ETV Bharat / bharat

ಮ್ಯಾಂಡೌಸ್​​ ಸೈಕ್ಲೋನ್: ತಮಿಳುನಾಡು, ಪುದುಚೇರಿ ಮತ್ತು ಆಂಧ್ರದ ಕರಾವಳಿಯಲ್ಲಿ ಕಟ್ಟೆಚ್ಚರ.. ಕೆಲವೆಡೆ ರಜೆ ಘೋಷಣೆ - ದಕ್ಷಿಣ ಆಂಧ್ರಪ್ರದೇಶ ತೀರದಲ್ಲಿ ಆರೆಂಜ್​ ಅಲರ್ಟ್

ಗಾಳಿಯ ವೇಗ ಗಂಟೆಗೆ 65-75 ಕಿಮೀ ಇದ್ದು ಮಹಾಬಲಿಪುರಂ ಮತ್ತು ಶ್ರೀಹರಿಕೋಟದ ಮೂಲಕವೂ ಚಂಡ ಮಾರುತ ಹಾದು ಹೋಗಲಿದೆ.

ಮ್ಯಾಂಡೌಸ್​​ ಸೈಕ್ಲೋನ್: ತಮಿಳುನಾಡು, ಪುದುಚೇರಿ ಮತ್ತು ಆಂಧ್ರದ ಕರಾವಳಿಯಲ್ಲಿ ಎಚ್ಚರಿಕೆ ಘೋಷಣೆ
cyclone-mandause-coastal-alert-issued-in-tamil-nadu-puducherry-and-andhra
author img

By

Published : Dec 9, 2022, 11:21 AM IST

ಚೆನ್ನೈ: ನೈರುತ್ಯ ಬಂಗಾಳ ಕೊಲ್ಲಿಯಲ್ಲಿ' ಮ್ಯಾಂಡೌಸ್'​​ ಚಂಡ ಮಾರುತದ ಪರಿಣಾಮ ಉತ್ತರ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರಪ್ರದೇಶ ತೀರದಲ್ಲಿ ಆರೆಂಜ್​ ಅಲರ್ಟ್​ ಘೋಷಿಸಲಾಗಿದೆ

'ಮ್ಯಾನ್​-ಡೌಸ್' ಎಂದೂ ಕರೆಯಲ್ಪಡುವ ಈ​ ಚಂಡ ಮಾರುತ ನೈರುತ್ಯ ಬಂಗಾಳಕೊಲ್ಲಿಯಿಂದ ಪಶ್ಚಿಮ-ವಾಯುವ್ಯದ ಕಡೆಗೆ ಗಂಟೆಗೆ 12 ಕಿಮೀವೇಗವಾಗಿ ಚಲಿಸುತ್ತಿದೆ. ಶುಕ್ರವಾರ ಈ ಚಂಡಮಾರುತದಿಂದಾಗಿ ಮುಂದಿನ ಆರುಗಂಟೆಗಳ ಕಾಲ ಹೆಚ್ಚು ತೀವ್ರತೆಯಿಂದ ಕೂಡಿರಲಿದೆ. ಪಶ್ಚಿಮ ವಾಯವ್ಯವನ್ನು ಇದು ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರ ಪುದುಚೇರಿ ಮಧ್ಯದಿಂದ ಹಾದು ಹೋಗಲಿದೆ.

ಗಾಳಿಯ ವೇಗ ಗಂಟೆಗೆ 65-75 ಕಿಮೀ ವೇಗದಲ್ಲಿ ಇದ್ದು ಮಹಾಬಲಿಪುರಂ ಮತ್ತು ಶ್ರೀಹರಿಕೋಟದ ಮೂಲಕವೂ ಚಂಡ ಮಾರುತ ಹಾದು ಹೋಗಲಿದ್ದು, ಇದರ ಪರಿಣಾಮ ಕಾಣಲಿದೆ. ಈ ಚಂಡಮಾರುತ ರಾತ್ರಿ 85 ಕಿಮೀ ವೇಗ ಪಡೆದು ಕೊಳ್ಳಲಿದ್ದು, ನಾಳೆ ಕೂಡ ಮುಂದುವರೆಯಲಿದೆ.

ಶುಕ್ರವಾರ ಮತ್ತು ಶನಿವಾರ ಪುದುಚೇರಿ ಮತ್ತು ಕಾರೈಕ್ಕಲ್‌ನಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಭಾರತೀಯ ಹವಾಮಾನ ಇಲಾಖೆ ಡಿಸೆಂಬರ್ 9 ಮತ್ತು 10 ರಂದು ತಮಿಳುನಾಡು ಮತ್ತು ಪುದುಚೇರಿಯ ಹಲವಾರು ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮತ್ತು ಅತಿಯಾದ ಮಳೆಯಾಗುವ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಫೋಟೋಕ್ಕಾಗಿ ಕ್ರಿಕೆಟ್ ಆಡಿದ ಶಾಸಕ: ಮಹಿಳಾ ಆಟಗಾರ್ತಿ ಮುಖಕ್ಕೆ ತಾಕಿದ ಚೆಂಡು, ಆಸ್ಪತ್ರೆಗೆ ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.