ETV Bharat / bharat

'ಡಿಡಿಸಿ ಚುನಾವಣೆ ಮುಫ್ತಿ & ಅಬ್ದುಲ್ಲಾ ಅವರಿಗೆ ಬೀಳ್ಕೊಡುಗೆ ಸಮಾರಂಭ' - ಮುಫ್ತಿ & ಅಬ್ದುಲ್ಲಾ ಅವರಿಗೆ ಬೀಳ್ಕೊಡುಗೆ ಸಮಾರಂಭ

2020ರ ಈ ಬಿಜೆಪಿಯಲ್ಲಿ ನಾನು ಮುಂದಿನ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯನ್ನು ನೋಡುತ್ತಿದ್ದೇನೆ. ಇಂದು ನಾನು ಅಬ್ದುಲ್ಲಾ ಮತ್ತು ಅವರ ಪುತ್ರರು ಹಾಗೂ ಮುಫ್ತಿ ಮತ್ತು ಅವರ ಪುತ್ರರಿಗೆ ಹೇಳಲು ಬಯಸುತ್ತೇನೆ. ಜಮ್ಮು ಮತ್ತು ಕಾಶ್ಮೀರ ಬದಲಾಗುತ್ತಿದೆ..

'DDC polls were farewell party for Muftis, Abdullahs
ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಉಸ್ತುವಾರಿ ತರುಣ್ ಚುಗ್
author img

By

Published : Dec 28, 2020, 7:04 AM IST

ಶ್ರೀನಗರ : ಇತ್ತೀಚೆಗೆ ನಡೆದ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಗಳು ಮುಫ್ತಿಗಳು ಮತ್ತು ಪುತ್ರರು ಮತ್ತು ಅಬ್ದುಲ್ಲಾ ಮತ್ತು ಪುತ್ರರಿಗೆ ಬೀಳ್ಕೊಡುಗೆ ಸಮಾರಂಭ ಇದ್ದಂತೆ ಎಂದು ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಉಸ್ತುವಾರಿ ತರುಣ್ ಚುಗ್ ಹೇಳಿದ್ದಾರೆ.

ಶ್ರೀನಗರದಲ್ಲಿ ಆಯೋಜಿಸಲಾಗಿದ್ದ ಕೇಂದ್ರಾಡಳಿತ ಪ್ರದೇಶದಲ್ಲಿ ಹೊಸದಾಗಿ ಚುನಾಯಿತರಾದ ಡಿಡಿಸಿ ಅಭ್ಯರ್ಥಿಗಳ ಪಂಚ್ ಮತ್ತು ಸರ್ಪಂಚ್ ಅವರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಚುಗ್, ರಾಜ್ಯದ ಬಿಜೆಪಿ ಘಟಕದಲ್ಲಿ ಜಮ್ಮು ಮತ್ತು ಕಾಶ್ಮೀರದ ಭವಿಷ್ಯದ ಮುಖ್ಯಮಂತ್ರಿಯನ್ನು ನೋಡುತ್ತಿದ್ದೇನೆ ಎಂದಿದ್ದಾರೆ.

"ನಾನು 2008ರ ಮತ್ತು 2014ರ ಬಿಜೆಪಿ ಹಾಗೂ 2020ರ ಬಿಜೆಪಿಯನ್ನೂ ಸಹ ನೋಡುತ್ತಿದ್ದೇನೆ. 2020ರ ಈ ಬಿಜೆಪಿಯಲ್ಲಿ ನಾನು ಮುಂದಿನ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯನ್ನು ನೋಡುತ್ತಿದ್ದೇನೆ. ಇಂದು ನಾನು ಅಬ್ದುಲ್ಲಾ ಮತ್ತು ಅವರ ಪುತ್ರರು ಹಾಗೂ ಮುಫ್ತಿ ಮತ್ತು ಅವರ ಪುತ್ರರಿಗೆ ಹೇಳಲು ಬಯಸುತ್ತೇನೆ. ಜಮ್ಮು ಮತ್ತು ಕಾಶ್ಮೀರ ಬದಲಾಗುತ್ತಿದೆ "ಎಂದು ಹೇಳಿದ್ದಾರೆ

"ಈ ಡಿಡಿಸಿ ಚುನಾವಣೆಯು ಅಬ್ದುಲ್ಲಾ ಮತ್ತು ಪುತ್ರರು ಹಾಗೂ ಮುಫ್ತಿ ಮತ್ತು ಅವರ ಪುತ್ರರಿಗೆ ಬೀಳ್ಕೊಡುಗೆ ಸಮಾರಂಭವಾಗಿದೆ. ಅವರ ಪಕ್ಷದ ವಿಜೇತ ಅಭ್ಯರ್ಥಿಗಳು ಸಹ ನಿರ್ಗಮಿಸುತ್ತಿದ್ದಾರೆ. ಚುನಾವಣೆ ಘೋಷಣೆಯಾದಾಗ, ಯಾವುದೇ ವ್ಯಕ್ತಿ ಮತ ​​ಚಲಾಯಿಸಲು ಬರುವುದಿಲ್ಲ ಎಂದಿದ್ದರು. ತ್ರಿವರ್ಣ ಧ್ವಜವನ್ನು ಹಿಡಿದಿಡಲು ಒಂದು ಕೈ ಕೂಡ ಇಲ್ಲ ಎಂದು ಮೆಹಬೂಬಾ ಜಿ ಹೇಳಿದ್ದರು. ಆದರೆ, ಈಗ ಗುಪ್ಕರ್ ರಸ್ತೆಯ ದೊಡ್ಡ ಬಂಗಲೆಗಳು ನಡುಗುತ್ತಿವೆ" ಎಂದು ತರುಣ್ ಚುಗ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.