ಯವಾಗದ ಕಾರಣ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಿದರು.

‘ನನ್ನ ಮಗಳನ್ನು ಅವರಿಬ್ಬರು ಕೊಲೆ ಮಾಡಿದ್ದಾರೆ’: ಅಂತ್ಯಕ್ರಿಯೆ ನಡೆಸಿ ಕೆಲವು ದಿನಗಳ ನಂತರ ಆರತಿಯ ತಂದೆ ವೃಂದಾವನ ಪೊಲೀಸ್​ ಠಾಣೆಗೆ ತೆರಳಿದ್ದಾರೆ. ಸಾವನ್ನಪ್ಪಿರುವುದು ನನ್ನ ಮಗಳು ಆರತಿ. ನನ್ನ ಮಗಳು ದೌಸಾದ ಸೋನು ಸೈನಿಯೊಂದಿಗೆ ಓಡಿಹೋಗಿ ಮದುವೆಯಾಗಿದ್ದಾಳೆ. ಬಳಿಕ ಆಕೆಯನ್ನು ಸೈನಿ ಮತ್ತು ಉದಯಪುರದ ನಿವಾಸಿ ಗೋಪಾಲ್ ಸಿಂಗ್ ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದರು. ಆರತಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಸೋನು ಸೈನಿ ಮತ್ತು ಆತನ ಸ್ನೇಹಿತ ಗೋಪಾಲ್ ಸಿಂಗ್ ಅವರನ್ನು ಬಂಧಿಸಿ ಜೈಲಿಗೆ ತಳ್ಳಿದ್ದರು.

ಜಾಮೀನಿನ ಮೇಲೆ ಹೊರ ಬಂದ ಆರೋಪಿಗಳಿಂದ ತನಿಖೆ: ಆರೋಪಿ ಸೋನು ಸೈನಿ ಪ್ರಕಾರ, ನಾವು ಜಾಮೀನಿನ ಮೇಲೆ ಜೈಲಿನಿಂದ ಹೊರಬರುತ್ತಿದ್ದಂತೆ ಆರತಿಯನ್ನು ಹುಡುಕಲು ಪ್ರಾರಂಭಿಸಿದ್ದೆವು. ನಾನು ಆರತಿ ತಂಗಿದ್ದ ಹಳ್ಳಿಗೆ ಸೇರಿದ ಒಬ್ಬ ವ್ಯಕ್ತಿಯನ್ನು ಭೇಟಿಯಾದೆ. ಆತ ನೀಡಿದ ಮಾಹಿತಿಗಳನ್ನು ಬೆನ್ನತ್ತಿ ಹೋದಾಗ ಆರತಿ ಝಾನ್ಸಿ ಬಳಿಯ ಓರೈ ಎಂಬ ಗ್ರಾಮದಲ್ಲಿ ತಂಗಿದ್ದಾಳೆ ಎಂಬುದು ತಿಳಿಯಿತು ಎಂದು ಕೊಲೆ ಆರೋಪ ಹೊತ್ತ ಸೈನಿ ಹೇಳಿದರು.

ಮಾರುವೇಷದಲ್ಲಿ ತೆರಳಿ ಮಹಿಳೆಯನ್ನು ಪತ್ತೆ ಹಚ್ಚಿದ ವ್ಯಕ್ತಿ: ನಾನು ತರಕಾರಿ ಮಾರಾಟಗಾರನಂತೆ ನಟಿಸುತ್ತ ಮತ್ತು ಒಂಟೆ ಖರೀದಿಸುವವನಾಗಿ ಮಾರುವೇಷ ಹಾಕಿ ಆರತಿ ಇರುವ ಗ್ರಾಮಕ್ಕೆ ಭೇಟಿ ನೀಡಿದ್ದೆ. ಬಳಿಕ ನಾನು ಆರತಿಯನ್ನು ಗುರುತಿಸುವಲ್ಲಿ ಯಶಸ್ವಿಯಾದೆ. ಅವಳು ಆರತಿ ಎಂದು ಖಚಿತಪಡಿಸಿಕೊಂಡ ನಂತರ ನಾನು ಮೆಹಂದಿಪುರ ಪೊಲೀಸರನ್ನು ಸಂಪರ್ಕಿಸಿದೆ. ಅವರು ಯುಪಿ ಪೊಲೀಸರನ್ನು ಸಂಪರ್ಕಿಸಿ ಮಹಿಳೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಆಕೆಯ ಗುರುತನ್ನು ಸಾಬೀತುಪಡಿಸಲು ಪೊಲೀಸರು ಡಿಎನ್‌ಎ ಪ್ರೊಫೈಲಿಂಗ್ ಮಾಡಲು ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ.

ಆರತಿಯ ತಂದೆ ಹಾಕಿದ್ದ ಕೊಲೆ ಪ್ರಕರಣ ಹುಸಿಯಾಗಿದ್ದು, ಆಕೆ ಬದುಕಿರುವುದು ಪತ್ತೆಯಾಗಿದೆ. ಕುತೂಹಲಕಾರಿ ವಿಷಯವೆನೇಂದ್ರೆ, ಆರತಿ ಇಷ್ಟು ವರ್ಷಗಳ ಕಾಲ ತನ್ನ ಹೆತ್ತವರೊಂದಿಗೆ ಸಂಪರ್ಕದಲ್ಲಿದ್ದಳು. ಅಷ್ಟೇ ಅಲ್ಲ, ಸುನೀಲ್ ಮತ್ತು ಗೋಪಾಲ್ ತಮ್ಮ ವಿರುದ್ಧದ ಕೊಲೆ ಪ್ರಕರಣದಲ್ಲಿ ಜೈಲಿವಾಸ ಅನುಭವಿಸುತ್ತಿರುವ ಸಂಗತಿಯ ಬಗ್ಗೆ ಚೆನ್ನಾಗಿ ತಿಳಿದಿದ್ದಳು. ಈ ಘಟನೆ ಕುರಿತು ಪೊಲೀಸರು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.

‘ಈ ಪ್ರಕರಣದಿಂದ ನನ್ನ ತಂದೆಯನ್ನು ಕಳೆದುಕೊಂಡಿದ್ದೇನೆ’: ನನ್ನ ಬಂಧನದ ಆಘಾತವನ್ನು ತಾಳಲಾರದೆ ನನ್ನ ತಂದೆ ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲ, ಈ ಪ್ರಕರಣದಿಂದಾಗಿ ನಾನು 20 ಲಕ್ಷ ರೂಪಾಯಿ ಸಾಲದಲ್ಲಿದ್ದೇನೆ. ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ ಎಂದು ಸೋನು ಸೈನಿ ಕಣ್ಣೀರು ಹಾಕಿದ್ದಾನೆ.

ಓದಿ: ಮಧ್ಯರಾತ್ರಿ ಪ್ರಿಯತಮೆಯ ಮನೆಗೆ ಬಂದ ಪ್ರೇಮಿ.. ಯುವತಿ ಮನೆಯವರು ಬೆನ್ನಟ್ಟಿದಾಗ ಬಾವಿಗೆ ಹಾರಿದ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.