ETV Bharat / bharat

ಕಂಗನಾ ಅವರ ಪದ್ಮಶ್ರೀ ಪ್ರಶಸ್ತಿ ಹಿಂಪಡೆಯುವಂತೆ ಒತ್ತಾಯಿಸಿ ಪತ್ರ ಬರೆದ DCW ಅಧ್ಯಕ್ಷೆ - 1947 ರಲ್ಲಿ ಭಾರತವು ಗಳಿಸಿದ ಸ್ವಾತಂತ್ರ್ಯವು ಭಿಕ್ಷೆ

ಗಾಂಧಿ, ಭಗತ್ ಸಿಂಗ್ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರ ಹುತಾತ್ಮತೆಯನ್ನು ಕಂಗನಾ ರಣಾವತ್​ ಗೇಲಿ ಮಾಡಿದ್ದಾರೆ. ಲಕ್ಷಾಂತರ ಜನರ ತ್ಯಾಗ ಮತ್ತು ತಪಸ್ಸಿನಿಂದ ಸಾಧಿಸಿದ ಸ್ವಾತಂತ್ರ್ಯವು ಅವಳಿಗೆ ಭಿಕ್ಷೆಯಾಗಿದೆ. ಆಕೆಗೆ ಚಿಕಿತ್ಸೆ ಅಗತ್ಯ ಇದೆ..

ಕಂಗನಾ ಅವರ ಪದ್ಮಶ್ರೀ ಪ್ರಶಸ್ತಿ ಹಿಂಪಡೆಯುವಂತೆ ಒತ್ತಾಯಿಸಿ ಪತ್ರ ಬರೆದ DCW ಅಧ್ಯಕ್ಷೆ

author img

By

Published : Nov 14, 2021, 8:15 PM IST

ನವದೆಹಲಿ : ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಬಾಲಿವುಡ್ ನಟಿ ಕಂಗನಾ ರಣಾವತ್ ( actor Kangana Ranaut ) ಅವರಿಗೆ ನೀಡಲಾದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯುವಂತೆ ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಅಧ್ಯಕ್ಷೆ ಸ್ವಾತಿ ಮಲಿವಾಲ್ (Swati Maliwal) ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ.

1947ರಲ್ಲಿ ಭಾರತವು "ಭೀಖ್" (ಭಿಕ್ಷೆ) ಪಡೆದಿತ್ತು ಎಂದು ಹೇಳುವ ಮುಲಕ ರಾಷ್ಟ್ರದ ಹೆಮ್ಮೆಗೆ ಧಕ್ಕೆ ತಂದಿರುವ ನಟಿಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕೆಂದು ಕೋರಿದ್ದಾರೆ.

1947ರಲ್ಲಿ ಭಾರತವು ಗಳಿಸಿದ ಸ್ವಾತಂತ್ರ್ಯವು ಭಿಕ್ಷೆ ಎಂದು ಅವರು ಕರೆದಿದ್ದಾರೆ. ಇದು ಮಹಾತ್ಮಾ ಗಾಂಧಿ, ಭಗತ್ ಸಿಂಗ್ ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡುವ ಅಪಮಾನ ಎಂದು ರಣಾವತ್​ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.

ಕಂಗನಾ ಅವರ ಪದ್ಮಶ್ರೀ ಪ್ರಶಸ್ತಿ ಹಿಂಪಡೆಯುವಂತೆ ಒತ್ತಾಯಿಸಿ ಪತ್ರ ಬರೆದ DCW ಅಧ್ಯಕ್ಷೆ
ಕಂಗನಾ ಅವರ ಪದ್ಮಶ್ರೀ ಪ್ರಶಸ್ತಿ ಹಿಂಪಡೆಯುವಂತೆ ಒತ್ತಾಯಿಸಿ ಪತ್ರ ಬರೆದ DCW ಅಧ್ಯಕ್ಷೆ

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಗಾಂಧಿ, ಭಗತ್ ಸಿಂಗ್ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರ ಹುತಾತ್ಮತೆಯನ್ನು ಕಂಗನಾ ರಣಾವತ್​ ಗೇಲಿ ಮಾಡಿದ್ದಾರೆ. ಲಕ್ಷಾಂತರ ಜನರ ತ್ಯಾಗ ಮತ್ತು ತಪಸ್ಸಿನಿಂದ ಸಾಧಿಸಿದ ಸ್ವಾತಂತ್ರ್ಯವು ಅವಳಿಗೆ ಭಿಕ್ಷೆಯಾಗಿದೆ. ಆಕೆಗೆ ಚಿಕಿತ್ಸೆ ಅಗತ್ಯ ಇದೆ.

ಈ ಹಿನ್ನೆಲೆ ರಣಾವತ್‌ರಿಂದ ಪದ್ಮಶ್ರೀ ಪ್ರಶಸ್ತಿಯನ್ನು ತಕ್ಷಣವೇ ಹಿಂಪಡೆಯುವಂತೆ ಒತ್ತಾಯಿಸಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದೇನೆ. ನಾನು ಅವರ ವಿರುದ್ಧ ಎಫ್‌ಐಆರ್ ದಾಖಲಿಸಲು ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ನಟಿ ರಣಾವತ್​ ಅವರು ಈ ಹಿಂದೆ ಟಿವಿ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಭಾರತಕ್ಕೆ 2014ರಲ್ಲಿ "ನಿಜವಾದ ಸ್ವಾತಂತ್ರ್ಯ" ಸಿಕ್ಕಿತು. ಆದರೆ, 1947 ರಲ್ಲಿ ಸಿಕ್ಕಿದ ಸ್ವಾತಂತ್ರ್ಯವು ಭಿಕ್ಷೆ ಎಂದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.