ETV Bharat / bharat

ಮಾನವ 300 ವರ್ಷ ಬದುಕುವ ದಿನಗಳು ಮುಂದೆ ಬರಲಿವೆ; ಇಸ್ರೋ ಅಧ್ಯಕ್ಷ ಸೋಮನಾಥ್

author img

By ETV Bharat Karnataka Team

Published : Jan 6, 2024, 8:14 PM IST

ISRO Chairman Dr. Somnath: ಶಿಕ್ಷಣ, ವೈದ್ಯಕೀಯ ಮುಂತಾದ ಕ್ಷೇತ್ರಗಳಲ್ಲಿ ನಡೆಯುವ ಸಂಶೋಧನೆ ಮತ್ತು ಆವಿಷ್ಕಾರಗಳಿಂದ ಮನುಷ್ಯನ ಜೀವಿತಾವಧಿ ಹೆಚ್ಚಳವಾಗುವ ಸಾಧ್ಯತೆ ಇದೆ. ಇದರಿಂದ ಮಾನವನ ಜೀವಿತಾವಧಿ 200ರಿಂದ 300ಕ್ಕೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಇಸ್ರೋ ಅಧ್ಯಕ್ಷ ಡಾ ಸೋಮನಾಥ್​ ಹೇಳಿದ್ದಾರೆ.

ISRO Chairman Dr. Somnath
ISRO Chairman Dr. Somnath

ಹೈದರಾಬಾದ್​ : ಶಿಕ್ಷಣ, ವೈದ್ಯಕೀಯ ಕ್ಷೇತ್ರ ಮತ್ತು ವಿವಿಧ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳು ಮತ್ತು ಭವಿಷ್ಯದಲ್ಲಿ ಬರುವ ವಿನೂತನ ಆವಿಷ್ಕಾರಗಳು ಮನುಷ್ಯನ ಜೀವಿತಾವಧಿಯನ್ನು ಹೆಚ್ಚಿಸುವ ಸಾಧ್ಯತೆಗಳಿವೆ ಎಂದು ಇಸ್ರೋ ಅಧ್ಯಕ್ಷ ಡಾ ಸೋಮನಾಥ್​ ಹೇಳಿದರು.

ಶುಕ್ರವಾರ ಇಲ್ಲಿನ ಜವಾಹರ್​ಲಾಲ್​ ನೆಹರು ತಾಂತ್ರಿಕ ವಿಶ್ವವಿದ್ಯಾಲಯ (ಜೆಎನ್​ಟಿಯು)ದಲ್ಲಿ ನಡೆದ 12ನೇ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಣ, ವೈದ್ಯಕೀಯ ಮುಂತಾದ ಕ್ಷೇತ್ರಗಳಲ್ಲಿ ನಡೆಯುವ ಸಂಶೋಧನೆ ಮತ್ತು ಆವಿಷ್ಕಾರಗಳಿಂದ ಮನುಷ್ಯನ ಜೀವಿತಾವಧಿ ಹೆಚ್ಚಳವಾಗುವ ಸಾಧ್ಯತೆ ಇದೆ. ನಮ್ಮ ಹಾನಿಗೊಳಗಾದ ಅಂಗಗಳು ಮತ್ತು ಸಾಯುತ್ತಿರುವ ಜೀವಕೋಶಗಳನ್ನು ಬದಲಾಯಿಸುವ ಮೂಲಕ ನಾವು ಸುಮಾರು 200 ರಿಂದ 300 ವರ್ಷಗಳವರೆಗೆ ಬದುಕಬಹುದು. ಸ್ವಾತಂತ್ರ್ಯ ಬಂದಾಗ ಮನುಷ್ಯನ ಸರಾಸರಿ ಜೀವಿತಾವಧಿ 35 ವರ್ಷ ಇತ್ತು. ಇದೀಗ ಈ ಜೀವಿತಾವಧಿ 70 ವರ್ಷವಾಗಿದೆ ಎಂದು ಹೇಳಿದರು.

ಈ ವರ್ಷ ನಾವು ಪಿಎಸ್‌ಎಲ್‌ವಿ ಮತ್ತು ಜಿಎಸ್‌ಎಲ್‌ವಿ ಮೂಲಕ ಕೆಲವು ನೌಕೆಗಳನ್ನು ಭೂಮಿಯ ಕಕ್ಷೆಗೆ ಕಳುಹಿಸುತ್ತಿದ್ದೇವೆ. ಇವುಗಳ ಸಹಾಯದಿಂದ ಚಂಡಮಾರುತ ಯಾವಾಗ ಬರುತ್ತದೆ, ಮಳೆ ಯಾವಾಗ ಮತ್ತು ಎಲ್ಲಿ ಬರುತ್ತವೆ ಎಂಬುದನ್ನು ನಿಖರವಾಗಿ ತಿಳಿಯಲು ಸಾಧ್ಯವಾಗುತ್ತದೆ. ಈ ವರ್ಷದೊಳಗೆ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ 'ಮಿಷನ್ ಗಗನ್​ ಯಾನ್' ಪೂರ್ಣಗೊಳಿಸಲಿದ್ದೇವೆ ಎಂದು ತಿಳಿಸಿದರು.

