ಬಿಹಾರ: ಇಲ್ಲಿನ ಪಶ್ಚಿಮ ಚಂಪಾರಣ್ ಜಿಲ್ಲೆಯ ಗೋಪಾಲಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಚಿತ್ರ ಘಟನೆ ನಡೆದಿದೆ. ಭೂ ವಿವಾದದ ಸಂಘರ್ಷದಲ್ಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದ ವ್ಯಕ್ತಿಯ ಶವವನ್ನು ಆತನ ವಿರೋಧಿ ಗುಂಪಿನವರ ಮನೆಮುಂದೆ ಸುಟ್ಟು ಹಾಕಲಾಗಿದೆ.
ಘಟನೆಯ ವಿವರ
ಭೂ ವಿವಾದದ ಜಗಳದಲ್ಲಿ 62 ವರ್ಷದ ಚಂಚಲ್ ಮಹತೋ ಎಂಬ ವ್ಯಕ್ತಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ವೃದ್ಧನ ಸಾವಿನಿಂದ ಕೋಪಗೊಂಡ ಸಂಬಂಧಿಕರು ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಆರೋಪಿಗಳ ಮನೆಗೆ ತೆಗೆದುಕೊಂಡು ಹೋಗಿ ಅವರ ಮನೆ ಬಾಗಿಲಿನ ಮುಂದೆ ಸುಟ್ಟು ಹಾಕಿದ್ದಾರೆ. ಈ ಸಮಯದಲ್ಲಿ ಪೊಲೀಸರು ಕೂಡ ಸ್ಥಳದಲ್ಲಿದ್ದು ಏನೂ ಕ್ರಮ ತೆಗೆದುಕೊಳ್ಳಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಈ ಘಟನೆ ಗೋಪಾಲಪುರ ಪೊಲೀಸ್ ಠಾಣೆ ವ್ಯಾಪ್ತಿಯ ದಕ್ಷಿಣ ಘೋಘ ಪಂಚಾಯತ್‌ನ ಮಹಾಚಿ ಎಂಬ ಹಳ್ಳಿಯಲ್ಲಿ ನಡೆದಿದೆ. ಜುಲೈ 19 ರಂದು ಭೂ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿತ್ತು. ಮೃತ ವೃದ್ಧ ವ್ಯಕ್ತಿ ಹೊಲದಲ್ಲಿ ಮಲಗಿದ್ದಾಗ ಲಾಲನ್ ಶರ್ಮಾ, ರಮೇಶ್ ಕುಮಾರ್, ವಿಕಾಸ್ ಕುಮಾರ್ ಸೇರಿದಂತೆ ಐವರು ಜನರು ದಾಳಿ ಮಾಡಿ ಹಲ್ಲೆ ನಡೆಸಿದ್ದರು.
ಇದನ್ನೂ ಓದಿ : ಓರ್ವ ಪಾಕಿಸ್ತಾನಿ ಉಗ್ರ ಸೇರಿ ಮೂವರನ್ನು ಸದೆಬಡಿದ ಭಾರತೀಯ ಸೇನಾಪಡೆ