ನವದೆಹಲಿ: ಭಾರತದಲ್ಲಿ ಟೆಕ್ನಾಲಜಿ ತುಂಬಾ ಮುಂದುವರಿದಿದ್ದು ಡೇಟಾ ಮತ್ತು ಜನಸಂಖ್ಯೆಯು ದೇಶಕ್ಕೆ ಭಾರಿ ಅವಕಾಶ ಒದಗಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಡಿಜಿಟಲ್ ಇಂಡಿಯಾ ಆರು ವರ್ಷ ಪೂರೈಸಿದ ಹಿನ್ನೆಲೆ ವರ್ಚುಯಲ್ ಮೂಲಕ ಮಾತನಾಡಿದ ಮೋದಿ, ಡೇಟಾ ಪವರ್ ಹೌಸ್ ಆಗಿ ಭಾರತವು ತನ್ನ ಜವಾಬ್ದಾರಿಗಳ ಬಗ್ಗೆ ಜಾಗೃತಿ ಹೊಂದಿದೆ. ಡೇಟಾ ಸಂರಕ್ಷಣೆಯ ಎಲ್ಲಾ ಅಂಶಗಳ ಬಗ್ಗೆ ಕೆಲಸ ನಡೆಯುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.
ಡೇಟಾ ಮತ್ತು ಜನಸಂಖ್ಯಾ ಲಾಭಾಂಶವು ಭಾರತಕ್ಕೆ ಒಂದು ದೊಡ್ಡ ಅವಕಾಶವನ್ನು ಒದಗಿಸುತ್ತದೆ. ಈ ದಶಕವನ್ನು ಭಾರತದ ತಂತ್ರಜ್ಞಾನವನ್ನಾಗಿ ಮಾರ್ಪಡಿಸುವಲ್ಲಿ ಯಶಸ್ವಿಯಾಗುತ್ತೇವೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ : ಇಂದು ರಾಷ್ಟ್ರೀಯ ವೈದ್ಯರ ದಿನ: ಪ್ರಧಾನಿ ಮೋದಿ ಭಾಷಣ
ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ವಿವಿಧ ಯೋಜನೆಗಳಾದ ದೀಕ್ಷಾ, ಇಎನ್‌ಎಎಂ, ಟೆಲಿಮೆಡಿಸಿನ್‌ಗಾಗಿ ಇ ಸಂಜೀವಿನಿ ಪರಿಹಾರ, ಪಿಎಂ ಸೇವಾನಿಧಿ ಯೋಜನೆ ಸೇರಿದಂತೆ ಮೋದಿ ಮಾತನಾಡಿದರು. ಕೋವಿಡ್ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಶಿಕ್ಷಣ, ಆರೋಗ್ಯ ಸೇವೆ ಮತ್ತು ಇತರ ನಾಗರಿಕ ಸೇವೆಗಳಲ್ಲಿ ಟೆಕ್ನಾಲಜಿ ವಹಿಸಿರುವ ಪಾತ್ರದ ಬಗ್ಗೆ ಪ್ರಧಾನಿ ಗಮನ ಸೆಳೆದರು. ಈ ಸಮಯದಲ್ಲಿ ಭಾರತವು ರಚಿಸಿದ ಡಿಜಿಟಲ್ ವ್ಯವಸ್ಥೆಯನ್ನು ಹಂತ ಹಂತವಾಗಿ ಅಂಗೀಕರಿಸಲಾಗುತ್ತದೆ. ಇದರಲ್ಲಿ ಆರೋಗ್ಯ ಸೇತು ಆ್ಯಪ್ ಕೂಡ ಮುಖ್ಯವಾಗಿದೆ ಎಂದರು.