ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ನೇತೃತ್ವದ ಸಚಿವ ಸಂಪುಟ ದೀಪಾವಳಿ ಹಬ್ಬದ ಪ್ರಯುಕ್ತ ಭರ್ಜರಿ ಗಿಫ್ಟ್ ನೀಡಿದೆ. ಶೇ. 3ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ನಿರ್ಧಾರ ಕೈಗೊಂಡಿದೆ.
ಸಚಿವ ಸಂಪುಟ ಸಭೆ ಬಳಿಕ ಇಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾಧ್ಯಮಗೋಷ್ಠಿ ನಡೆಸಿ ಈ ಮಾಹಿತಿ ಹಂಚಿಕೊಂಡರು. ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.28ರಿಂದ ಶೇ. 31ಕ್ಕೆ ಏರಿಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದ್ದು, ಜುಲೈ 1, 2021ರಿಂದಲೇ ಇದು ಅನ್ವಯ ಆಗಲಿದೆ ಎಂದಿರುವ ಅವರು, ಪಿಂಚಣಿದಾರರು ಇದರ ಲಾಭ ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.
-
Dearness Allowance for Central Government employees to be increased from 28% to 31%, will be effective from from July 1, 2021; to benefit pensioners as well pic.twitter.com/H9qvbuMD36
— ANI (@ANI) October 21, 2021 " class="align-text-top noRightClick twitterSection" data="
">Dearness Allowance for Central Government employees to be increased from 28% to 31%, will be effective from from July 1, 2021; to benefit pensioners as well pic.twitter.com/H9qvbuMD36
— ANI (@ANI) October 21, 2021Dearness Allowance for Central Government employees to be increased from 28% to 31%, will be effective from from July 1, 2021; to benefit pensioners as well pic.twitter.com/H9qvbuMD36
— ANI (@ANI) October 21, 2021
7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಈ ಹಿಂದೆ ಜುಲೈ ತಿಂಗಳಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ DAಯನ್ನು ಶೇ. 17ರಿಂದ ಶೇ 28ಕ್ಕೇರಿಕೆ ಮಾಡಿತ್ತು. ಆದರೆ ಇದೀಗ ಶೇ. 28ರಿಂದ ಶೇ. 31ಕ್ಕೆ ಏರಿಸಲಾಗಿದೆ.
ಇದನ್ನೂ ಓದಿರಿ: 100 ಕೋಟಿ ವ್ಯಾಕ್ಸಿನೇಷನ್ ಪೂರೈಸಿದ ಭಾರತ... ಐತಿಹಾಸಿಕ ಸಾಧನೆಗೆ ಬೆನ್ನುತಟ್ಟಿದ ಅಮೆರಿಕ
ಇದರಿಂದ ಕೇಂದ್ರದ 47.14 ಲಕ್ಷ ನೌಕರರು ಹಾಗೂ 68.62 ಲಕ್ಷ ಪಿಂಚಣಿದಾರರು ಕೇಂದ್ರದ ಲಾಭ ಪಡೆದುಕೊಳ್ಳಲಿದ್ದಾರೆ. ಇದಕ್ಕಾಗಿ ಕೇಂದ್ರ ಸರ್ಕಾರ 9,488.70 ಕೋಟಿ ರೂ. ಹೆಚ್ಚುವರಿಯಾಗಿ ವೆಚ್ಚ ಮಾಡಲಿದೆ.