ಹೈದರಾಬಾದ್ : ಕೋವಿಡ್-19 ಪ್ರಾರಂಭವಾಗುತ್ತಿದ್ದಂತೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (ಎನ್‌ಎಫ್‌ಹೆಚ್‌ಎಸ್) ಕೆಲಸ ನಿಲ್ಲಿಸಲಾಗಿತ್ತು. 2020ರ ಜುಲೈ ವೇಳೆಗೆ ಬಿಡುಗಡೆಯಾಗಬೇಕಿದ್ದ ಎನ್‌ಎಫ್‌ಹೆಚ್‌ಎಸ್-5ರ ಡೇಟಾವನ್ನು ಭಾರತದ ಆರೋಗ್ಯ ಸಚಿವಾಲಯವು ಡಿಸೆಂಬರ್ 12, 2020ರಂದು ಬಿಡುಗಡೆ ಮಾಡಿದೆ.
ಐದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಗಳು :
ಎನ್‌ಎಫ್‌ಹೆಚ್‌ಎಸ್ -1: 1992-93
ಎನ್‌ಎಫ್‌ಹೆಚ್‌ಎಸ್ -2: 1998-99
ಎನ್‌ಎಫ್‌ಹೆಚ್‌ಎಸ್ -3: 2005-06
ಎನ್‌ಎಫ್‌ಹೆಚ್‌ಎಸ್ -4: 2015-16
ಎನ್‌ಎಫ್‌ಹೆಚ್‌ಎಸ್ -5: 2019-20
ಎನ್‌ಎಫ್‌ಹೆಚ್‌ಎಸ್-5 :
ಕಳೆದ ವರ್ಷ ಎನ್‌ಎಫ್‌ಹೆಚ್‌ಎಸ್-5 ಪ್ರಾರಂಭಿಸಲಾಯಿತು. ಜನಸಂಖ್ಯೆ ಮತ್ತು ಮನೆಯ ವಿವರ, ಮದುವೆ ಮತ್ತು ಮಕ್ಕಳು, ಕುಟುಂಬ ಯೋಜನೆ, ಗರ್ಭನಿರೋಧಕ, ತಾಯಿಯ ಮತ್ತು ಮಕ್ಕಳ ಆರೋಗ್ಯ, ಬಾಣಂತಿ ಹಾಗೂ ಮಗುವಿನ ಆರೈಕೆ, ವ್ಯಾಕ್ಸಿನೇಷನ್ ಮತ್ತು ಬಾಲ್ಯದ ಕಾಯಿಲೆಗಳ ಚಿಕಿತ್ಸೆ, ಪೋಷಣೆ ಮತ್ತು ಆಹಾರ ಪದ್ಧತಿಗಳು, ರಕ್ತಹೀನತೆ, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಕ್ಯಾನ್ಸರ್ ಚಿಕಿತ್ಸೆ ಸೇರಿದಂತೆ 67 ವಿಚಾರಗಳ ಮಾಹಿತಿಯನ್ನು ಏಳು ದಶಲಕ್ಷ ಕುಟುಂಬಗಳು ನೀಡಿವೆ.
ಎನ್‌ಎಫ್‌ಹೆಚ್‌ಎಸ್-5 ಮತ್ತು ಮಕ್ಕಳ ಆರೋಗ್ಯ, ಕುಟುಂಬ ಯೋಜನೆ, ಆರೋಗ್ಯ ವಿಮೆ ಮತ್ತು ಪೋಷಣೆಯ ಕುರಿತು ಅಗತ್ಯ ಮಾಹಿತಿ ಒದಗಿಸುತ್ತದೆ. ಎನ್‌ಎಫ್‌ಹೆಚ್‌ಎಸ್ -5 2019-2020ರ ಅವಧಿಯದ್ದಾಗಿದೆ. ಭಾರತ ಮತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಜನಸಂಖ್ಯೆ, ಆರೋಗ್ಯ ಮತ್ತು ಪೋಷಣೆಯ ಕುರಿತಾದ ವಿವರವಾದ ಮಾಹಿತಿ ನೀಡಿದೆ.
ಈ ಸಮೀಕ್ಷೆಯ ಬಳಿಕ ಅಪೌಷ್ಟಿಕತೆಯು ಕಳವಳಕಾರಿಯಾಗಿದೆ ಎಂದು ತಿಳಿದು ಬಂದಿದೆ. ಯಾಕೆಂದರೆ, 12 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪೈಕಿ 5ರಲ್ಲಿ ಆಹಾರ ವ್ಯರ್ಥ ಮಾಡುವ ಶೇಕಡಾವಾರು ಪ್ರಮಾಣ ಹೆಚ್ಚಾಗಿದೆ ಎಂದು ಎನ್‌ಎಫ್‌ಹೆಚ್‌ಎಸ್ -5 ತಿಳಿಸಿದೆ.
