ETV Bharat / bharat

ತೌಕ್ತೆ ಬೆನ್ನಲ್ಲೇ ಮತ್ತೊಂದು ಸೈಕ್ಲೋನ್ ರೆಡಿ: ಒಡಿಶಾ, ಬಂಗಾಳಕ್ಕೆ 'ಯಾಸ್'​ ಭೀತಿ

ತೌಕ್ತೆ ತಾಪತ್ರಯ ಮುಗಿಯುತ್ತಿದ್ದಂತೇ 'ಯಾಸ್' ಹೆಸರಿನ ಹೊಸ ಚಂಡಮಾರುತವು ಒಡಿಶಾ ಹಾಗೂ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸುವ ಭೀತಿ ಎದುರಾಗಿದೆ.

Cyclone Yaas likely to hit Odisha on May 26
ಯಾಸ್ ಚಂಡಮಾರುತ
author img

By

Published : May 20, 2021, 10:54 AM IST

ಭುವನೇಶ್ವರ: ಪಶ್ಚಿಮ ಕರಾವಳಿಯಲ್ಲಿ ಅಬ್ಬರ ತೋರಿಸಿದ ತೌಕ್ತೆ ಚಂಡಮಾರುತ ದುರ್ಬಲಗೊಳ್ಳುತ್ತಿದ್ದರೆ, ಇತ್ತ 'ಯಾಸ್' ಹೆಸರಿನ ಹೊಸ ಸೈಕ್ಲೋನ್ ಬರುತ್ತಿದೆ. ಬಂಗಾಳ ಕೊಲ್ಲಿ ಮೂಲಕ ಯಾಸ್ ಚಂಡಮಾರುತವು ಮೇ 26 ರಂದು ಒಡಿಶಾ ಹಾಗೂ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.

ತೌಕ್ತೆ ಚಂಡಮಾರುತವು ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿತ್ತು. ಇದೀಗ ಮೇ 22-23ರ ವೇಳೆಯಲ್ಲಿ ಉತ್ತರ ಅಂಡಮಾನ್ ದ್ವೀಪ ಮತ್ತು ಅದರ ಪಕ್ಕದ ಪೂರ್ವ - ಮಧ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ಯಾಸ್ ಚಂಡಮಾರುತ ರೂಪುಗೊಳ್ಳಲಿದೆ. ನಂತರದ 72 ಗಂಟೆಗಳ ಅವಧಿಯಲ್ಲಿ ಇದು ತೀವ್ರ ಸ್ವರೂಪ ಪಡೆದು, ಮೇ 16ರ ವೇಳೆಗೆ ಒಡಿಶಾ-ಬಂಗಾಳ ಕರಾವಳಿ ಹಾದು ಹೋಗುವ ಸಾಧ್ಯತೆಯಿದೆ. ಹೀಗಾಗಿ ಭಾರಿ ಗಾಳಿ-ಮಳೆಯಾಗಲಿದ್ದು, ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಆಯಾ ರಾಜ್ಯಗಳಿಗೆ ಸೂಚಿಸಲಾಗಿದೆ.

Cyclone Yaas likely to hit Odisha on May 26
ಐಎಂಡಿ ಮಾಹಿತಿ

ಇದನ್ನೂ ಓದಿ: ತೌಕ್ತೆ ಅಬ್ಬರಕ್ಕೆ ಮುಳುಗಿದ ಪಿ 305 ಬಾರ್ಜ್‌: 14 ಮಂದಿ ಮೃತದೇಹ ಪತ್ತೆ

ಒಡಿಶಾದ ವಿಶೇಷ ವಿಪತ್ತು ಪರಿಹಾರ ಆಯುಕ್ತ ಪ್ರದೀಪ್ ಜೆನಾ ಅವರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಒಡಿಶಾ ವಿಪತ್ತು ಕ್ಷಿಪ್ರ ಕ್ರಿಯಾ ಪಡೆ (ಒಡಿಆರ್​ಎಫ್), ರಾಜ್ಯ ಪೊಲೀಸ್ ಮತ್ತು ಅಗ್ನಿಶಾಮಕ ಸೇವೆಗಳ ಇಲಾಖೆಯೊಂದಿಗೆ ಸೈಕ್ಲೋನ್ ಪೂರ್ವ ಸಭೆ ನಡೆಸಿದ್ದಾರೆ. ಅಲ್ಲದೇ 10 ಜಿಲ್ಲೆಗಳ ಅಧಿಕಾರಿಗಳೊಂದೊಗೆ ಚರ್ಚಿಸಿ, ಎಚ್ಚರ ವಹಿಸುವಂತೆ ತಿಳಿಸಿದ್ದಾರೆ.

ತೌಕ್ತೆ ಅಬ್ಬರಕ್ಕೆ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಗೋವಾ, ಕೇರಳ ಹಾಗೂ ಗುಜರಾತ್​ನಲ್ಲಿ ನೂರಾರು ಮಂದಿ ಬಲಿಯಾಗಿದ್ದು, ಬೃಹತ್​ ಪ್ರಮಾಣ ಆಸ್ತಿ-ಪಾಸ್ತಿ ಹಾನಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.