ETV Bharat / bharat

ಯುಗಾದಿಗೆ ಸಿಹಿ ಸುದ್ದಿ.. 'ಸ್ಪುಟ್ನಿಕ್ ವಿ' ಲಸಿಕೆ ಬಳಕೆಗೆ ಡಿಸಿಜಿಐನಿಂದಲೂ ಸಿಕ್ತು ಅನುಮೋದನೆ

ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ ತುರ್ತು ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದನೆ ನೀಡಿದೆ.

Sputnik V
ಸ್ಪುಟ್ನಿಕ್ ವಿ
author img

By

Published : Apr 13, 2021, 6:54 AM IST

ನವದೆಹಲಿ: ತಜ್ಞರ ಸಮಿತಿ ಅನುಮೋದನೆ ನೀಡಿದ ಬೆನ್ನಲ್ಲೇ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಕೂಡ ಸಮ್ಮತಿ ಸೂಚಿಸಿದೆ. ಸ್ಪುಟ್ನಿಕ್ ವಿ ಲಸಿಕೆ ಬಳಕೆಗೆ ಅನುಮತಿ ನೀಡಿದ 60ನೇ ದೇಶ ಭಾರತವಾಗಿದೆ.

ಹೈದರಾಬಾದ್​ ಮೂಲದ ಡಾ. ರೆಡ್ಡೀಸ್​ ಲ್ಯಾಬೋರೇಟರಿ ಸಹಯೋಗದೊಂದಿಗೆ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಅಭಿವೃದ್ಧಿಪಡಿಸಲಾಗಿದ್ದು, ಡಾ. ರೆಡ್ಡೀಸ್ ಲ್ಯಾಬ್​ ಭಾರತದಲ್ಲಿ ಎರಡನೇ ಹಾಗೂ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಿದೆ. ದೇಶದಲ್ಲಿ ಲಸಿಕೆಯ ತುರ್ತು ಬಳಕೆ ಅನುಮತಿ ನೀಡುವಂತೆ ಡಾ. ರೆಡ್ಡೀಸ್ ಲ್ಯಾಬ್ ಸಲ್ಲಿಸಿದ್ದ ಅರ್ಜಿಯನ್ನು ತಜ್ಞರ ಸಮಿತಿ ನಿನ್ನೆ ಅನುಮೋದಿಸಿತ್ತು. ಇದೀಗ ಡಿಸಿಜಿಐನಿಂದಲೂ ಅನುಮೋದನೆ ಸಿಕ್ಕಿದೆ.

ಹೆಚ್ಚಿನ ಓದಿಗೆ: 3ನೇ ಲಸಿಕೆ ಪಡೆದ ಭಾರತ: ಸ್ಪುಟ್ನಿಕ್ ವಿ ತುರ್ತು ಬಳಕೆಗೆ ತಜ್ಞರ ಅನುಮೋದನೆ

ದೇಶದಲ್ಲಿ ಕೋವಿಡ್​ ಎರಡನೇ ಅಲೆ ಉಲ್ಬಣಗೊಂಡಿದ್ದು, ಸೋಂಕಿತರ ಸಂಖ್ಯೆ ದಿನದಿನಕ್ಕೂ ಹೆಚ್ಚುತ್ತಿದೆ. ಈ ವೇಳೆಯಲ್ಲಿ ಅನೇಕ ರಾಜ್ಯಗಳಲ್ಲಿ ವ್ಯಾಕ್ಸಿನ್​ ಕೊರತೆ ಕಂಡುಬಂದಿದೆ. ದೇಶೀಯ ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಬಳಿಕ ಇದೀಗ ಭಾರತದಲ್ಲಿ ಮೂರನೇ ಲಸಿಕೆ ಲಭ್ಯವಾಗುತ್ತಿರುವುದು ಜನರು ನಿಟ್ಟುಸಿರು ಬಿಡುವಂತೆ ಮಾಡಿದೆ.

2021ರ ಮೂರನೇ ತ್ರೈಮಾಸಿಕದೊಳಗಾಗಿ ಜಾನ್ಸನ್ ಮತ್ತು ಜಾನ್ಸನ್, ಸೀರಂನ ನೊವಾವಾಕ್ಸ್, ಝೈಡಸ್​ ಕ್ಯಾಡಿಲಾದ ಲಸಿಕೆ ಹಾಗೂ ಭಾರತ್ ಬಯೋಟೆಕ್​​ನ ಇಂಟ್ರಾನಾಸಲ್ ಲಸಿಕೆಗಳನ್ನು ಸಹ ನಿರೀಕ್ಷಿಸಬಹುದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.