ETV Bharat / bharat

ದಲಿತನೆಂಬ ಕಾರಣಕ್ಕೆ ಮಾರಣಾಂತಿಕ ಹಲ್ಲೆ..! ಯುಪಿಯಲ್ಲಿ ಮೃಗೀಯವಾಗಿ ನಡೆದುಕೊಂಡ ಗುಂಪು - ಯುಪಿ ಪೊಲೀಸ್

ದಲಿತ ಎಂಬ ಕಾರಣಕ್ಕೆ ಯುವಕನೊರ್ವನಿಗೆ ಗುಂಪೊಂದು ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್‌ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ. ಘಟನೆ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Dalit man beaten up, hit on privates in Uttar Pradesh
ದಲಿತನೆಂಬ ಕಾರಣಕ್ಕೆ ಮಾರಣಾಂತಿಕ ಹಲ್ಲೆ..! ಯುಪಿಯಲ್ಲಿ ಮೃಗೀಯವಾಗಿ ನಡೆದುಕೊಂಡ ಗುಂಪು
author img

By

Published : Jul 10, 2021, 4:01 PM IST

ಲಖನೌ: 20 ವರ್ಷದ ದಲಿತ ಯುವಕನನ್ನು ಗುಂಪೊಂದು ಸಾರ್ವಜನಿಕವಾಗಿ ಹಿಗ್ಗಾ ಮುಗ್ಗಾ ಥಳಿಸಿ ಅಮಾನವೀಯವಾಗಿ ವರ್ತಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ್‌ ದೇಹತ್‌ ಜಿಲ್ಲೆಯಲ್ಲಿ ನಡೆದಿದೆ. ಅಂಗಡಿಯೊಂದರಲ್ಲಿ ಕುಳಿತಿದ್ದ ಯುವಕನನ್ನು ಹೊರಗಡೆ ಎಳೆದುಕೊಂಡು ಬಂದು ಕಸದ ರಾಶಿ ಪಕ್ಕದಲ್ಲಿ ಹೊರಳಾಡಿಸಿ, ಹೊಡೆದು ಕ್ರೂರವಾಗಿ ನಡೆದುಕೊಂಡಿದ್ದಾರೆ. ಮಾತ್ರವಲ್ಲದೆ ಅರೆಬೆತ್ತಲೆಯನ್ನಾಗಿ ಮಾಡಿ ಮರಕ್ಕೆ ಕಟ್ಟಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.

ದಲಿತನೆಂಬ ಕಾರಣಕ್ಕೆ ಮಾರಣಾಂತಿಕ ಹಲ್ಲೆ..! ಯುಪಿಯಲ್ಲಿ ಮೃಗೀಯವಾಗಿ ನಡೆದುಕೊಂಡ ಗುಂಪು

ಕಾನ್ಪುರ್‌ ದೇಹತ್‌ನ ಅಕ್ಬರ್‌ಪುರ್‌ನಲ್ಲಿ ಕಳೆದ 2 ದಿನಗಳ ಹಿಂದೆ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳ ಪತ್ತೆಗಾಗಿ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯುವಕನನ್ನು ಥಳಿಸುತ್ತಿರುವಾಗಲೇ ಆತನ ಜಾತಿಯನ್ನು ಕೇಳಿದ್ದಾರೆ. ಆತ ದಲಿತ ಎಂದು ತಿಳಿದ ಮೇಲೆ ಮತ್ತಷ್ಟು ಕ್ರೂರವಾಗಿ ನಡೆದುಕೊಂಡಿದ್ದಾರೆ. ನೋವಿನಿಂದ ಎಷ್ಟೇ ಜೋರಾಗಿ ಕೂಗಿದರೂ ಅಷ್ಟಕ್ಕೇ ಬಿಡದ ಗುಂಪು ಮೃಗೀಯವಾಗಿ ವರ್ತಿಸಿದ್ದಾರೆ. ಸದಸ್ಯ ಈ ವಿಡಿಯೋ ವೈರಲ್‌ ಆಗಿದ್ದು, ಭಾರಿ ಆಕ್ರೋಶಕ್ಕೂ ಕಾರಣವಾಗಿದೆ.

  • पीटने वाला: "कौन कास्ट हो?"
    पिटने वाला: "चमार हैं."

    फिर डंडों की बौछार बढ़ जाती है।उसे लात, घूसों,डंडों से बेरहमी से पीटा। जिस्म के नाज़ुक हिस्सों में डंडे घुसेड़े।कानपुर देहात में मामला प्रेम प्रसंग का बताते हैं।पुलिस ने एफ़ आई आर कर एक को पकड़ लिया है।दो की तलाश है। pic.twitter.com/BAU4QN2IiZ

    — Kamal khan (@kamalkhan_NDTV) July 10, 2021 " class="align-text-top noRightClick twitterSection" data=" ">

ಕಮಲ್‌ ಖಾನ್‌ ಎಂಬುವವರು ಘಟನೆ ದೃಶ್ಯವನ್ನು ಟ್ವೀಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.