ETV Bharat / bharat

ಕೊನೆಗೂ ವಿಚ್ಛೇದನ ಪಡೆದ ಸಚಿವ ದಯಾಶಂಕರ್ ಸಿಂಗ್, ಸ್ವಾತಿ ಸಿಂಗ್​! - ಸ್ವಾತಿ ಸಿಂಗ್

ಸಾರಿಗೆ ಸಚಿವ ದಯಾಶಂಕರ್ ಸಿಂಗ್ ಮತ್ತು ಮಾಜಿ ಸಚಿವೆ ಸ್ವಾತಿ ಸಿಂಗ್ ವಿಚ್ಛೇದನ ಪಡೆದುಕೊಂಡಿದ್ದಾರೆ.

divorce
ಸಚಿವ ದಯಾಶಂಕರ್ ಸಿಂಗ್ ಮತ್ತು ಮಾಜಿ ಸಚಿವೆ ಸ್ವಾತಿ ಸಿಂಗ್
author img

By

Published : Apr 4, 2023, 10:57 AM IST

ಲಕ್ನೋ: ಸಾರಿಗೆ ಸಚಿವ ದಯಾಶಂಕರ್ ಸಿಂಗ್ ಮತ್ತು ಮಾಜಿ ಸಚಿವೆ ಸ್ವಾತಿ ಸಿಂಗ್ ಅಂತಿಮಾಗಿ ನ್ಯಾಯಾಲಯದ ತೀರ್ಪಿನಿಂದ ತಮ್ಮ ವೈವಾಹಿಕ ಸಂಬಂಧವನ್ನು ವಿಚ್ಛೇದನ ಪಡೆದುಕೊಳ್ಳುವ ಮೂಲಕ ಕೊನೆಗೊಳಿಸಿದ್ದಾರೆ. ಹೌದು, 22 ವರ್ಷಗಳ ಹಿಂದೆ ಈ ಜೋಡಿ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಆದರೆ, ತಮ್ಮ ದಾಂಪತ್ಯದ ಜೀವನದಲ್ಲಿ ಬಿರುಕು ಮೂಡಿದ್ದರಿಂದ, ದಯಾಶಂಕರ್ ಸಿಂಗ್ ಪತ್ನಿ ಮಾಜಿ ಸಚಿವೆ ಸ್ವಾತಿ ಸಿಂಗ್ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಸೆಪ್ಟೆಂಬರ್ 20, 2022 ರಂದೇ ಅರ್ಜಿ ಸಲ್ಲಿಸಿದ್ದರು. ಇದೀಗ ಕೋರ್ಟ್​ ಈ ಕುರಿತು ಅಂತಿಮ ತೀರ್ಪು ನೀಡಿದೆ.

ಸಂಬಂಧ ಮುಕ್ತರಾಗಲು ಬಯಸಿದ್ದಾದರು ಏಕೆ?: ಸಾರಿಗೆ ಸಚಿವ ದಯಾಶಂಕರ್ ಸಿಂಗ್ ಮತ್ತು ಸ್ವಾತಿ ಸಿಂಗ್ ಪ್ರೇಮ ವಿವಾಹವಾಗಿದ್ದರೂ ಇಬ್ಬರ ನಡುವೆ ಸದಾ ಜಗಳ ನಡೆಯುತ್ತಿತ್ತು. ಹೀಗಾಗಿಯೇ ಕಳೆದ ನಾಲ್ಕು ವರ್ಷಗಳಿಂದ ಇಬ್ಬರು ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ಅವರ ನಡುವೆ ಯಾವುದೇ ವೈವಾಹಿಕ ಸಂಬಂಧ ಕೂಡ ಇರಲಿಲ್ಲ.

ಇದರಿಂದ 2012 ರಲ್ಲಿಯೇ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಆ ದಿನಾಂಕದಂದು ನ್ಯಾಯಾಲಯಕ್ಕೆ ಸರಿಯಾದ ಸಮಯಕ್ಕೆ ತಲುಪದಿದ್ದ ಕಾರಣ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಪುನಃ ಸೆಪ್ಟೆಂಬರ್ 20. 2022 ರಂದು ಮಾಜಿ ಸಚಿವೆ ಸ್ವಾತಿ ಸಿಂಗ್ ಮತ್ತೆ ಅದೇ ವಿಚ್ಛೇದನ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ನ್ಯಾಯಾಲಯವು ಅದನ್ನು ಮಾನ್ಯ ಮಾಡಿರಲಿಲ್ಲ.

