ನವದೆಹಲಿ: ಓರ್ವ ಪುರುಷ ಹಾಗೂ ಮಹಿಳೆಯ ಜೋಡಿ ಮೃತದೇಹಗಳು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ರಾಷ್ಟ್ರೀಯ ರಾಜಧಾನಿ ದೆಹಲಿಯ ಹೋಟೆಲ್ವೊಂದರಲ್ಲಿ ನಡೆದಿದೆ. ಸ್ಥಳದಲ್ಲಿ ಡೆತ್ನೋಟ್ ಪತ್ತೆಯಾಗಿದ್ದು, ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಹಾಗೂ ಒಟ್ಟಿಗೆ ತಮ್ಮ ಜೀವನ ಕೊನೆಗೊಳಿಸಲು ನಿರ್ಧರಿಸಿದ್ದರು ಎಂಬುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
-
#WATCH दिल्ली: DCP उत्तर पूर्व जॉय टिर्की ने कहा, "हमें रात 8.05 बजे घटना की सूचना मिली। पुलिस मौके पर पहुंची...लड़के का शव पंखे से लटका हुआ पाया गया और लड़की का शव बिस्तर पर पड़ा था। एक सुसाइड नोट मिला है जिसमें लिखा है कि वे दोनों एक दूसरे से प्यार करते हैं और आत्महत्या कर रहे… https://t.co/RXgRc9YpOS pic.twitter.com/A7GhTTpuYp
— ANI_HindiNews (@AHindinews) October 27, 2023 " class="align-text-top noRightClick twitterSection" data="
">#WATCH दिल्ली: DCP उत्तर पूर्व जॉय टिर्की ने कहा, "हमें रात 8.05 बजे घटना की सूचना मिली। पुलिस मौके पर पहुंची...लड़के का शव पंखे से लटका हुआ पाया गया और लड़की का शव बिस्तर पर पड़ा था। एक सुसाइड नोट मिला है जिसमें लिखा है कि वे दोनों एक दूसरे से प्यार करते हैं और आत्महत्या कर रहे… https://t.co/RXgRc9YpOS pic.twitter.com/A7GhTTpuYp
— ANI_HindiNews (@AHindinews) October 27, 2023#WATCH दिल्ली: DCP उत्तर पूर्व जॉय टिर्की ने कहा, "हमें रात 8.05 बजे घटना की सूचना मिली। पुलिस मौके पर पहुंची...लड़के का शव पंखे से लटका हुआ पाया गया और लड़की का शव बिस्तर पर पड़ा था। एक सुसाइड नोट मिला है जिसमें लिखा है कि वे दोनों एक दूसरे से प्यार करते हैं और आत्महत्या कर रहे… https://t.co/RXgRc9YpOS pic.twitter.com/A7GhTTpuYp
— ANI_HindiNews (@AHindinews) October 27, 2023
ಇಲ್ಲಿನ ಜಾಫ್ರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಮೌಜ್‌ಪುರ ಮೆಟ್ರೋ ನಿಲ್ದಾಣದ ಬಳಿಯ ಹೋಟೆಲ್ ಕೊಠಡಿಯಲ್ಲಿ ಶುಕ್ರವಾರ ರಾತ್ರಿ ಇಬ್ಬರ ಶವಗಳು ಪತ್ತೆಯಾಗಿವೆ. ಮೃತರನ್ನು ಉತ್ತರ ಪ್ರದೇಶದ ಮೀರತ್ ನಿವಾಸಿ ಸೋಹ್ರಾಬ್ (28) ಮತ್ತು ಲೋನಿ ನಿವಾಸಿ ಆಯೇಶಾ (27) ಎಂದು ಗುರುತಿಸಲಾಗಿದೆ. ಸೋಹ್ರಾಬ್ ಶವ ಸೀಲಿಂಗ್ ಫ್ಯಾನ್‌ಗೆ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾದರೆ, ಆಯೇಷಾ ಮೃತದೇಹ ಹಾಸಿಗೆಯ ಮೇಲೆ ಪತ್ತೆಯಾಗಿದೆ. ಈಕೆಯ ಕುತ್ತಿಗೆಯ ಮೇಲೆ ಕೆಲವು ಗಾಯದ ಗುರುತುಗಳಿವೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಜಾಯ್ ಟಿರ್ಕಿ ಹೇಳಿದ್ದಾರೆ.
