ETV Bharat / bharat

ಬಿಪೊರ್ ಜೋಯ್ ಎಫೆಕ್ಟ್​: ಗುಜರಾತ್‌ನಲ್ಲಿ 21,000ಕ್ಕೂ ಹೆಚ್ಚು ಜನರ ಸ್ಥಳಾಂತರ, 69 ರೈಲು ಸಂಚಾರ ರದ್ದು

ಗುಜರಾತ್‌ನಲ್ಲಿ ಬಿಪೊರ್ ಜೋಯ್ ಚಂಡಮಾರುತ ಅಬ್ಬರಿಸುವ ಮುನ್ಸೂಚನೆ ಲಭಿಸಿದ್ದು, ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

roar of sea waves in Gujarat
ಗುಜರಾತ್​ದಲ್ಲಿ ಸಮುದ್ರ ಅಲೆಗಳ ಅಬ್ಬರ
author img

By

Published : Jun 13, 2023, 10:08 PM IST

Updated : Jun 13, 2023, 10:59 PM IST

ಗುಜರಾತ್: ಬಿಪೊರ್ ಜೋಯ್ ಚಂಡಮಾರುತ ತೀವ್ರ ಸ್ವರೂಪ ಪಡೆದಿದ್ದು, ಪ್ರತಿ ಗಂಟೆಗೆ 150 ಕಿ.ಮೀ ವೇಗದಲ್ಲಿ ಗಾಳಿಯೊಂದಿಗೆ ಬೀಸುತ್ತಿದೆ. ಗುಜರಾತ್‌ನ ಅರಾವಳಿ ಜಿಲ್ಲೆಯ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ. ಕಛ್, ಪೋರ್​ಬಂದರ್, ದೇವಭೂಮಿ ದ್ವಾರಕಾ, ಜುನಾಗಢ ಹಾಗೂ ಮೋರ್ಬಿ ಕರಾವಳಿಯಲ್ಲಿ ಅಪಾಯ ಸೃಷ್ಟಿಸುವ ಭೀತಿ ಎದುರಾಗಿದೆ. ಈ ಭಾಗದ ಜನರನ್ನು ಸ್ಥಳಾಂತರಿಸುವ ಕಾರ್ಯಾಚರಣೆ ಶುರುವಾಗಿದೆ. ಕಛ್​ನ ಕಾಂಡ್ಲಾ ಬಂದರಿನಲ್ಲಿ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಜಾಗ್ರತೆವಹಿಸಲಾಗಿದೆ.

  • #WRUpdates #CycloneBiparjoyUpdate

    For the kind attention of passengers.

    The following trains of 13/06/2023 have been Fully Cancelled/Short-Terminated/Short-Originate by WR as a precautionary measure in the cyclone prone
    areas over Western Railway.

    Cancellation of Trains: 👇 pic.twitter.com/LDjmmo7VbW

    — Western Railway (@WesternRly) June 13, 2023 " class="align-text-top noRightClick twitterSection" data=" ">

ಕಾಂಡ್ಲಾಗೆ ಡಾ.ಮನ್ಸುಖ್ ಮಾಂಡವಿಯಾ ಭೇಟಿ ಪರಿಶೀಲನೆ:ಗುಜರಾತ್‌ನ ಕಾಂಡ್ಲಾದಲ್ಲಿ ದೀನದಯಾಳ್ ಬಂದರು ಪ್ರಾಧಿಕಾರದಿಂದ ನಿರಾಶ್ರಿತರಿಗೆ ತಾತ್ಕಾಲಿಕವಾಗಿ ನಿರ್ಮಿಸಿರುವ ಆಶ್ರಯ ಶೆಡ್​ಗಳಿಗೆ ಮಂಗಳವಾರ ಕೇಂದ್ರ ಸಚಿವ ಡಾ.ಮನ್ಸುಖ್ ಮಾಂಡವಿಯಾ ಭೇಟಿ ನೀಡಿ,ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ನಿರಾಶ್ರಿತರಿಗೆ ಯಾವುದೇ ಆರೋಗ್ಯ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಮಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ.

