ಧರ್ಮಶಾಲಾ: ಮಗುವಿನ ತುಟಿಗಳಿಗೆ ಮುತ್ತು ನೀಡಿ, ಆತನಿಗೆ ತನ್ನ ನಾಲಿಗೆಯನ್ನು ಸ್ಪರ್ಶಿಸುವಂತೆ ತಿಳಿಸಿದ ದಲೈಲಾಮಾ ಅವರ ನಡೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ವಿವಾದವನ್ನು ಮನಗಂಡಿರುವ ದಲೈಲಾಮಾ ಇದೀಗ ಕ್ಷಮೆ ಯಾಚಿಸಿದ್ದಾರೆ.
ಇತ್ತೀಚಿನ ಘಟನೆಯ ವಿಡಿಯೋ ತುಣುಕು ಪ್ರಸಾರವಾಗಿದೆ. ಬಾಲಕನೊಬ್ಬ ದಲೈಲಾಮಾ ಅವರನ್ನು ತಬ್ಬಿಕೊಳ್ಳಬಹುದೇ ಎಂದು ಕೇಳಿದ. ಈ ಸಂದರ್ಭದಲ್ಲಿ ಅವರು ಮಗುವಿನ ತುಟಿಗಳಿಗೆ ಚುಂಬಿಸಿದ್ದರು. ನಂತರ ಬಾಲಕನಿಗೆ ನಾಲಿಗೆಯನ್ನು ಸ್ಪರ್ಶಿಸುವಂತೆ ಕೇಳಿರುವುದು ವಿಡಿಯೋದಲ್ಲಿದೆ. ತಕ್ಷಣವೇ ಎಚ್ಚೆತ್ತುಕೊಂಡ ದಲೈ ಲಾಮಾ ಅವರು ಹುಡುಗ ಮತ್ತು ಅವರ ಕುಟುಂಬದಲ್ಲಿ ಕ್ಷಮೆ ಯಾಚಿಸಿದ್ದಾರೆ. ಈ ಘಟನೆ ಬಗ್ಗೆ ದಲೈ ಲಾಮಾ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಘಟನೆ ಹಿನ್ನೆಲೆ ಏನು?: ತಿಂಗಳ ಹಿಂದೆ ನಡೆದ ಕಾರ್ಯಕ್ರಮಯೊಂದರಲ್ಲಿ ದಲೈಲಾಮಾ ಅವರ ಆಶೀರ್ವಾದ ಪಡೆಯಲು ಬಂದ ಬಾಲಕನನ್ನು ಧರ್ಮಗುರುಗಳು ಚುಂಬಿಸಿದರು. ನಂತರ ನಾಲಿಗೆಯನ್ನು ಸ್ಪರ್ಶಿಸಲು ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿದೆ. ವಿಡಿಯೋದಲ್ಲಿನ ಧರ್ಮಗುರುಗಳ ನಡುವಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಯಿತು. ಧರ್ಮಗುರುಗಳು ಬಾಲಕನ ಜೊತೆಗೆ ಹೀಗೆ ನಡೆದುಕೊಳ್ಳಬಾರದಿತ್ತು ಎಂದು ಎಲ್ಲೆಡೆ ಭಾರೀ ಟೀಕೆಗಳು ವ್ಯಕ್ತವಾಯಿತು.
'ಸಂಪೂರ್ಣವಾಗಿ ಅನಾರೋಗ್ಯ' ಎಂದ ನೆಟ್ಟಿಗರು ಗರಂ: ನೆಟ್ಟಿಗರು ದಲೈ ಲಾಮಾ ಅವರನ್ನು ತಂಬಾ ಟ್ರೋಲ್ ಮಾಡುತ್ತಿದ್ದಾರೆ. ಧಾರ್ಮಿಕ ಮುಖಂಡರಾಗಿರುವ ಅವರಿಗೆ ಇಂತಹ ವಿಷಯಗಳು ಹಿಡಿಸುವುದಿಲ್ಲವೇ ಎಂಬ ಹಲವರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ನೆಟ್ಟಿಗರು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತಪಡಿಸಿದರು. ದಲೈ ಲಾಮಾ ಅವರ ಕ್ರಮಗಳನ್ನು 'ಹಗರಣೀಯ', 'ಅಸಹ್ಯ' ಮತ್ತು 'ಸಂಪೂರ್ಣವಾಗಿ ಅನಾರೋಗ್ಯ' ಎಂದು ವ್ಯಾಖ್ಯಾನಕಾರರು ಕಾಮೆಂಟ್ ಮಾಡಿದರು. 'ಕಪಟ ಸುಳ್ಳು ಪ್ರವಾದಿ' ಎಂದು ಉಳಿದ ನೆಟ್ಟಿಗರು, ದಲೈ ಲಾಮಾ ಅವರ ವಿರುದ್ಧ ಮುಗಿಬಿದ್ದರು.