ಮೃತಳು ಇಬ್ಬರು ಮಕ್ಕಳ ತಾಯಿ: ಆಯೇಶಾ ಶವ ಪಕ್ಕದಲ್ಲಿ ಹಾಸಿಗೆಯ ಮೇಲೆ ಅರ್ಧ ಪುಟದ ಹಿಂದಿ ಕೈಬರಹದ ಡೆತ್ನೋಟ್ ದೊರೆತಿದೆ. ಇದರ ಪ್ರಕಾರ, ಇಬ್ಬರೂ ಪ್ರೀತಿಸುತ್ತಿದ್ದರು. ಒಟ್ಟಿಗೆ ತಮ್ಮ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆಂದು ಕಂಡು ಬಂದಿದೆ. ಅಲ್ಲದೇ, ಆಯೇಶಾ 9 ವರ್ಷದ ಬಾಲಕ ಮತ್ತು 4 ವರ್ಷದ ಬಾಲಕಿಯ ತಾಯಿ ಆಗಿದ್ದಳು. ಈಕೆಯ ಪತಿ ಮೊಹಮ್ಮದ್ ಗುಲ್ಫಾಮ್ (28) ಎಂಬಾತ ಜಿಮ್ ಪ್ರೋಟೀನ್ ಪೂರಕಗಳನ್ನು ಮಾರಾಟ ಮಾಡುತ್ತಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
ಮಧ್ಯಾಹ್ನ ಚೆಕ್ ಇನ್, ರಾತ್ರಿ ಶವವಾಗಿ ಪತ್ತೆ: ಮಂದುವರೆದು ಪೊಲೀಸ್ ವಿಚಾರಣೆ ವೇಳೆ, ಸೋಹ್ರಾಬ್ ಮತ್ತು ಆಯೇಷಾ ಶುಕ್ರವಾರ ಮಧ್ಯಾಹ್ನ 1:02ರ ಸುಮಾರಿಗೆ ಹೋಟೆಲ್‌ನಲ್ಲಿ ಚೆಕ್ ಇನ್ ಆಗಿದ್ದರು. ಕೇವಲ 4 ಗಂಟೆಗಳ ಕಾಲಕ್ಕೆ ಕೊಠಡಿ ಬುಕ್ ಮಾಡಿದ್ದರು. ನಂತರ ಅವರು ಹೊರಗೆ ಬರದಿದ್ದಾಗ ಹೋಟೆಲ್ ಸಿಬ್ಬಂದಿ ರಾತ್ರಿ 7:45ರ ಸುಮಾರಿಗೆ ರೂಮ್ನ ಬಾಗಿಲು ತಟ್ಟಿದ್ದಾರೆ. ಒಳಗಡೆಯಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣ ಗಸ್ತು ಪೊಲೀಸರಿಗೆ ಹೋಟೆಲ್ ಸಿಬ್ಬಂದಿ ಕರೆ ಮಾಡಿದ್ದಾರೆ. ಬಳಿಕ ಪೊಲೀಸರ ಸಮ್ಮುಖದಲ್ಲಿ ಕೊಠಡಿ ತೆರೆಯಲಾಯಿತು ಎಂದು ಅವರು ವಿವರಿಸಿದ್ದಾರೆ.
ಕೊಠಡಿಯಲ್ಲಿ ಇಬ್ಬರು ಶವವಾಗಿ ಪತ್ತೆಯಾದ ಹಿನ್ನೆಲೆ ಸ್ಥಳಕ್ಕೆ ಕ್ರೈಂ ತಂಡ ಮತ್ತು ಎಫ್‌ಎಸ್‌ಎಲ್ ತಂಡ ಆಗಮಿಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಆಯೇಷಾ ಪತಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಅಲ್ಲದೇ, ಸೋಹ್ರಾಬ್ ಕುಟುಂಬದ ಸದಸ್ಯರನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ. ಶನಿವಾರ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗುವುದು ಡಿಸಿಪಿ ಜಾಯ್ ಟಿರ್ಕಿ ತಿಳಿಸಿದ್ದಾರೆ.
ಇದನ್ನೂ ಓದಿ: ಲಕ್ಷ್ಮಿ ಪೂಜೆ, ಹೂವು ತುಂಬುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದ ಸಿಮೆಂಟ್ ಲಾರಿ.. ಆರು ಜನರ ದಾರುಣ ಸಾವು