69 ರೈಲು ಸಂಚಾರ ರದ್ದು: ಬಿಪೊರ್ ಜೋಯ್ ಚಂಡಮಾರುತವು ಭಾರಿ ವಿನಾಶ ಸೃಷ್ಟಿಸುವ ಭೀತಿ ಎದುರಾಗಿದ್ದು ಪಶ್ಚಿಮ ರೈಲ್ವೆ ವಲಯವು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಮಂಗಳವಾರ 69 ರೈಲುಗಳನ್ನು ರದ್ದುಗೊಳಿಸಿದೆ. 32 ರೈಲುಗಳನ್ನು ಶಾರ್ಟ್-ಟರ್ಮಿನೇಟ್ ಮಾಡಲಾಗಿದೆ. 26 ರೈಲುಗಳನ್ನು ಮುಂಜಾಗ್ರತಾ ಕ್ರಮವಾಗಿ ಅಲ್ಪಾವಧಿಗೆ ಪ್ರಾರಂಭಿಸಲಾಗುವುದು ಎಂದು ಪಶ್ಚಿಮ ರೈಲ್ವೆ CPRO ಸುಮಿತ್ ಠಾಕೂರ್ ತಿಳಿಸಿದ್ದಾರೆ.

ಚಂಡಮಾರುತ ವಿಪತ್ತು ಪರಿಣಾಮ ಯುದ್ಧೋಪಾದಿಯಲ್ಲಿ ಜನರ ಸಂರಕ್ಷಣೆಯಲ್ಲಿ ಭಾರತೀಯ ಸೇನೆ ಹಾಗೂ ಎನ್‌ಡಿಆರ್‌ಎಫ್‌ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಈಗಾಗಲೇ ಗುಜರಾತ್‌ ರಾಜ್ಯಾದಂತ ಎನ್‌ಡಿಆರ್‌ಎಫ್‌ 18 ತಂಡಗಳನ್ನು ನಿಯೋಜಿಸಿದೆ. ಕಚ್‌ನಲ್ಲಿ 4, ಜಾಮ್‌ನಗರದಲ್ಲಿ 2, ರಾಜ್‌ಕೋಟ್ ಮತ್ತು ದ್ವಾರಕಾದಲ್ಲಿ ತಲಾ 3, ಪೋರಬಂದರ್, ಸೋಮನಾಥ್, ಮೊರ್ಬಿ, ವಲ್ಸಾದ್ ಮತ್ತು ಜುನಾಗಢದಲ್ಲಿ ತಲಾ 1 ತಂಡ ಹಾಗು 1 ತಂಡವನ್ನು ದಿಯುನಲ್ಲಿ ಕಾರ್ಯಾಚರಣೆಗೆ ಸನ್ನದ್ದವಾಗಿರಿಸಿದೆ.

ಚಂಡಮಾರುತದಿಂದಾಗಿ ಕಡಲ್ಕೊರೆತವುಂಟಾಗಿದ್ದು, ಸ್ಥಳೀಯರ ಸಂರಕ್ಷಣೆ, ಪ್ರವಾಹ ಪರಿಹಾರ ವಿತರಿಸಲು ಭಾರತೀಯ ಸೇನೆ ಭುಜ್, ಜಾಮ್‌ನಗರ, ಗಾಂಧಿಧಾಮ್, ಧರಂಗ್‌ಧ್ರ, ವಡೋದರಾ ಮತ್ತು ಗಾಂಧಿನಗರ ಹಾಗೂ ನಲಿಯಾ, ದ್ವಾರಕಾ ಮತ್ತು ಅಮ್ರೇಲಿಯಲ್ಲಿ ಬೀಡುಬಿಟ್ಟಿದೆ. ಗುಜರಾತ್‌ನ ವಿವಿಧ ತಗ್ಗು ಪ್ರದೇಶಗಳಿಂದ 21,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. 220ಕ್ಕೂ ಹೆಚ್ಚು ಆಶ್ರಯ ಮನೆಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು ಪೊಲೀಸರು ಮತ್ತು ಸ್ಥಳೀಯ ಜಿಲ್ಲಾಡಳಿತ ಆಶ್ರಯ ಕಲ್ಪಿಸಿದೆ. ಚಂಡಮಾರುತದ ಅಪಾಯದಿಂದ ಎಲ್ಲಿಯೂ ಇಲ್ಲಿಯವರಿಗೆ ಸಾವು ಸಂಭವಿಸಿಲ್ಲ. ಶೀಘ್ರ ಸಂರಕ್ಷಣಾ ಕಾರ್ಯಾಚರಣೆ ಕಾರ್ಯ ಚುರುಕಾಗಿದೆ ಎಂದು ಕಛ್ ಭುಜ್ ಜಿಲ್ಲೆಯ ಎಸ್ಪಿ ಡಾ. ಕರಂರಾಜ್ ವಘೇಲಾ ಮಾಹಿತಿ ನೀಡಿದರು.

