ನವದೆಹಲಿ: ದೆಹಲಿಯ ತೀಸ್ ಹಜಾರಿ ನ್ಯಾಯಾಲಯದ (Tis Hazari court) ಕೊಠಡಿ ಸಂಖ್ಯೆ 192ರಲ್ಲಿ ಮೃತದೇಹವೊಂದು ಪತ್ತೆಯಾಗಿದೆ. ಮೃತನನ್ನು ದೆಹಲಿ ಬಾರ್ ಅಸೋಸಿಯೇಶನ್‌ನ (Delhi Bar Association employee) ನೌಕರ ಮನೋಜ್ (30) ಎಂದು ಗುರುತಿಸಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಮೃತದೇಹದ ಮೇಲೆ ಯಾವುದೇ ಗಾಯಗಳು ಕಂಡುಬಂದಿಲ್ಲ. ಮನೋಜ್ ಟಿಬಿ ರೋಗಿಯಾಗಿದ್ದು, ದೀರ್ಘಕಾಲದಿಂದ ಮದ್ಯವ್ಯಸನಿಯಾಗಿದ್ದ. ಕೊಠಡಿಯ ಡಸ್ಟ್‌ಬಿನ್‌ನಲ್ಲಿ ರಕ್ತ ವಾಂತಿ ಕಂಡುಬಂದಿದೆ. ಸಾವಿನ ನಿಖರ ಕಾರಣಕ್ಕಾಗಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕುಡಿದು ಕಾರು ಚಲಾಯಿಸಿದ್ದೇ ತಪ್ಪು; ಕಾರಲ್ಲಿ ಚಿನ್ನವಿರುವುದಾಗಿ ಹೇಳಿ ಪೊಲೀಸರನ್ನೇ ಯಾಮಾರಿಸಿದ!
ಮನೋಜ್ ಆಗಾಗ ನ್ಯಾಯಾಲಯದ ಕೊಠಡಿಯಲ್ಲೇ ರಾತ್ರಿ ಕಳೆಯುತ್ತಿದ್ದರು ಎಂದು ಹೇಳಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.