ETV Bharat / bharat

ಅಡುಗೆ ಮಾಡುವಾಗ ಸಿಲಿಂಡರ್ ಸ್ಫೋಟ: 7 ಮಂದಿ ಸಾವು, ಹಲವರ ಸ್ಥಿತಿ ಗಂಭೀರ - cylinder exploded in UP

ಉತ್ತರ ಪ್ರದೇಶದ ಗೋಂಡಾ ಜಿಲ್ಲೆಯ ಗ್ರಾಮವೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಅವಘಡ ನಡೆದಿದೆ.

cylinder exploded at Gonda
ಸಿಲಿಂಡರ್ ಸ್ಪೋಟದಿಂದ ಮನೆಗಳು ಧ್ವಂಸಗೊಂಡಿರುವುದು
author img

By

Published : Jun 2, 2021, 6:48 AM IST

ಗೋಂಡಾ ( ಉತ್ತರ ಪ್ರದೇಶ ): ಜಿಲ್ಲೆಯ ವಾಜಿಗಂಜ್ ಪೊಲೀಸ್​ ಠಾಣಾ ವ್ಯಾಪ್ತಿಯ ಟಿಕ್ರಿ ಗ್ರಾಮದ ಮನೆಯೊಂದರಲ್ಲಿ ಗ್ಯಾಸ್​ ಸಿಲಿಂಡರ್ ಸ್ಫೋಟಗೊಂಡ ಘಟನೆ ನಡೆದಿದೆ.

ಸಿಲಿಂಡರ್ ಸ್ಫೋಟದಿಂದ ಗ್ರಾಮದ ಎರಡು ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದು, ಅವಶೇಷಗಳಡಿ ಸುಮಾರು 15 ಜನ ಸಿಲುಕಿಕೊಂಡಿದ್ದರು. ಈ ಪೈಕಿ 7 ಜನರು ಮೃತಪಟ್ಟಿದ್ದು, ಇನ್ನುಳಿದ 7 ಜನರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಂದು ಮಗು ಅವಶೇಷಗಳಡಿ ಸಿಲುಕಿರುವ ಶಂಕೆಯಿದೆ.

ಸಿಲಿಂಡರ್ ಸ್ಫೋಟದಿಂದ ಮನೆಗಳು ಧ್ವಂಸಗೊಂಡಿರುವುದು

ಅಡುಗೆ ಮಾಡುವಾಗ ಹಠಾತ್ ಸಿಲಿಂಡರ್ ಸ್ಫೋಟಗೊಂಡಿದೆ ಎಂದು ಹೇಳಲಾಗ್ತಿದೆ. ಈ ಕುರಿತ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.