ETV Bharat / bharat

ಹೋಳಿ ಸಂಭ್ರಮದಲ್ಲಿ ಕಂಠಪೂರ್ತಿ ಕುಡಿದು ಡ್ಯಾನ್ಸ್​​.. ತನ್ನಷ್ಟಕ್ಕೆ ತಾನೇ ಚಾಕುವಿನಿಂದ ಇರಿದುಕೊಂಡು ಸಾವು - ಕುಡಿದು ಡ್ಯಾನ್ಸ್ ಮಾಡ್ತಿದ್ದ ವೇಳೆ ಚುಚ್ಚಿಕೊಂಡ ವ್ಯಕ್ತಿ

ಕಂಠಪೂರ್ತಿ ಕುಡಿದು ಸ್ನೇಹಿತರೊಂದಿಗೆ ಡ್ಯಾನ್ಸ್​ ಮಾಡ್ತಿದ್ದ ವ್ಯಕ್ತಿಯೋರ್ವ ಚಾಕುವಿನಿಂದ ಚುಚ್ಚಿಕೊಂಡಿದ್ದು, ಪರಿಣಾಮ ತೀವ್ರ ರಕ್ತಸ್ರಾವವಾಗಿ ಪ್ರಾಣ ಕಳೆದುಕೊಂಡಿದ್ದಾನೆ. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ..

Dancing Man Stabs Himself During Stunt
Dancing Man Stabs Himself During Stunt
author img

By

Published : Mar 19, 2022, 3:22 PM IST

Updated : Mar 19, 2022, 4:53 PM IST

ಇಂದೋರ್​(ಮಧ್ಯಪ್ರದೇಶ) : ದೇಶಾದ್ಯಂತ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬದ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡ್ತಿದ್ದ ವ್ಯಕ್ತಿಯೋರ್ವ ತನ್ನಷ್ಟಕ್ಕೆ ತಾನೇ ಚಾಕುವಿನಿಂದ ಇರಿದುಕೊಂಡು ಪ್ರಾಣ ಕಳೆದುಕೊಂಡಿದ್ದಾನೆ. ಮಧ್ಯಪ್ರದೇಶದ ಇಂದೋರ್​​ನಲ್ಲಿ ಈ ಘಟನೆ ನಡೆದಿದ್ದು, ಅದರ ವಿಡಿಯೋ ವೈರಲ್​​ ಆಗಿದೆ.

ಹೋಳಿ ಸಂಭ್ರಮದಲ್ಲಿ ಕಂಠಪೂರ್ತಿ ಕುಡಿದು ಡ್ಯಾನ್ಸ್​​ ವೇಳೆ ನಡೀತು ಅವಘಡ

ಇಂದೋರ್​​ನ ಬಂಗಂಗಾದಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಹೋಳಿ ಅಂಗವಾಗಿ ತನ್ನ ಸ್ನೇಹಿತರೊಂದಿಗೆ ಗೋಪಾಲ್​ ಸೋಲಂಕಿ(38) ಎಂಬಾತ ಡ್ಯಾನ್ಸ್​ ಮಾಡ್ತಿದ್ದ. ಈ ವೇಳೆ ಆತ ಕಂಠಪೂರ್ತಿ ಮದ್ಯಪಾನ ಮಾಡಿದ್ದ.

ಕೈಯಲ್ಲಿ ಚಾಕು ಹಿಡಿದುಕೊಂಡು ಡ್ಯಾನ್ಸ್​ ಮಾಡ್ತಿದ್ದಾಗ ಏಕಾಏಕಿ ಐದು ಸಲ ಎದೆಗೆ ಚುಚ್ಚಿಕೊಂಡಿದ್ದಾನೆ. ಸ್ಟಂಟ್​ ಮಾಡುವ ಉದ್ದೇಶದಿಂದ ಆತ ಈ ರೀತಿಯಾಗಿ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

  • A man succumbed to injuries in Indore, he was dancing with a knife in his hand during holi celebrations stabbed himself, he was taken to a hospital where the doctors declared him dead @ndtv @ndtvindia pic.twitter.com/7tbGC9T9BB

    — Anurag Dwary (@Anurag_Dwary) March 19, 2022 " class="align-text-top noRightClick twitterSection" data=" ">

ಇದನ್ನೂ ಓದಿ: ಕಾಮುಕರ ಕುಟುಂಬ.. ಅಪ್ರಾಪ್ತೆ ಮೇಲೆ ತಂದೆ, ಚಿಕ್ಕಪ್ಪ, ಅಜ್ಜ, ಸಹೋದರನಿಂದಲೂ ಅತ್ಯಾಚಾರ!

ತಕ್ಷಣವೇ ಆತನನ್ನ ಅರಬಿಂದೋ ಇನ್​​ಸ್ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸ್​​​ಗೆ ದಾಖಲು ಮಾಡಲಾಗಿದೆ. ಆದರೆ, ತೀವ್ರ ರಕ್ತಸ್ರಾವವಾಗಿ ಆತ ಸಾವನ್ನಪ್ಪಿದ್ದಾನೆಂದು ವೈದ್ಯರು ಘೋಷಣೆ ಮಾಡಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Last Updated : Mar 19, 2022, 4:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.