ಇದನ್ನೂ ಓದಿ: ರಾಜ್ಯಪಾಲ v/s ಸರ್ಕಾರ: ತಮಿಳುನಾಡು ಗವರ್ನರ್ ವಿರುದ್ಧ ಸಿಎಂ ಸ್ಟಾಲಿನ್ ಮತ್ತೊಂದು ನಿರ್ಣಯ
ದಲೈಲಾಮಾ ಅವರ ಈ ಪ್ರದರ್ಶನವನ್ನು ನೋಡಿ ಸಂಪೂರ್ಣ ಆಘಾತವಾಯಿತು. ಈ ಹಿಂದೆಯೂ ಅವರು ನೀಡಿದ್ದ ಲೈಂಗಿಕ ವಿಚಾರಕ್ಕೆ ಸಂಬಂಧಿಸಿದ ಕಾಮೆಂಟ್‌ಗಳಿಗೆ ಕ್ಷಮಿಸಬಹುದು. ಆದರೆ, ಸಣ್ಣ ಹುಡುಗನಿಗೆ "ಈಗ ನನ್ನ ನಾಲಿಗೆಯನ್ನು ಸ್ಪರ್ಶಿಸಲು" ಎಂದು ಹೇಳುವುದು ಅಸಹ್ಯಕರವಾಗಿದೆ ಎಂದು ಸಂಗೀತಾ ಎಂಬುವರು ಕಾಮೆಂಟ್ ಮಾಡಿದ್ದಾರೆ. ಮತ್ತೊಂದು ಪೋಸ್ಟ್ನಲ್ಲಿ ರಾಖಿ ತ್ರಿಪಾಠಿ, 'ನಾನು ಏನು ನೋಡಿದೆ? ಆ ಮಗುವಿಗೆ ಏನು ಅನಿಸಿರಬೇಕು? ಇದು ಅಸಹ್ಯಕರ' ಎಂದು ಬರೆದಿದ್ದಾರೆ.
2019ರಲ್ಲೂ ದಲೈಲಾಮಾ ಭಾರೀ ವಿವಾದ: 2019ರಲ್ಲಿ ದಲೈಲಾಮಾ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. ತಮ್ಮ ಉತ್ತರಾಧಿಕಾರಿ ಮಹಿಳೆ ಆಗಬೇಕಾದರೆ, ಅವರು ತುಂಬಾ ಆಕರ್ಷಕವಾಗಿರಬೇಕೆಂದು ಹೇಳಿಕೊಂಡಿದ್ದರು. ಈ ಹೇಳಿಕೆಯೂ ಕೂಡ ಭಕ್ತರ ನಂಬಿಕೆಗೆ ನೋವು ಉಂಟು ಮಾಡಿತ್ತು. ಜೊತೆಗೆ ಟೀಕೆಗೂ ಒಳಗಾಗಿತ್ತು. ಹೆಣ್ಣು ಮಗಳೊಬ್ಬಳು ತನ್ನ ಉತ್ತರಾಧಿಕಾರಿಯಾದರೆ, ಆಕೆ ತುಂಬಾ ಸುಂದರಿಯಾಗಿರಬೇಕು ಎಂದು ವಿದೇಶಿ ಮಾಧ್ಯಮಕ್ಕೆ ನೀಡಿದ್ದ ಸಂದರ್ಶನಯೊಂದರಲ್ಲಿ ತಿಳಿಸಿದ್ದರು.
ಇದನ್ನೂ ಓದಿ: ಭಾರತದ ಸೂಜಿ ಮೊನೆಯಷ್ಟು ಜಾಗವನ್ನೂ ಅತಿಕ್ರಮಿಸಲು ಬಿಡೆವು: ಚೀನಾಗೆ ಅಮಿತ್ ಶಾ ಎಚ್ಚರಿಕೆ