12 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪೈಕಿ 5ರಲ್ಲಿ ಆಹಾರ ವ್ಯರ್ಥದ ಶೇಕಡಾವಾರು ಪ್ರಮಾಣ :
ರಾಜ್ಯಗಳು | (2019-20) ಶೇಕಡಾವಾರು | (2015-2016 )ಶೇಕಡಾವಾರು |
ಅಸ್ಸೋಂ | 21.7 | 17 |
ಬಿಹಾರ | 22.90% | 20.8 |
ಹಿಮಾಚಲ ಪ್ರದೇಶ | 17.40% | 13.7 |
ಕೇರಳ | 15.8 | 15.7 |
ಮಣಿಪುರ | 9.9 | 6.8 |
ಮೊಜೋರಾಂ | 9.8 | 6.1 |
ನಾಗಾಲ್ಯಾಂಡ್ | 19.10% | 11.30 |
ತೆಲಂಗಾಣ | 21.7 | 18.1 |
ತ್ರಿಪುರ | 18.2 | 16.8 |
ಜಮ್ಮು ಮತ್ತು ಕಾಶ್ಮೀರ | 19 | 12.2 |
ಲಡಾಖ್ | 17.5 | 9.3 |
ಲಕ್ಷದ್ವೀಪ | 17.4 | 13.7 |
ಕುಂಠಿತಗೊಂಡ 5 ವರ್ಷದೊಳಗಿನ ಮಕ್ಕಳ ಬೆಳವಣಿಗೆಯ ಶೇಕಡಾವಾರು ಪ್ರಮಾಣ :
ರಾಜ್ಯಗಳು | (2019-20) ಶೇಕಡಾವಾರು | (2015-16) ಶೇಕಡಾವಾರು |
ಹಿಮಾಚಲ ಪ್ರದೇಶ | 30.8 | 26.3 |
ಪಶ್ಚಿಮ ಬಂಗಾಳ | 33.8 | 32.5 |
ಮೇಘಾಲಯ | 46.5 | 43.8 |
ಮಹಾರಾಷ್ಟ್ರ | 35.2 | 34.4 |
ಗುಜರಾತ್ | 39 | 38.5 |
ಗೋವಾ | 25.8 | 20.1 |
ಕೇರಳ | 23.4 | 19.7 |
ಮಿಜೋರಾಂ | 28.9 | 28.1 |
ನಾಗಾಲ್ಯಾಂಡ್ | 32.7 | 28.6 |
ತೆಲಂಗಾಣ | 33.1 | 28 |
ತ್ರಿಪುರ | 32.3 | 24.3 |
ಲಕ್ಷದ್ವೀಪ | 32 | 26.8 |
17 ರಾಜ್ಯಗಳಲ್ಲಿ 2014-2015ರ ನಂತರ 2019-20ರಲ್ಲಿ ಲಸಿಕೆ ಹಾಕುವ ಪ್ರಮಾಣ ಅಧಿಕಗೊಂಡಿದೆ. ಮೂರು ರಾಜ್ಯಗಳಲ್ಲಿ ವ್ಯಾಕ್ಸಿನೇಷನ್ ಪ್ರಮಾಣ ಕಡಿಮೆಯಾಗಿದೆ. ಶೇಕಡಾವಾರು ವ್ಯಾಕ್ಸಿನೇಷನ್ ಪ್ರಮಾಣ :
ರಾಜ್ಯಗಳು | ವ್ಯಾಕ್ಸಿನೇಷನ್ ಶೇಕಡಾವಾರು | ವ್ಯಾಕ್ಸಿನೇಷನ್ ಬದಲಾವಣೆ (ಶೇಕಡಾವಾರು) |
ಹಿಮಾಚಲ ಪ್ರದೇಶ | 89.3 | 19.8 |
ಪಶ್ಚಿಮ ಬಂಗಾಳ | 87.8 | 3.4 |
ಕರ್ನಾಟಕ | 84.1 | 21.5 |
ಗೋವಾ | 81.9 | 6.5 |
ಸಿಕ್ಕಿಂ | 80.6 | 2.4 |
ಕೇರಳ | 77.8 | 4.3 |