ಇದನ್ನೂ ಓದಿ: ಸ್ಟಾಫ್​​ ಸೆಲೆಕ್ಷನ್​ ಕಮಿಷನ್​​​ ಬೃಹತ್​​ ನೇಮಕಾತಿ: 7500 ಗ್ರೂಪ್​ ಬಿ ಮತ್ತು ಸಿ ಹುದ್ದೆಗೆ ಅರ್ಜಿ ಆಹ್ವಾನ

ಇದರ ನಂತರ, ಮತ್ತೊಮ್ಮೆ ಸೆಪ್ಟೆಂಬರ್ 2022 ರಲ್ಲಿ, ಸ್ವಾತಿ ಸಿಂಗ್ ಕೌಟುಂಬಿಕ ನ್ಯಾಯಾಲಯದಲ್ಲಿ ಹೊಸ ವಿಚ್ಛೇದನ ಅರ್ಜಿಯನ್ನು ಸಲ್ಲಿಸಿದರು. ಆಗ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದಾಗ ಪ್ರತಿವಾದಿ ನ್ಯಾಯಾಲಯದಲ್ಲಿ ಇರಲಿಲ್ಲ ಎಂಬ ಕಾರಣದಿಂದ ನ್ಯಾಯಾಲಯದ ತೀರ್ಪು ಏಕಪಕ್ಷೀಯವಾಗಿ ಉಳಿದಿತ್ತು.

ಮತ್ತೆ ಕೌಟುಂಬಿಕ ನ್ಯಾಯಾಲಯದಲ್ಲಿ ಫಿರ್ಯಾದಿದಾರರು ಸಾಕ್ಷ್ಯವನ್ನು ಸಲ್ಲಿಸಿದರು, ಅದರ ಆಧಾರದ ಮೇಲೆ ನ್ಯಾಯಾಲಯವು ಅಂತಿಮ ತೀರ್ಪು ನೀಡಿದೆ. ಕೌಟುಂಬಿಕ ನ್ಯಾಯಾಲಯದ ಹೆಚ್ಚುವರಿ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ನಾಥ್ ಸಿಂಗ್ ಅವರು ಸೋಮವಾರ ಈ ಕುರಿತು ಅಂತಿಮ ತೀರ್ಪು ನೀಡಿದ್ದು, ಇದೀಗ ಇಬ್ಬರ ವಿಚ್ಛೇದನಕ್ಕೆ ಕೋರ್ಟ್​​​​​ನ ಮುದ್ರೆ ಬಿದ್ದಿದೆ. ಇಬ್ಬರೂ ಈಗ ಈ ಸಂಬಂಧದಿಂದ ಮುಕ್ತರಾಗಿದ್ದಾರೆ.

ಸಂಬಂಧವೇ ಹಾಗೆ ಇಷ್ಟ ಪಟ್ಟು ಜೊತೆಗಿರಲು ಬಯಸುತ್ತಾರೆ, ಕೊನೆಗೆ ನಾನಾ ಕಾರಣಗಳಿಂದ ಒತ್ತಾಯದ ಜೀವನ ನಡೆಸಿ, ಅದೇ ಸಂಬಂಧವನ್ನು ಮುರಿದುಕೊಳ್ಳುತ್ತಾರೆ. ಕೆಲವರಿಗೆ ಪ್ರೀತಿಸಿದವರ ಜೊತೆ ಬಾಳಲು ಅವಕಾಶ ಸಿಗದೇ ಬೇರೆ ಬೇರೆ ಆದರೆ, ಇನ್ನೂ ಕೆಲವರು ಜೊತೆಯಲ್ಲಿ ಬಾಳುವ ಭಾಗ್ಯ ಸಿಕ್ಕರೂ ಮೊದಲಿದ್ದ ಪ್ರೀತಿ ಮರೆತು ದೂರವಾಗಿ ಬಿಡುತ್ತಾರೆ. ಜೀವನದಲ್ಲಿ ಪ್ರತಿಯೊಂದು ಸಂಬಂಧವು ಮುಖ್ಯ, ಹಾಗಾಗಿ ಸಿಕ್ಕ ಪ್ರೀತಿ ಆಗಲಿ ಸ್ನೇಹವನ್ನಾಗಲಿ ಕ್ಷುಲಕ ಕಾರಣಕ್ಕಾಗಿ ಕಳೆದುಕೊಳ್ಳದಿದ್ದರೆ ಉತ್ತಮ.

ಇದನ್ನೂ ಓದಿ: ಇನ್ಮುಂದೆ ನನಗೆ ಇಷ್ಟವಿಲ್ಲದ ಜನರೊಂದಿಗೆ ಕೆಲಸ ಮಾಡಲ್ಲ: ನಟಿ ಪ್ರಿಯಾಂಕಾ ಚೋಪ್ರಾ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.