'ವಿದ್ಯಾರ್ಥಿಗಳು ಬಾವಿಯಲ್ಲಿರುವ ಕಪ್ಪೆಯಂತಿರಬಾರದು. ಕೃತಕ ಬುದ್ಧಿಮತ್ತೆ ಮತ್ತು ಮಿಷನ್​ ಲರ್ನಿಂಗ್​ ಈಗಾಗಲೇ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಇದನ್ನು ವಿದ್ಯಾರ್ಥಿಗಳು ಅರಿಯಬೇಕು. ರೋಬೋಟಿಕ್​ ತಂತ್ರಜ್ಞಾನದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ಆತ್ಯಾಧುನಿಕ ತಂತ್ರಜ್ಞಾನ ಬಳಸಿ ರೋಬೋಟ್​ಗಳನ್ನು ತಯಾರಿಸಿದರೆ ಮುಂದೆ ಇಸ್ರೋ ನಡೆಸುವ ಮಂಗಳ ಮತ್ತು ಶುಕ್ರ ಗ್ರಹದ ಯೋಜನೆಗಳಲ್ಲಿ ಬಳಸಿಕೊಳ್ಳಲಾಗುವುದು ಎಂದು ಸೋಮನಾಥ್​ ಹೇಳಿದರು. ಜವಾಹರ್​ಲಾಲ್​ ನೆಹರು ತಾಂತ್ರಿಕ ವಿಶ್ವವಿದ್ಯಾಲಯದಿಂದ ಡಾ.ಸೋಮನಾಥ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಜೊತೆಗೆ 54 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ಉಪ ಕುಲಪತಿ ಕಟ್ಟಾ ನರಸಿಂಹ ರೆಡ್ಡಿ, ಕುಲಸಚಿವ ಮಂಝೂರ್ ಹುಸೇನ್, ಕುಲಪತಿ ಗೋವರ್ಧನ್, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಾಜ್ಯಪಾಲ ತಮಿಳಿಸೈ ಅವರು ಕುಲಪತಿಯಾಗಿ ವಿಡಿಯೋ ಸಂದೇಶ ಕಳುಹಿಸಿ, ಜೆಎನ್‌ಟಿಯು ದೇಶದ ಅತ್ಯುತ್ತಮ ತಾಂತ್ರಿಕ ವಿಶ್ವವಿದ್ಯಾಲಯಗಳಲ್ಲಿ ಒಂದು ಎಂದು ತಿಳಿಸಿದರು.

ಒಂದೆರಡು ಪರೀಕ್ಷೆಗಳಲ್ಲಿ ನಾನೂ ಅನುತ್ತೀರ್ಣನಾಗಿದ್ದೆ : ಕಾರ್ಯಕ್ರಮದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸೋಮನಾಥ್​, ಯಾವುದೇ ವಿಷಯದಲ್ಲಿ ಮಕ್ಕಳು ಅನುತ್ತೀರ್ಣರಾದರೆ ಮಕ್ಕಳ ಮೇಲೆ ಪೋಷಕರ ಒತ್ತಡ ಹೆಚ್ಚಾಗುತ್ತದೆ. ಈಗ ನಾನು ಉನ್ನತ ಸ್ಥಾನದಲ್ಲಿರಬಹುದು. ಆದರೆ ನಾನು ಕೂಡ ಹಲವು ಪರೀಕ್ಷೆಗಳಲ್ಲಿ ಅನುತ್ತೀರ್ಣನಾಗಿದ್ದೇನೆ. ವೈಯಕ್ತಿಕ ಮತ್ತು ವೃತ್ತಿಪರ ವೈಫಲ್ಯಗಳು ಯಶಸ್ಸಿನ ಮೆಟ್ಟಿಲು ಎಂದು ಹೇಳಿದರು.

ಚಂದ್ರಯಾನ -3 ಯಶಸ್ವಿಯಾಗಿ ವಿಶ್ವವೇ ನಮ್ಮ ಸಾಧನೆಯನ್ನು ಕೊಂಡಾಡಿದೆ. ಈ ಸಾಧನೆಯ ಬಳಿಕ ನಾವು ಎರಡು ಬಾರಿ ವೈಫಲ್ಯ ಕಂಡಿದ್ದನ್ನು ಎಲ್ಲರೂ ಮರೆತಿದ್ದಾರೆ. ರಾಕೆಟ್ ಮತ್ತು ಉಪಗ್ರಹಗಳನ್ನು ತಯಾರಿಸುವಾಗ ನಾನು ಕೂಡ ಸಾಕಷ್ಟು ತಪ್ಪುಗಳನ್ನು ಮಾಡಿದ್ದೇನೆ. ಅವುಗಳನ್ನು ಪ್ರಾಮಾಣಿಕವಾಗಿ ಸ್ವೀಕರಿಸಿ, ಯಶಸ್ಸು ಸಾಧಿಸಲು ಏನು ಮಾಡಬೇಕು ಎಂಬುದನ್ನು ಯೋಚಿಸಿ ಮುನ್ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇದನ್ನೂ ಓದಿ : ಇಸ್ರೋದಿಂದ ಮತ್ತೊಂದು ಮೈಲಿಗಲ್ಲು : ಅಂತಿಮ ಕಕ್ಷೆ ಸೇರಿದ ಆದಿತ್ಯ ಎಲ್​-1 ಗಗನ ನೌಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.