ETV Bharat / bharat

6 ಗಂಟೆಯಲ್ಲಿ ತೀವ್ರ ಸ್ವರೂಪ; ಮೇ 18 ರಂದು ಗುಜರಾತ್ ಕರಾವಳಿ ದಾಟಲಿರುವ ಸೈಕ್ಲೋನ್ ತೌಕ್ತೆ​ - ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ

ಮುಂದಿನ ಆರು ಗಂಟೆಗಳಲ್ಲಿ ತೌಕ್ತೆ ಚಂಡಮಾರುತವು ಮತ್ತಷ್ಟು ತೀವ್ರವಾಗಲಿದ್ದು, ಮೇ 18ರಂದು ಗುಜರಾತ್​ನ ಪೋರ್​ಬಂದರ್​ ಮತ್ತು ನಲಿಯಾ ಕರಾವಳಿ ದಾಟುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Very severe cyclonic storm to cross Gujarat coast on May 18
ತೌಕ್ತೆ ಚಂಡಮಾರುತ
author img

By

Published : May 16, 2021, 8:56 AM IST

Updated : May 16, 2021, 9:02 AM IST

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ರೂಪುಗೊಂಡಿರುವ ತೌಕ್ತೆ ಚಂಡಮಾರುತವು ಈಗಾಗಲೇ ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ತನ್ನ ಆರ್ಭಟ ತೋರಿಸುತ್ತಿದ್ದು, ಗುಜರಾತ್ ರಾಜ್ಯದೆಡೆ ಸಾಗುತ್ತಿದೆ.

ಮುಂದಿನ ಆರು ಗಂಟೆಗಳಲ್ಲಿ ತೌಕ್ತೆ ಇನ್ನಷ್ಟು ತೀವ್ರ ಸ್ವರೂಪ ಪಡೆಯಲಿದೆ. ಪ್ರಸ್ತುತ ಸೈಕ್ಲೋನ್​​, ಗೋವಾದ ನೈರುತ್ಯಕ್ಕೆ 170 ಕಿ.ಮೀ ದೂರದಲ್ಲಿ, ಮುಂಬೈಗೆ 520 ಕಿ.ಮೀ ದಕ್ಷಿಣದಲ್ಲಿದೆ. ಮೇ 18ರ ಮುಂಜಾನೆ ಉತ್ತರ- ವಾಯುವ್ಯ ಮುಖವಾಗಿ ಸಾಗಿ ಗುಜರಾತ್​ನ ಪೋರ್​ಬಂದರ್​ ಮತ್ತು ನಲಿಯಾ ಕರಾವಳಿ ದಾಟುವ ನಿರೀಕ್ಷೆಯಿದೆ ಎಂದು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.

  • The CS Tauktae lay centred at 2330 IST of 15th May over Arabian Sea about 170 km southwest of Panjim-Goa, 520 km south of Mumbai. It is very likely to intensify into a VSCS, cross Gujarat coast between Porbandar & Mahuva (Bhavnagar district) around 18th May early morning. pic.twitter.com/OzRsI6hoBB

    — India Meteorological Department (@Indiametdept) May 15, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಅಲೆಗಳ ಅಬ್ಬರಕ್ಕೆ ಎರಡು ಬೋಟ್​ಗಳ ಮಧ್ಯೆ ಸಿಲುಕಿ ಮೀನುಗಾರ ಸಾವು

ಈಗಾಗಲೇ ಪೂರ್ವ, ಮಧ್ಯ ಮತ್ತು ಆಗ್ನೇಯ ಅರೇಬಿಯನ್ ಸಮುದ್ರ ಮತ್ತು ಕೇರಳ-ಕರ್ನಾಟಕ-ಗೋವಾ-ಮಹಾರಾಷ್ಟ್ರ ತೀರಗಳಲ್ಲಿ ಮೀನುಗಾರಿಕೆಯನ್ನು ಸ್ಥಗಿತಗೊಳಿಸಲಾಗಿದೆ. ಪರಿಸ್ಥಿತಿಯನ್ನು ಎದುರಿಸಲು ರಾಜ್ಯಗಳು ಮತ್ತು ಕೇಂದ್ರೀಯ ಸಂಸ್ಥೆಗಳ ಸನ್ನದ್ಧತೆಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ನಿನ್ನೆ ಉನ್ನತ ಮಟ್ಟದ ಸಭೆ ನಡೆಸಿದ್ದರು.

ಮೂವರ ಬಲಿ ಪಡೆದ ತೌಕ್ತೆ

ಕರವಾಳಿ ಜಿಲ್ಲೆಗಳಲ್ಲಿ ತೌಕ್ತೆ ಅಬ್ಬರಿಸುತ್ತಿದ್ದು, ಮುಂದಿನ ನಾಲ್ಕು ದಿನಗಳ ಕಾಲ ವರುಣನೂ ಆರ್ಭಟಿಸಲಿದ್ದಾನೆ. ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿ ದೋಣಿಯನ್ನು ದಡಕ್ಕೆ ತರಲು ಹೋದ ಮೀನುಗಾರ, ಎರಡು ದೋಣಿಗಳ ನಡುವೆ ಸಿಲುಕಿ ಮೃತಪಟ್ಟಿದ್ದಾನೆ. ಕೇರಳದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ನೂರಾರು ಮನೆಗಳು, ಕಟ್ಟಡಗಳು, ಹೊಲ, ತೋಟಗಳು ನಾಶವಾಗಿವೆ.

ಇದನ್ನೂ ಓದಿ: ಕಾಸರಗೋಡಿನಲ್ಲಿ ತೌಕ್ತೆ ಅಬ್ಬರ.. ನೋಡ ನೋಡುತ್ತಲೇ ಕುಸಿದು ಬಿದ್ದ ಕಟ್ಟಡ.. ವಿಡಿಯೋ

ಭಾರತೀಯ ವಾಯುಪಡೆ (ಐಎಎಫ್) ತನ್ನ 16 ಸಾರಿಗೆ ವಿಮಾನಗಳು ಮತ್ತು 18 ಹೆಲಿಕಾಪ್ಟರ್‌ಗಳನ್ನು ರಕ್ಷಣಾ ಕಾರ್ಯಾಚರಣೆಗೆ ಇಳಿಸಿದೆ. ಕೇರಳ, ತಮಿಳುನಾಡು, ಕರ್ನಾಟಕ, ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ 50ಕ್ಕೂ ಹೆಚ್ಚು ವಿಪತ್ತು ಪರಿಹಾರ ಹಾಗೂ ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್​ಎಫ್) ಅಧಿಕಾರಿಗಳು ತಿಳಿಸಿದ್ದಾರೆ.

Last Updated : May 16, 2021, 9:02 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.