ETV Bharat / bharat

ವಿಡಿಯೋ ಕಾಲ್ ಮೂಲಕ ತಂದೆಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ ಮಗಳು - daughter attends father funeral

ರಾಯಪುರದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ವೃದ್ಧರೊಬ್ಬರ ಅಂತ್ಯಕ್ರಿಯೆಯನ್ನು ಮಹಾನಗರ ಪಾಲಿಕೆ ಮಾಡಿತು. ಮೃತರ ಮಗಳು ಅಮೆರಿಕಾದಿಂದ ವಿಡಿಯೋ ಕರೆ ಮೂಲಕ ತಂದೆಯ ಅಂತ್ಯಸಂಸ್ಕಾರ ಪಾಲ್ಗೊಂಡರು.

daughter attends father funeral virtually from america
ವಿಡಿಯೋ ಕಾಲ್
author img

By

Published : Apr 4, 2021, 10:17 AM IST

ರಾಯಪುರ(ಛತ್ತೀಸ್​ಗಢ): ನಿನ್ನೆ 82 ವರ್ಷದ ವೃದ್ಧರೊಬ್ಬರು ಕೋವಿಡ್‌ ಸೋಂಕಿಗೆ ಬಲಿಯಾಗಿದ್ದು, ಅವರ ಮಗಳು ವಿಡಿಯೋ ಕರೆ ಮೂಲಕ ತಂದೆಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡರು.

ಮಗಳು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಅಲ್ಲದೇ ಅವರ ಸಂಬಂಧಿಕರು ಸಹ ದೂರದ ಊರುಗಳಲ್ಲಿ ವಾಸಿಸುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಿಕರ ಅನುಪಸ್ಥಿತಿಯಲ್ಲಿ ಮಗಳು ಅಮೆರಿಕಾದಿಂದ ವಿಡಿಯೋ ಕರೆ ಮೂಲಕ ತಂದೆಯ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಳು.

ಈ ಕುರಿತು ಪ್ರತಿಕ್ರಿಯಿಸಿದ ಪಾಲಿಕೆ ಅಧಿಕಾರಿಗಳು, ಕುಟುಂಬದವರ ಒಪ್ಪಿಗೆ ಪಡೆದು ಕೋವಿಡ್​ ಮಾರ್ಗಸೂಚಿ ಅನ್ವಯ ನಾವೇ ಅಂತ್ಯಸಂಸ್ಕಾರ ಮಾಡುತ್ತಿದ್ದೇವೆ. ಮೃತರ ಕುಟುಂಬಸ್ಥರು ಬಹಳ ದೂರ ಇರುವ ಕಾರಣ ಅವರು ಬರುವವರೆಗೂ ಕಾಯುವುದು ಸಾಧ್ಯವಿಲ್ಲ, ಹೀಗಾಗಿ ಅವರ ಮಗಳಿಗೆ ವಿಡಿಯೋ ಕಾಲ್​ ಮೂಲಕ ಮೃತರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಯ್ತು ಎಂದು ತಿಳಿಸಿದರು.

ರಾಜ್ಯದಲ್ಲಿ ಹೇಗಿದೆ ಕೊರೊನಾ ಅಬ್ಬರ

ಛತ್ತೀಸ್​ಗಢದಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ 33 ಸಾವಿರ ದಾಟಿದೆ, ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಹೀಗಾಗಿ ಜಿಲ್ಲಾಡಳಿತವೇ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಕೋವಿಡ್​ ಪ್ರೊಟೋಕಾಲ್​ಗೆ​ ಅನುಗುಣವಾಗಿ ನೆರವೇರಿಸುತ್ತಿದೆ.

ಇದನ್ನೂ ಓದಿ: ಉಳ್ಳಾಲ: ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.