ಹಾನಿ ವಿವರ: ಬಿಪೊರ್ ಜೋಯ್ ಚಂಡಮಾರುತದ ಪರಿಣಾಮ ಸಮುದ್ರದ ಉಬ್ಬರವಿಳಿತದ ಅಲೆಗಳು ದ್ವಾರಕಾದ ಗೋಮತಿ ಘಾಟ್‌ಗೆ ಅಪ್ಪಳಿಸಿದ್ದು ಪ್ರಕ್ಷುಬ್ಧವಾಗಿದೆ. ಗುಜರಾತ್‌ನ ನಿಶಾ ಜಿಲ್ಲೆಯ ಸೋಮನಾಥ್ ಜಿಲ್ಲೆಯ ಕೊಡಿನ ಮಧ್ವಾಡ್ ಗ್ರಾಮದಲ್ಲಿ 6 ಮನೆಗಳು ಸಮುದ್ರದ ಅಬ್ಬರದ ಅಲೆಗಳಿಗೆ ನಾಶವಾಗಿವೆ. ಧ್ವಂಸಗೊಂಡ ಮನೆಗಳ ನಿವಾಸಿಗಳನ್ನು ಸ್ಥಳಾಂತರಿಸಿದ್ದು ದೇವಾಲಯಗಳು, ಪ್ರಾಥಮಿಕ ಶಾಲೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅವರು ಆಶ್ರಯ ಪಡೆದಿದ್ದಾರೆ.

ಕರಾವಳಿ ಪ್ರದೇಶಗಳಲ್ಲಿ 100ಕ್ಕೂ ಹೆಚ್ಚು ಮನೆಗಳಿವೆ. ಈ ಮನೆಗಳ ಸಮೀಪ ವಾಸಿಸುವವರನ್ನು ಬೇರೆಡೆಗೆ ಸ್ಥಳಾಂತರಿಸುವ ಪರಿಸ್ಥಿತಿ ಬಂದರೆ ಸುಮಾರು 1500 ರಿಂದ 2000 ಜನರನ್ನು ಮಧವಾಡ ಗ್ರಾಮಕ್ಕೆ ಸ್ಥಳಾಂತರಿಸಬೇಕಾಗುತ್ತದೆ. ಸದ್ಯ ಕಡಲ್ಕೊರೆತದ ಪರಿಣಾಮವಾಗಿ ಮನೆಗಳು ಧ್ವಂಸಗೊಂಡಿದ್ದು, ಅಲ್ಲಿನ ಎಲ್ಲ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂಬ ಮಾಹಿತಿ ದೊರೆತಿದೆ.

ಇದನ್ನೂಓದಿ:ಉಚಿತ ವಿದ್ಯುತ್ ಗ್ಯಾರಂಟಿ ಬರೆ ಮಧ್ಯೆ ಎಸ್ಕಾಂಗಳಿಗೆ ವಿದ್ಯುತ್ ಖರೀದಿ ಹೊರೆ

Last Updated : Jun 13, 2023, 10:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.