ETV Bharat / bharat

ಸೈಕ್ಲೋನ್​ 'ಯಾಸ್​' ಎದುರಿಸಲು ಸಜ್ಜಾದ ಒಡಿಶಾ

ಯಾಸ್​ ಚಂಡಮಾರುತ ಹಿನ್ನೆಲೆಯಲ್ಲಿ ಒಡಿಶಾದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಹೈ-ಅಲರ್ಟ್​ ಘೋಷಣೆ ಮಾಡಲಾಗಿದೆ.

Cyclone Yaas
Cyclone Yaas
author img

By

Published : May 23, 2021, 4:50 PM IST

Updated : May 23, 2021, 5:02 PM IST

ಭುವನೇಶ್ವರ್(ಒಡಿಶಾ): ತೌಕ್ತೆ ಚಂಡಮಾರುತದ ಬೆನ್ನಲ್ಲೇ ಇದೀಗ ಕೆಲವೊಂದು ರಾಜ್ಯಗಳಲ್ಲಿ ಸೈಕ್ಲೋನ್​ 'ಯಾಸ್​' ಭೀತಿ ಎದುರಾಗಿದೆ. ಪ್ರಮುಖವಾಗಿ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಇದು ಹಾದು ಹೋಗಲಿದೆ.

ಸೈಕ್ಲೋನ್​ ಭೀತಿ ಎದುರಿಸಲು ಒಡಿಶಾ ಸರ್ಕಾರ ಎಲ್ಲ ರೀತಿಯಿಂದಲೂ ಸಜ್ಜುಗೊಂಡಿದೆ. 22 ಎನ್​​​ಡಿಆರ್​ಎಫ್, 66 ಓಡಿಆರ್​ಎಎಫ್​​ ಸೇರಿದಂತೆ 177 ಅಗ್ನಿಶಾಮಕ ದಳ ನೇಮಕ ಮಾಡಲಾಗಿದೆ. ಸೈಕ್ಲೋನ್​​ನಿಂದ ತೊಂದರೆಗೊಳಗಾಗುವ ಬಾಲಸೋರ್​​ನಲ್ಲಿ 7 ತಂಡ, ಭದ್ರಕ್​​ನಲ್ಲಿ 4, ಕೇಂದ್ರಪಾರಾದಲ್ಲಿ 3, ಜಜ್​ಪುರ್​​ಗೆ 2 ತಂಡ ಹಾಗೂ ಜಗತ್ಸಿಂಗ್​ಪುರ್, ಮಯೂರ್​ಭಂಜ್​​ನಲ್ಲಿ ತಲಾ 1 ತಂಡ ನೇಮಕ ಮಾಡಲಾಗಿದೆ.

ಸೈಕ್ಲೋನ್​ 'ಯಾಸ್​' ಎದುರಿಸಲು ಸಜ್ಜಾದ ಒಡಿಶಾ

ಇದನ್ನೂ ಓದಿ: ಸಣ್ಣ ತಪ್ಪಿನಿಂದ ಭೀಕರ ಅಪಘಾತ... ಸಿಸಿಟಿವಿ ವಿಡಿಯೋ ಪೋಸ್ಟ್ ಮಾಡಿದ ಪೊಲೀಸರು

ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ ಈಗಾಗಲೇ ಚಂಡಮಾರುತದ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಯಾಸ್​ ಸೈಕ್ಲೋನ್​​ ಬುಧವಾರ (ಮೇ.26) ಒಡಿಶಾ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ.

Modi meeting
ಅಧಿಕಾರಿಗಳೊಂದಿಗೆ ನಮೋ ಮಹತ್ವದ ಸಭೆ

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಇಂದು ದೂರ ಸಂಪರ್ಕ, ವಿದ್ಯುತ್​, ಭೂ ವಿಜ್ಞಾನ, ಎನ್​ಡಿಆರ್​ಎಫ್​ ಸೇರಿದಂತೆ ಅನೇಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Last Updated : May 23, 2021, 5:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.