ETV Bharat / bharat

ಹಿಮಾಚಲದಲ್ಲಿ ನೆಕ್​​ ಟು ನೆಕ್​ ಫೈಟ್​... ಫೋಟೋ ಫಿನಿಶ್​​ ಫಲಿತಾಂಶದ ರೋಚಕ ಕ್ಷಣಗಳು ಹೀಗಿತ್ತು! - 13 ಕ್ಷೇತ್ರಗಳಲ್ಲಿ ಫೋಟೋ ಫಿನಿಶ್ ಫಲಿತಾಂಶ

ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ. ಕಾಂಗ್ರೆಸ್ 40 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ 25 ಸ್ಥಾನಗಳನ್ನು ಪಡೆದುಕೊಂಡಿದೆ. ಮೂರು ಸ್ಥಾನಗಳು ಇತರರ ಪಾಲಾಗಿವೆ. ಬಿಜೆಪಿಯ ಮೂವರು ಬಂಡಾಯ ಅಭ್ಯರ್ಥಿಗಳು ಜಯಗಳಿಸಿದ್ದು, ಕೆಲವು ಕ್ಷೇತ್ರಗಳಲ್ಲಿ ಸಮಬಲದ ಹೋರಾಟ ನಡೆದಿದೆ. ಕೆಲವು ಕ್ಷೇತ್ರಗಳಲ್ಲಿ ಮತಗಳ ಅಂತರ ಕೇವಲ ಎರಡಂಕಿಗೆ ಕುಸಿದಿದೆ.

Dead heats in Himachal where Congress managed a win
ಹಿಮಾಚಲದಲ್ಲಿ ನೆಕ್​​ ಟು ನೆಕ್​ ಫೈಟ್​... ಫೋಟೋ ಫಿನಿಶ್​​ ಪಲಿತಾಂಶದ ರೋಚಕ ಕ್ಷಣಗಳು ಹೀಗಿತ್ತು!
author img

By

Published : Dec 9, 2022, 7:49 AM IST

Updated : Dec 9, 2022, 8:56 AM IST

ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಕಾಂಗ್ರೆಸ್ 40 ವಿಧಾನಸಭಾ ಕ್ಷೇತ್ರಗಳಲ್ಲಿ ಜಯಗಳಿಸಿದ್ದು, ಬಿಜೆಪಿ 25 ಸ್ಥಾನಗಳನ್ನಷ್ಟೇ ಗಳಿಸಿದೆ. ಇತರರು ಮೂರು ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ಎಎಪಿ ಹಿಮಾಚಲದಲ್ಲಿ ಮಕಾಡೆ ಮಲಗಿದೆ. ಕೆಲವು ಅಭ್ಯರ್ಥಿಗಳು ತಮ್ಮ ಎದುರಾಳಿಗಳ ವಿರುದ್ಧ ಕಠಿಣ ಹೋರಾಟ ನಡೆಸಿ ಗೆಲುವು ಪಡೆದಿದ್ದಾರೆ.

ಕೆಲವು ಕ್ಷೇತ್ರಗಳಲ್ಲಿ ಸೋಲು-ಗೆಲುವಿನ ಅಂತರ ಎರಡಂಕಿಗೆ ಸಿಮೀತವಾಗಿದೆ . 13 ಕ್ಷೇತ್ರಗಳಲ್ಲಿ ಫೋಟೋ ಫಿನಿಶ್ ಫಲಿತಾಂಶ ಬಂದಿದೆ. ಅವುಗಳ ವಿವರ ಇಂತಿದೆ.

