ETV Bharat / bharat

ಬಾಂಗ್ಲಾ, ಒಡಿಶಾ, ಆಂಧ್ರದಲ್ಲಿ ಗುಲಾಬ್ ಚಂಡಮಾರುತದ ಅಬ್ಬರ.. ಕರ್ನಾಟಕದಲ್ಲೂ ಭಾರಿ ಮಳೆ ಸಾಧ್ಯತೆ

ಬಂಗಾಳ ಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತವಾಗಿರುವುದರಿಂದ ಗುಲಾಬ್ ಚಂಡಮಾರುತ ಉಂಟಾಗಿದೆ. ಈ ಪರಿಣಾಮ ಮುಂದಿನ ಮೂರು ದಿನ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಗುಲಾಬ್ ಚಂಡಮಾರುತ
ಗುಲಾಬ್ ಚಂಡಮಾರುತ
author img

By

Published : Sep 26, 2021, 8:37 AM IST

ನವದೆಹಲಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿ ತೀರಗಳಲ್ಲಿ ಮುಂದಿನ ಮೂರು ದಿನ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.

ಯೆಲ್ಲೋ ಅಲರ್ಟ್ ಘೋಷಣೆ..

ವಾಯುಭಾರ ಕುಸಿತದಿಂದ ಉಂಟಾಗಿರುವ ಚಂಡಮಾರುತವನ್ನು ಗುಲಾಬ್ ಎಂದು ಹೆಸರಿಸಲಾಗಿದೆ. ಗುಲಾಬ್​ ಚಂಡಮಾರುತದ ವೇಗ ಗಂಟೆಗೆ 70-80 ಕಿ.ಮೀ. ಇರಲಿದೆ. ಚಂಡಮಾರುತ ಹಾದುಹೋಗಲಿರುವ ಕಾಳಿಂಗಪಟ್ಟಣಂ, ವಿಶಾಖಪಟ್ಟಣಂ ಮತ್ತು ಗೋಪಾಲಪುರಗಳಲ್ಲಿ ಈಗಾಗಲೇ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

24 ರೈಲುಗಳ ಸಂಚಾರ ರದ್ದು..

ಗೋಪಾಲಪುರದಿಂದ ಪೂರ್ವ-ಆಗ್ನೇಯ ದಿಕ್ಕಿನಲ್ಲಿ 470 ಕಿ.ಮೀ. ದೂರ ಮತ್ತು ಕಾಳಿಂಗಪಟ್ಟಣಂನ ಪೂರ್ವದಲ್ಲಿ 540 ಕಿ.ಮೀ. ದೂರದಲ್ಲಿ ತೀವ್ರವಾದ ವಾಯುಭಾರ ಕುಸಿತ ಆಗಿರುವ ಹಿನ್ನೆಲೆ ಗುಲಾಬ್​ ಚಂಡಮಾರುತ ಏಳಲಿದೆ. ಈ ಹಿನ್ನೆಲೆ ಪೂರ್ವ ಕರಾವಳಿ ರೈಲ್ವೆ (ಇಸಿಒಆರ್) ವಿಭಾಗವು ತನ್ನ ವ್ಯಾಪ್ತಿಯಲ್ಲಿ 24 ರೈಲುಗಳನ್ನು ರದ್ದುಗೊಳಿಸಿದ್ದು, ಕೆಲ ರೈಲುಗಳ ಸಂಚಾರ ಮಾರ್ಗಗಳನ್ನು ಬದಲಿಸಿದೆ.

ಮೀನುಗಾರರು ಸಮುದ್ರಕ್ಕಿಳಿಯುವಂತಿಲ್ಲ..

ಗಾಳಿ-ಮಳೆ ಜಾಸ್ತಿ ಇರಲಿದ್ದು, ಸೆಪ್ಟೆಂಬರ್​ 25ರ ನಂತರ ಮುಂದಿನ ಸೂಚನೆವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯುವಂತಿಲ್ಲ ಎಂದು ಹವಾಮಾನ ಇಲಾಖೆ ಮೀನುಗಾರರಿಗೆ ಎಚ್ಚರಿಕೆ ನೀಡಿದೆ. ಇಂದು ಆಂಧ್ರಪ್ರದೇಶದ ಕರಾವಳಿ ತೀರದ ಸುತ್ತಲಿನ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿದೆ. ಹಾಗೇ, ಮುಂದಿನ ಎರಡು ದಿನಗಳ ಕಾಲ ಒಡಿಶಾ ಮತ್ತು ಛತ್ತೀಸ್​ಗಢ್​​ನಲ್ಲೂ ಮಳೆ-ಪ್ರವಾಹದ ಎಚ್ಚರಿಕೆ ನೀಡಲಾಗಿದೆ.

ಸೈಕ್ಲೋನ್ ಎದುರಿಸುವುದಕ್ಕೆ ರಾಜ್ಯಗಳು ಸನ್ನದ್ಧ

ಚಂಡಮಾರುತದ ಪ್ರಭಾವ ಹೆಚ್ಚಾಗಿ ಉಂಟಾಗಲಿರುವ ಒಡಿಶಾ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾಗಿ ಅಲ್ಲಿನ ಸರ್ಕಾರಗಳು ತಿಳಿಸಿವೆ.

ಕರ್ನಾಟಕದಲ್ಲೂ ಭಾರಿ ಮಳೆ

ಇಂದು ಕರ್ನಾಟಕದ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಹೆಚ್ಚು ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಸೆಪ್ಟೆಂಬರ್​ 28ರವರೆಗೂ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಇಂದಿನಿಂದ 2 ದಿನ ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.