ETV Bharat / bharat

ಚರಂಡಿಯಲ್ಲಿದ್ದ ಸೂಟ್‌ಕೇಸ್​ ತೆರೆದಾಗ ಕಾದಿತ್ತು ಶಾಕ್​.. ಅದರಲ್ಲಿತ್ತು ಅಪರಿಚಿತ ಮಹಿಳೆಯ ಶವ!

author img

By

Published : Dec 8, 2022, 12:18 PM IST

ರಾಜೌರಿ ಗಾರ್ಡನ್‌ನಿಂದ ಪಂಜಾಬಿ ಬಾಗ್ ಕಡೆಗೆ ಹೋಗುವ ರಿಂಗ್ ರಸ್ತೆಯ ಬಳಿ ಸೂಟ್‌ಕೇಸ್ ಬಿದ್ದಿರುವ ಬಗ್ಗೆ ದಾರಿಹೋಕ ಗಮನಿಸಿ ಪಿಸಿಆರ್‌ಗೆ ಮಾಹಿತಿ ನೀಡಿದ್ದನು. ನಂತರ ಪಂಜಾಬಿ ಬಾಗ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಸೂಟ್‌ಕೇಸ್​ನ್ನು ತೆರೆದಾಗ ಅದರಲ್ಲಿ ಮಹಿಳೆಯ ಶವ ಕಂಡು ಬೆಚ್ಚಿಬಿದ್ದ ಪೊಲೀಸರು ಅಪರಾಧ ವಿಭಾಗದ ತಂಡವನ್ನೂ ಕರೆಸಿ ತನಿಖೆ ಆರಂಭಿಸಿದ್ದಾರೆ.

Dead body of woman found in suitcase in Punjabi Bagh
ಚರಂಡಿಯಲ್ಲಿ ಸೂಟ್‌ಕೇಸ್​ಲ್ಲಿ ತುಂಬಿದ್ದ ಮಹಿಳೆಯ ಶವ ಪತ್ತೆ

ನವದೆಹಲಿ: ಪಶ್ಚಿಮ ದೆಹಲಿಯ ಪಂಜಾಬಿ ಬಾಗ್‌ ಪ್ರದೇಶದ ರಿಂಗ್ ರೋಡ್ ಬಳಿಯ ಚರಂಡಿಯಲ್ಲಿ ಅನುಮಾನಾಸ್ಪದ ಸೂಟ್‌ಕೇಸ್‌ ಕಾಣಿಸಿಕೊಂಡಿದ್ದು, ಸೂಟ್‌ಕೇಸ್​ನಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಚರಂಡಿಯು ವಾಸ್ತವವಾಗಿ ನಜಾಫ್‌ಗಢ ಚರಂಡಿಯ ಒಂದು ಭಾಗವಾಗಿದ್ದು, ಈ ಮೃತದೇಹ ತುಂಬಿದ್ದ ಸೂಟ್‌ಕೇಸ್‌ ಬುಧವಾರ ಸಂಜೆ ಪತ್ತೆಯಾಗಿದೆ.

ರಾಜೌರಿ ಗಾರ್ಡನ್‌ನಿಂದ ಪಂಜಾಬಿ ಬಾಗ್ ಕಡೆಗೆ ಹೋಗುವ ರಿಂಗ್ ರಸ್ತೆಯ ಬಳಿ ಸೂಟ್‌ಕೇಸ್ ಬಿದ್ದಿರುವ ಬಗ್ಗೆ ದಾರಿಹೋಕರೊಬ್ಬರು ಗಮನಿಸಿ ಪಿಸಿಆರ್‌ಗೆ ಮಾಹಿತಿ ನೀಡಿದ್ದನು. ನಂತರ ಪಂಜಾಬಿ ಬಾಗ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಸೂಟ್‌ಕೇಸ್​ನ್ನು ತೆರೆದಾಗ ಅದರಲ್ಲಿ ಮಹಿಳೆಯ ಶವ ಕಂಡು ಬೆಚ್ಚಿಬಿದ್ದ ಪೊಲೀಸರು ಅಪರಾಧ ವಿಭಾಗದ ತಂಡವನ್ನೂ ಕರೆಸಿ ತನಿಖೆ ಆರಂಭಿಸಿದ್ದಾರೆ.

ಮೃತದೇಹದ ಸ್ಥಿತಿ ನೋಡಿದ ಪೊಲೀಸರು ಶವ ಗುರುತು ಸಿಗದ ರೀತಿಯಲ್ಲಿ ಇದೆ. ಕೊಲೆಯಾಗಿ 8ರಿಂದ 10 ದಿನ ಆಗಿರಬಹುದೆಂದು ತಿಳಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಮಹಿಳೆಯನ್ನು ಬೇರೆಡೆ ಕೊಲೆ ಮಾಡಿ ಶವವನ್ನು ನಜಾಫ್‌ಗಢ ಚರಂಡಿಯಲ್ಲಿ ಎಸೆಯಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಈ ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಗನ್​ಮ್ಯಾನ್​ ಜೊತೆಗಿದ್ದರೂ ಗುಂಡಿಕ್ಕಿ ಜವಳಿ ಉದ್ಯಮಿ ಹತ್ಯೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.