  1. ಭೋರಂಜ್ ನಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಸುರೇಶ್ ಕುಮಾರ್ 24,779 ಮತಗಳನ್ನು ಪಡೆದು ಬಿಜೆಪಿಯ ಡಾ. ಅನಿಲ್ ನಿಗಮ್ ಅವರನ್ನು ಕೇವಲ 60 ಮತಗಳ ಅಂತರದಿಂದ ಸೋಲಿಸಿದ್ದಾರೆ. 2017ರಲ್ಲಿ ಸುರೇಶ್ ಬಿಜೆಪಿಯ ಕಮಲೇಶ್ ಕುಮಾರಿ ಯಾದವ್ ವಿರುದ್ಧ ಸೋತಿದ್ದರು ಎಂಬುದು ಗಮನಾರ್ಹ.
  2. ಶ್ರೀ ನೈನಾ ದೇವಿಜಿ ಕ್ಷೇತ್ರದಿಂದ ಬಿಜೆಪಿಯ ರಣಧೀರ್ ಶರ್ಮಾ ಅವರು ಕಾಂಗ್ರೆಸ್ ರಾಮ್ ಲಾಲ್ ಠಾಕೂರ್ ಅವರನ್ನು ಕೇವಲ 171 ಮತಗಳ ಅಂತರದಿಂದ ಸೋಲಿಸಿದರು. ಶರ್ಮಾ 29,403 ಮತಗಳನ್ನು ಪಡೆದಿದ್ದರು. ರಾಮ್ ಲಾಲ್ ಠಾಕೂರ್ ಅವರು 2017 ರಲ್ಲಿ ಸ್ಥಾನವನ್ನು ಗೆದ್ದಿದ್ದರು.
  3. 'ಬಿಲಾಸ್‌ಪುರ'ದಿಂದ ಸ್ಪರ್ಧಿಸಿದ್ದ ಬಿಜೆಪಿಯ ತ್ರಿಲೋಕ್ ಜಮ್ವಾಲ್ 30988 ಮತಗಳನ್ನು ಗಳಿಸಿದ್ದಲ್ಲದೇ ಕಾಂಗ್ರೆಸ್​​ನ ಬಂಬರ್ ಠಾಕೂರ್ ಅವರನ್ನು 276 ಮತಗಳ ಅಂತರದಿಂದ ಸೋಲಿಸಿದರು. 2017ರಲ್ಲಿ ಬಿಜೆಪಿಯ ಸುಭಾಷ್‌ ಠಾಕೂರ್‌ ಗೆದ್ದಿದ್ದರು.
  4. ಕಾಂಗ್ರೆಸ್‌ನ ಹಾಲಿ ಶಾಸಕ ಹರ್ಷವರ್ಧನ್ ಚೌಹಾಣ್ 32,093 ಮತಗಳನ್ನು ಪಡೆದು ಬಿಜೆಪಿಯ ಬಲದೇವ್ ಸಿಂಗ್ ಅವರನ್ನು 382 ಮತಗಳ ಅಂತರದಿಂದ ಸೋಲಿಸಿದ್ದಾರೆ.
  5. ಸುಜಾನ್‌ಪುರದಿಂದ ಕಾಂಗ್ರೆಸ್‌ನ ಹಾಲಿ ಶಾಸಕ ರಾಜಿಂದರ್ ಸಿಂಗ್ ರಾಣಾ ಅವರು 27,679 ಮತಗಳನ್ನು ಪಡೆದು ಬಿಜೆಪಿಯ ರಂಜಿತ್ ಸಿಂಗ್ ರಾಣಾ ಅವರನ್ನು 399 ಮತಗಳ ಅಂತರದಿಂದ ಸೋಲಿಸಿದ್ದಾರೆ.
  6. ರಾಂಪುರದಿಂದ ಕಾಂಗ್ರೆಸ್ ನ ಹಾಲಿ ಶಾಸಕ ನಂದ್ ಲಾಲ್ 28397 ಮತಗಳನ್ನು ಪಡೆದು ಬಿಜೆಪಿಯ ಕೌಲ್ ಸಿಂಗ್ ಅವರನ್ನು 567 ಮತಗಳ ಅಂತರದಿಂದ ಸೋಲಿಸಿದ್ದಾರೆ.
  7. ಬಿಜೆಪಿಯ ಪುರಾನ್ ಚಂದ್ ಅವರು ದರಂಗ್‌ನಿಂದ ಸ್ಪರ್ಧಿಸಿ 36572 ಮತಗಳನ್ನು ಪಡೆದು, ಕಾಂಗ್ರೆಸ್ ಕೌಲ್ ಸಿಂಗ್ ಅವರನ್ನು 618 ಮತಗಳ ಅಂತರದಿಂದ ಸೋಲಿಸಿದರು.
