ETV Bharat / bharat

ಆಸ್ಪತ್ರೆಯಲ್ಲಿ ಮೃತಪಟ್ಟ ತಾಯಿಯ ಮೃತದೇಹ ಮಂಚದಲ್ಲಿ ಹೊತ್ತು ಸಾಗಿದ ಹೆಣ್ಣು ಮಕ್ಕಳು! - ತಾಯಿಯ ಮೃತದೇಹ ಮಂಚದ ಮೇಲಿಟ್ಟುಕೊಂಡು ಹೊತ್ತು ಸಾಗಿದ ಹೆಣ್ಣು ಮಕ್ಕಳು

ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ ತಾಯಿ ಮೃತದೇಹವನ್ನ ಮಂಚದ ಮೇಲೆ ಹೊತ್ತು ಸಾಗಿರುವ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Rewa Daughter reached crematorium
Rewa Daughter reached crematorium
author img

By

Published : Mar 30, 2022, 9:05 PM IST

ರೇವಾ(ಮಧ್ಯಪ್ರದೇಶ): ರೇವಾದ ರಾಯ್​ಪುರ್​ ಕರ್ಚುಲಿಯಾದಲ್ಲಿ ಹೃದಯ ವಿದ್ರಾವಕ ಘಟನೆವೊಂದು ಬೆಳಕಿಗೆ ಬಂದಿದೆ. ಇದು ಮಾನವ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ. ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ತಾಯಿಯ ಮೃತದೇಹವನ್ನ ಸಾಗಿಸಲು ಆ್ಯಂಬುಲೆನ್ಸ್​​ ವ್ಯವಸ್ಥೆ ಸಿಗದ ಕಾರಣ ನಾಲ್ವರು ಹೆಣ್ಣು ಮಕ್ಕಳು ಮೃತದೇಹವನ್ನ ಮಂಚದ ಮೇಲಿಟ್ಟುಕೊಂಡು ಹೊತ್ತು ಸಾಗಿದ್ದಾರೆ.

ತಾಯಿಯ ಮೃತದೇಹ ಮಂಚದಲ್ಲಿ ಹೊತ್ತು ಸಾಗಿದ ಹೆಣ್ಣು ಮಕ್ಕಳು

ರಾಯ್​ಪುರ್​​ದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆಯೋರ್ವಳು ಸಾವನ್ನಪ್ಪಿದ್ದು, ಮೃತದೇಹ ಸಾಗಿಸಲು ಆ್ಯಂಬುಲೆನ್ಸ್​ ಸಿಗದ ಕಾರಣ ಮಂಚದ ಮೇಲೆ ಶವ ಹೊತ್ತುಕೊಂಡು ಸಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ತುಂಬಾ ಸಮಯವಾದ್ರೂ ಶವ ತೆಗೆದುಕೊಂಡು ಹೋಗಲು ಆ್ಯಂಬುಲೆನ್ಸ್ ಬಾರದ ಕಾರಣ ಹೆಗಲ ಮೇಲೆ ಹೊತ್ತುಕೊಂಡು ಹೋಗಿರುವುದಾಗಿ ಮಹಿಳೆಯರು ತಿಳಿಸಿದ್ದಾರೆಂದು ಎಎನ್​ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆಸ್ಪತ್ರೆಯ ವೈದ್ಯಾಧಿಕಾರಿ ಬಿ.ಎಲ್ ಮಿಶ್ರಾ, ಆ್ಯಂಬುಲೆನ್ಸ್​ ವ್ಯವಸ್ಥೆ ಮಾಡುತ್ತೇವೆಂದು ಹೇಳಿದ್ರೂ ಕೂಡ ಮಹಿಳೆಯರು ನಮ್ಮ ಮಾತು ಕೇಳಿಲ್ಲ. ಮಂಚದ ಮೇಲೆ ಶವವಿಟ್ಟುಕೊಂಡು ಸಾಗಿಸಿದ್ದಾರೆಂದು ತಿಳಿಸಿದ್ದಾರೆ. ಈ ಆಸ್ಪತ್ರೆಯಲ್ಲಿ ಮೃತದೇಹ ಸಾಗಿಸಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಈ ಹಿಂದಿನಿಂದಲೂ ಇಂತಹ ಘಟನೆಗಳು ನಡೆಯುತ್ತಿರುತ್ತವೆ ಎಂದು ತಿಳಿದುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.