ETV Bharat / bharat

ಇಂಡೋ-ಚೀನಾ ಗಡಿ ಗಲಾಟೆ: ಫಲಪ್ರದವಾಗದ 11ನೇ ಸುತ್ತಿನ ಭಾರತ-ಚೀನಾ ಮಿಲಿಟರಿ ಮಾತುಕತೆ

author img

By

Published : Apr 11, 2021, 6:03 AM IST

ಡೆಪ್​ಸ್ಯಾಂಗ್, ಗೋಗ್ರಾ ಮತ್ತು ಹಾಟ್​ಸ್ಟ್ರಿಂಗ್ಸ್​ ಪ್ರದೇಶದಿಂದ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ಬಗ್ಗೆ ಉಭಯ ರಾಷ್ಟ್ರಗಳು ಸುದೀರ್ಘವಾಗಿ ಚರ್ಚಿಸಿದವು. ಆದರೆ, ಚೀನಾ ತನ್ನ ನಿಲುವು ಸಡಿಲಿಸಲು ಹಿಂದೇಟು ಹಾಕಿದೆ. ಲಡಾಕ್​ನ ಕೆಲವು ನಿರೀಕ್ಷೆಗಳನ್ನು ಅದು ನಿರಾಕರಿಸಿತು ಎಂಬುದು ತಿಳಿದುಬಂದಿದೆ.

Indo-china
Indo-china

ನವದೆಹಲಿ: ಚುಷುಲ್‌ನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಭಾರತದ ಬದಿಯಲ್ಲಿ ನಡೆದ ಭಾರತೀಯ ಸೇನೆಯ ಹಿರಿಯ ಕಮಾಂಡರ್‌ ಮತ್ತು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ನಡುವಿನ 11ನೇ ಸುತ್ತಿನ ಮಾತುಕತೆಯು ಹೆಚ್ಚಿನ ಪ್ರಗತಿ ಸಾಧಿಸಿಲ್ಲ.

ಭದ್ರತಾ ಮೂಲಗಳ ಪ್ರಕಾರ, ಶುಕ್ರವಾರದ ಮಾತುಕತೆಗಳಲ್ಲಿ ಹೆಚ್ಚಿನ ಮುಂದಾಲೋಚನೆ ಕಂಡುಬರಲಿಲ್ಲ. ಪ್ಯಾಂಗೊಂಗ್ ತ್ಸೊ ನಿಷ್ಕ್ರಿಯತೆಯ ಮೇಲೆ ಯಾವುದೇ ನಿರೀಕ್ಷಿತ ಸಾಧ್ಯತೆಗಳು ಕಂಡುಕೊಳ್ಳಲು ಆಗಲಿಲ್ಲ. ಬಾಕಿ ಉಳಿದಿರುವ ಪ್ರದೇಶಗಳಲ್ಲಿ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ಕುರಿತು ಚರ್ಚಿಸಲಾಯಿತು. ಯಾವುದೇ ರೀತಿಯ ಘಟನೆ ನಡೆಯದಂತೆ ಎರಡೂ ರಾಷ್ಟ್ರಗಳು ಸ್ಥಿರತೆ ಕಾಪಾಡಿಕೊಳ್ಳಲು ಸಹಮತ ವ್ಯಕ್ತಪಡಿಸಿವೆ. ಬಾಕಿ ಉಳಿದಿರುವ ಬಿಕ್ಕಟ್ಟುಗಳ ಬಗ್ಗೆ ಶೀಘ್ರವೇ ಇತ್ಯಾರ್ಥಗೊಳಿಸಲು ಒಪ್ಪಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.