ETV Bharat / bharat

12ನೇ ಅಂತಸ್ತಿನಲ್ಲಿ ವ್ಯಕ್ತಿಯಿಂದ ಅಪಾಯಕಾರಿ ವರ್ಕೌಟ್, ನೀವು ಪ್ರಯತ್ನಿಸಬೇಡಿ- ವೈರಲ್ ವಿಡಿಯೋ

ಹರಿಯಾಣದ ಫರೀದಾಬಾದ್​ನ ಅಪಾರ್ಟ್‌ಮೆಂಟ್‌ವೊಂದರ 12ನೇ ಅಂತಸ್ತಿನಲ್ಲಿರುವ ಬಾಲ್ಕನಿಯ ರೇಲಿಂಗ್ ಹಿಡಿದಿರುವ ವ್ಯಕ್ತಿ, ವ್ಯಾಯಾಮ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

rare  and dare  devil workout by man : viral video
Viral Video: ಡೇರ್​ ಡೆವಿಲ್ ವರ್ಕ್​​ಔಟ್​​..ನೀವು ಪ್ರಯತ್ನಿಸಬೇಡಿ
author img

By

Published : Feb 20, 2022, 1:36 PM IST

ಫರಿದಾಬಾದ್(ಹರಿಯಾಣ): ಆರೋಗ್ಯವಾಗಿರಬೇಕೆಂದು ಎಲ್ಲರೂ ವ್ಯಾಯಾಮ ಮಾಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ವ್ಯಾಯಾಮ ಮಾಡೋದನ್ನು ನೋಡಿದ್ರೆ, ಆತ ಸಾಯೋದಕ್ಕೇ ವ್ಯಾಯಾಮ ಮಾಡ್ತಿದಾನೇನೋ ಅಂತ ಅನ್ನಿಸದೇ ಇರೋದಿಲ್ಲ.

ಹರಿಯಾಣದ ಫರೀದಾಬಾದ್​ನಲ್ಲಿ ವ್ಯಕ್ತಿಯೋರ್ವ ಒಂದು ಕಟ್ಟಡದ 12ನೇ ಮಹಡಿಯ ಬಾಲ್ಕನಿಯ ಹೊರಗೆ ರೇಲಿಂಗ್ ಹಿಡಿದು ವ್ಯಾಯಾಮ ಮಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಡೇರ್​ ಡೆವಿಲ್ ವರ್ಕೌಟ್‌ ಕಂಡು ಹಲವರು ಅಚ್ಚರಿ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ​​

ಕೆಲವೇ ದಿನಗಳ ಹಿಂದೆ ಮಹಿಳೆಯೋರ್ವಳು ಕೆಳಗೆ ಬಿದ್ದಿದ್ದ ಬಟ್ಟೆಗಳನ್ನು ತರಲು 10 ಮಹಡಿಯಿಂದ ತನ್ನ ಮಗನನ್ನು ಸೀರೆಯ ಮೂಲಕ ಕೆಳಗಿಳಿಸಿದ ಘಟನೆ ಫರೀದಾಬಾದ್​ನ ಸೆಕ್ಟರ್​ 80ರಲ್ಲಿ ನಡೆದಿದ್ದು, ಈ ದೃಶ್ಯವೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈಕೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ 'ಅಜಾಗರೂಕತೆ, ಬೇಜವಾಬ್ದಾರಿತನ, ಸಂವೇದನಾರಹಿತತೆಯ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಅಪಾರ್ಟ್​ಮೆಂಟ್ ಕೂಡಾ ಆಕೆಗೆ ನೋಟಿಸ್ ಜಾರಿ ಮಾಡಿತ್ತು.

ಇದನ್ನೂ ಓದಿ: ಚಂಬಲ್ ನದಿಗೆ ಉರುಳಿದ ಮದುವೆಗೆ ತೆರಳುತ್ತಿದ್ದ ಕಾರು: ಮದುಮಗ ಸೇರಿ 9 ಮಂದಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.