ETV Bharat / bharat

Salem cylinder blast: ಸೇಲಂನಲ್ಲಿ ಸಿಲಿಂಡರ್​ ಬ್ಲಾಸ್ಟ್​​​: ನಾಲ್ವರು ದುರ್ಮರಣ, 14 ಮಂದಿ ಗಂಭೀರ - Salem cylinder blast

Salem cylinder blast: ಸಿಲಿಂಡರ್​​ ಸ್ಫೋಟಗೊಂಡು ನಾಲ್ವರು ಸಾವನ್ನಪ್ಪಿ, 14 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ.

Cylinder blast
Cylinder blast
author img

By

Published : Nov 23, 2021, 3:01 PM IST

Updated : Nov 23, 2021, 3:06 PM IST

ಸೇಲಂ(ತಮಿಳುನಾಡು): ಇಲ್ಲಿನ ಕರುಂಕಲ್​​ ಪಟ್ಟಿಯಲ್ಲಿ ಸಿಲಿಂಡರ್​​ ಸ್ಫೋಟಗೊಂಡಿರುವ (Salem cylinder blast) ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ, ಹಲವರು ಗಂಭೀರವಾಗಿ ಗಾಯಗೊಂಡರು.

ಸೇಲಂನಲ್ಲಿ ಸಿಲಿಂಡರ್​ ಬ್ಲಾಸ್ಟ್​​​, ನಾಲ್ವರು ದುರ್ಮರಣ

ತಮಿಳುನಾಡಿನ ಸೇಲಂನ ಕರುಂಕಲ್​ ಪಟ್ಟಿಯಲ್ಲಿರುವ ಪಂತುರಂಗನಾಥರ ಬೀದಿಯಲ್ಲಿ ಗಣೇಶನ್​ ಎಂಬವರು ವಾಸವಿದ್ದಾರೆ. ಇಂದು ಬೆಳಗ್ಗೆ 6:30ರ ವೇಳೆ ಅವರ ಮನೆಯಲ್ಲಿ ಗ್ಯಾಸ್​​ ಸಿಲಿಂಡರ್​​​ ಸ್ಫೋಟಗೊಂಡಿದ್ದು, ಪರಿಣಾಮ ಐದು ಮನೆ ಕುಸಿತಗೊಂಡಿವೆ. ಘಟನೆಯಿಂದಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 14 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ತಲುಪಿರುವ ಅಗ್ನಿಶಾಮಕ ದಳದ ಸಿಬ್ಬಂದಿ ಪೂಜಾಶ್ರೀ(10) ಎಂಬ ಬಾಲಕಿಯನ್ನು ಜೀವಂತವಾಗಿ ಹೊರತೆಗೆದಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಎಲ್ಲರನ್ನೂ ಸೇಲಂ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ಹೇಳುತ್ತಿದ್ದಂತೆ ಥೂ.. ಥೂ.. ಎಂದು ಗೇಲಿ ಮಾಡಿದ ರಮೇಶ್ ಜಾರಕಿಹೊಳಿ‌

ಕಟ್ಟಡದ ಅವಶೇಷಗಳಡಿ ಸಿಲುಕಿರುವ ಪದ್ಮನಾಭನ್ ​(49), ಆತನ ಪತ್ನಿ ದೇವಿ (36), ಹಾಗೂ ಮತ್ತೋರ್ವ ಹುಡುಗ ರಾಮ್ ಎಂಬವರನ್ನು ​(18) ಹೊರಗೆ ತೆಗೆಯುವ ಕೆಲಸ ಮುಂದುವರೆದಿದೆ. ಘಟನೆ ಬಗ್ಗೆ ಈಗಾಗಲೇ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

Last Updated : Nov 23, 2021, 3:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.