ಪಶ್ಚಿಮ ಬಂಗಾಳ/ ಒಡಿಶಾ: ಯಾಸ್ ಚಂಡಮಾರುತವು ಪಶ್ಚಿಮ ಬಂಗಾಳ ಮತ್ತು ಒಡಿಶಾದ ಕರಾವಳಿ ಪ್ರದೇಶಗಳಲ್ಲಿ ಭೂ ಕುಸಿತವನ್ನುಂಟು ಮಾಡಿದೆ. ಬುಧವಾರ ಬೆಳಗ್ಗೆ 9 ಗಂಟೆಗೆ ಶುರುವಾದ ಭೂ ಕುಸಿತ ಮುಂದುವರಿದಿದೆ.
ಯಾಸ್ ಆರ್ಭಟ ಜೋರಾದ ಹಿನ್ನೆಲೆ, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಸೈಕ್ಲೋನ್ಗೆ ಈವರೆಗೆ ನಾಲ್ವರು ಮೃತಪಟ್ಟಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ. ಪರಿಸ್ಥಿತಿ ನಿಭಾಯಿಸಲು ಸೇನಾ ಸಿಬ್ಬಂದಿ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಒಡಿಶಾದಲ್ಲಿ ಈವರೆಗೆ 5.80 ಲಕ್ಷ ಜನರನ್ನು ಹಾಗೂ ಬಂಗಾಳದಲ್ಲಿ 11 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಬಂಗಾಳದಲ್ಲಿ ಭಾರಿ ಮಳೆಯಾಗುತ್ತಿದ್ದು, ಸಮುದ್ರದಲ್ಲಿ ಸುಂಟರಗಾಳಿ ಎದ್ದಿದೆ. ಬಂಗಾಳದ ಅನೇಕ ಹಳ್ಳಿಗಳು ಮಳೆಯ ನೀರಿನಿಂದ ಮುಳುಗಡೆಯಾಗಿವೆ. ಆ ಗ್ರಾಮಗಳ ಜನರನ್ನು ಎನ್ಡಿಆರ್ಎಫ್ ಸಿಬ್ಬಂದಿ ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಒಡಿಶಾದಲ್ಲಿ ಎದ್ದಿರುವ ಚಂಡಮಾರುತದ ಅಬ್ಬರಕ್ಕೆ ನೂರಾರು ಹಡಗುಗಳು, ದೋಣಿಗಳು ಹಾನಿಗೊಳಗಾಗಿವೆ.
ನಾಳೆ ಪ್ರಧಾನಿ ಮೋದಿ, ಚಂಡಮಾರುತದಿಂದ ಹಾನಿಗೊಳಗಾದ ಸ್ಥಳಕ್ಕೆ ಭೇಟಿ ನೀಡಲಿದ್ದು, ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.