  8. ಶ್ರೀ ರೇಣುಕಾಜಿಯ ಕಾಂಗ್ರೆಸ್ ವಿನಯ್ ಕುಮಾರ್ ಅವರು ಬಿಜೆಪಿಯ ನರೈನ್ ಸಿಂಗ್ ಅವರನ್ನು ಜಸ್ಟ್​ 860 ಮತಗಳ ಅಂತರದಿಂದ ಸೋಲಿಸಿದರು. ಕುಮಾರ್ 28642 ಮತಗಳನ್ನು ಪಡೆದಿದ್ದಾರೆ.
  9. ಬಾಲ್ಹ್ ನಿಂದ ಸ್ಪರ್ಧಿಸಿದ್ದ ಬಿಜೆಪಿಯ ಇಂದರ್ ಸಿಂಗ್ 31792 ಮತಗಳನ್ನು ಪಡೆದು ಕಾಂಗ್ರೆಸ್ ಪ್ರಕಾಶ್ ಚೌಧರಿ ಅವರನ್ನು 1307 ಮತಗಳ ಅಂತರದಿಂದ ಸೋಲಿಸಿದ್ದಾರೆ.
  10. 'ಭಟ್ಟಿಯತ್' ನಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಕುಲದೀಪ್ ಸಿಂಗ್ ಪಠಾನಿಯಾ ಅವರು 25989 ಮತಗಳನ್ನು ಪಡೆದು ಬಿಜೆಪಿಯ ಬಿಕ್ರಮ್ ಸಿಂಗ್ ಅವರನ್ನು 1567 ಮತಗಳ ಅಂತರದಿಂದ ಸೋಲಿಸಿದ್ದಾರೆ.
  11. ಲಾಹೌಲ್ ಮತ್ತು ಸ್ಪಿತಿಯಿಂದ ಕಾಂಗ್ರೆಸ್ ರವಿ ಠಾಕೂರ್ ಅವರು 9948 ಮತಗಳನ್ನು ಪಡೆದಿದ್ದು, ಬಿಜೆಪಿಯ ರಾಮ್ ಲಾಲ್ ಮಾರ್ಕಂಡ ಅವರನ್ನು 1616 ಮತಗಳ ಅಂತರದಿಂದ ಸೋಲಿಸಿದರು. ಈ ಹಿಂದೆ ಬಿಜೆಪಿಯ ಜವಾಹರ್ ಠಾಕೂರ್ ಈ ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು.
  12. ನಹಾನ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಜಯ್ ಸೋಲಂಕಿ 35291 ಮತಗಳನ್ನು ಪಡೆದು ಬಿಜೆಪಿಯ ಡಾ.ರಾಜೀವ್ ಬಿಂದಾಲ್ ಅವರನ್ನು 1639 ಮತಗಳಿಂದ ಸೋಲಿಸಿದ್ದಾರೆ.
  13. ಜಸ್ವಾನ್ ಪ್ರಾಗ್‌ಪುರದಿಂದ ಬಿಜೆಪಿಯ ಬಿಕ್ರಮ್ ಸಿಂಗ್ 22658 ಮತಗಳನ್ನು ಪಡೆದು ಕಾಂಗ್ರೆಸ್ ಸುರೀಂದರ್ ಸಿಂಗ್ ಮಂಕೋಟಿಯಾ ಅವರನ್ನು 1789 ಮತಗಳ ಅಂತರದಿಂದ ಸೋಲಿಸಿದ್ದಾರೆ. 68 ಸದಸ್ಯ ಬಲದ ಹಿಮಾಚಲ ಪ್ರದೇಶ ವಿಧಾನಸಭೆಗೆ ನವೆಂಬರ್ 12 ರಂದು ಮತದಾನ ನಡೆದಿತ್ತು.

ಇದನ್ನು ಓದಿ: ಪ್ರಜಾಪ್ರಭುತ್ವದಲ್ಲಿ ಸೋಲು, ಗೆಲುವು ಶಾಶ್ವತವಲ್ಲ: ಕಾಂಗ್ರೆಸ್​ ಅಧ್ಯಕ್ಷ ಖರ್ಗೆ

Last Updated : Dec 9, 2022, 8:56 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.