ETV Bharat / bharat

ಶರಣಾಗಿ ಉಚಿತ ಕೋವಿಡ್‌ ಚಿಕಿತ್ಸೆ ಪಡೆಯಿರಿ: ನಕ್ಸಲರಿಗೆ ಪೊಲೀಸರ ಮನವಿ - ಕೋವಿಡ್​ನಿಂದ ಬಳಲುತ್ತಿರುವ ಮಾವೋವಾದಿಗಳು

ಕೋವಿಡ್ ಸೋಂಕು ಮತ್ತು ವಿಷಾಹಾರದಿಂದ ಬಳಲುತ್ತಿರುವ ಮಾವೋವಾದಿ ನಾಯಕರು ಶರಣಾಗಿ ಚಿಕಿತ್ಸೆ ಪಡೆಯುವಂತೆ ಛತ್ತೀಸ್​ಗಢ ಪೊಲೀಸರು ಮನವಿ ಮಾಡಿದ್ದಾರೆ.

Chhattisgarh police offers surrender policy to Maoists
ಮಾವೋವಾದಿಗಳು ಚಿಕಿತ್ಸೆ ಪಡೆಯುವಂತೆ ಮನವಿ
author img

By

Published : May 9, 2021, 9:16 AM IST

ದಾಂತೆವಾಡ (ಛತ್ತೀಸ್​ಗಢ): ಜಿಲ್ಲೆಯಲ್ಲಿ ಕೋವಿಡ್ ಸೋಂಕು ಮತ್ತು ಫುಡ್ ಪಾಯಿಸನಿಂಗ್​ನಿಂದ ಬಳಲುತ್ತಿರುವ ಮಾವೋವಾದಿ ಮುಖಂಡರು ಮತ್ತು ಕೆಡೆಟ್‌ಗಳು ಶರಣಾಗಿ ಉಚಿತ ವೈದ್ಯಕೀಯ ಚಿಕಿತ್ಸೆ ಪಡೆಯುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾವೋವಾದಿ ನಾಯಕರು ಫುಡ್ ಪಾಯಿಸನಿಂಗ್ ಮತ್ತು ಕೋವಿಡ್ ಸೋಂಕಿನಿಂದ ಬಳಲುತ್ತಿರುವ ಬಗ್ಗೆ ನಮಗೆ ಮಾಹಿತಿ ದೊರತಿದೆ. ದಂಡಾರಾಣ್ಯ ವಿಶೇಷ ವಲಯ ಸಮಿತಿ (ಡಿಕೆಎಸ್​ಝೆಡ್​ಸಿ) ಸದಸ್ಯೆ ಸುಜಾತ ಕೋವಿಡ್​ ಸೋಂಕಿನಿಂದ ಬಳಲುತ್ತಿದ್ದು, ಉಸಿರಾಟದ ಸಮಸ್ಯೆಯಿಂದ ನಡೆಯಲಾಗದ ಸ್ಥಿತಿಯಲ್ಲಿದ್ದಾಳೆ ಎಂದು ದಾಂತೇವಾಡ ಎಸ್ಪಿ ಅಭಿಷೇಕ್ ಪಲ್ಲವ್ ತಿಳಿಸಿದರು. ಮಾವೋವಾದಿ ನಾಯಕಿ ಸುಜಾತ ಕುರಿತು ಸುಳಿವು ನೀಡಿದರೆ 25 ಲಕ್ಷ ರೂ. ಬಹುಮಾನ ನೀಡುವುದಾಗಿ ಈಗಾಗಲೇ ಭದ್ರತಾ ಪಡೆಗಳು ಘೋಷಣೆ ಮಾಡಿವೆ.

ಇದನ್ನೂ ಓದಿ: ಮಾರುವೇಷದಲ್ಲಿ ಪೊಲೀಸರ ಕಾರ್ಯಪ್ರವೃತ್ತಿ ಪರೀಕ್ಷೆ ನಡೆಸಿದ ಪೊಲೀಸ್ ಆಯುಕ್ತ

ಮಾವೋವಾದಿಗಳು ಸೋಂಕಿಗೆ ಸರಿಯಾದ ಚಿಕಿತ್ಸೆ ಪಡೆಯದೆ ಅವರ ಪ್ರಾಣವನ್ನು ಅಪಾಯಕ್ಕೆ ತಳ್ಳುತ್ತಿದ್ದಾರೆ ಜೊತೆಗೆ ಸ್ಥಳೀಯ ಗ್ರಾಮಸ್ಥರಿಗೂ ಸೋಂಕು ಹರಡುತ್ತಿದ್ದಾರೆ. ಸುಜಾತ ಮಾತ್ರವಲ್ಲದೆ, ಇತರ ಮಾವೋವಾದಿ ನಾಯಕರಿಗೂ ಸೋಂಕು ತಗುಲಿದೆ. ಇನ್ನು ಕೆಲವರು ಅವಧಿ ಮೀರಿದ ಆಹಾರ ಸೇವಿಸಿ ಫುಡ್​ ಪಾಯಿಸನಿಂಗ್​ನಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಶರಣಾಗಿ ಸರಿಯಾದ ಚಿಕಿತ್ಸೆ ಪಡೆಯಬೇಕು ಎಂದು ಎಸ್ಪಿ ಪಲ್ಲವ್ ಮನವಿ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.