ಹೈದರಾಬಾದ್: ಆನ್‌ಲೈನ್ ಇತ್ತೀಚಿನ ಅಷ್ಟು ಉಪಕಾರಿಯಾಗಿದೇಯೋ, ಅಷ್ಟೇ ಮೋಸ, ವಂಚನೆಗಳಿಗೂ ಆನ್‌ಲೈನ್ ವೇದಿಕೆಯಾಗಿದೆ. ಆನ್‌ಲೈನ್ ಮೂಲಕವೇ ಅನೇಕ ರೀತಿಯಲ್ಲಿ ಮೋಸದ ಜಾಲಗಳು ಹುಟ್ಟಿಕೊಂಡಿವೆ. ಇದಕ್ಕೆ ಶೈಕ್ಷಣಿಕ ಕ್ಷೇತ್ರವೂ ಹೊರತಾಗಿಲ್ಲ.
ಪಿಎಚ್‌ಡಿ ಪ್ರವೇಶ ಬೇಕಾ?.... ನೀವು 10 ಲಕ್ಷ ರೂ. ಪಾವತಿಸಿದರೆ ದೇಶದ ನಿಮ್ಮ ಆಯ್ಕೆಯ ಯಾವುದೇ ವಿಶ್ವವಿದ್ಯಾಲಯದಲ್ಲಿ ನಿಮ್ಮನ್ನು ಪ್ರವೇಶ ಸಿಗುತ್ತದೆ. 5 ಲಕ್ಷ ರೂ. ನೀಡಿದರೆ ನಿಮಗೆ ಪ್ರಮಾಣಪತ್ರವೂ ನೀಡುತ್ತೇವೆ... ಹೀಗೆ ಫೇಸ್ ಬುಕ್, ವಾಟ್ಸ್ಆ್ಯಪ್, ಇನ್ಸ್ಟಾಗ್ರಾಂನಲ್ಲಿ ಜಾಹೀರಾತು ರೂಪದಲ್ಲಿ ನಿಮಗೆ ತಲುಪುತ್ತವೆ. ಇಂತಹ ಜಾಹೀರಾತು ನಂಬಿದರೆ, ಹಳ್ಳಕ್ಕೆ ಬೀಳುವುದು ಖಚಿತ...
ಪಶ್ಚಿಮ ಬಂಗಾಳ, ರಾಜಸ್ಥಾನ, ಜಾರ್ಖಂಡ್, ಬಿಹಾರ ಸೇರಿದಂತೆ ರಾಜ್ಯಗಳು ದೇಶಾದ್ಯಂತ ವಂಚಕ ಜಾಲಗಳು ಕಾರ್ಯ ನಿರ್ವಹಿಸುತ್ತಿವೆ. ಹೈದರಾಬಾದ್ನಲ್ಲೂ ಪ್ರತಿ ವರ್ಷ ಇಂತಹ ನೂರಾರು ಪ್ರಕರಣಗಳು ವರದಿಯಾಗುತ್ತಿವೆ.
ಅನೇಕ ವಿದ್ಯಾರ್ಥಿಗಳು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಿ ವೈದ್ಯಕೀಯ ಶಿಕ್ಷಣಕ್ಕೆ ಸೇರುವ ಕನಸು ಕಾಣುತ್ತಾರೆ. ನೀಟ್ ಮತ್ತು ಟಿಒಇಎಫ್ಎಲ್ (Test of English as a Foreign Language) ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶವನ್ನು ಪಡೆಯದಿರುವವರು ಹೇಗಾದರೂ ಪ್ರವೇಶ ಪಡೆಯಲು ಪ್ರಯತ್ನಿಸುತ್ತಾರೆ. ಇಂತಹ ವಿದ್ಯಾರ್ಥಿಗಳೇ ಈ ವಂಚಕರ ಮುಖ್ಯ ಟಾರ್ಗೆಟ್...
ಹೇಗೋ ಫೋನ್ ನಂಬರ್ಗಳು ಮತ್ತು ಇತರ ವಿವರಗಳನ್ನು ಸಂಗ್ರಹಿಸಿ ಸಂದೇಶಗಳನ್ನು ಕಳುಹಿಸಲಾಗುತ್ತದೆ. ಯುಜಿಸಿ ಮತ್ತು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದಲ್ಲಿ ಪರಿಚಿತರು ಇದ್ದಾರೆ ಎಂದು ಹೇಳಿ ನಂಬಿಸುವ ಯತ್ನಿಸುತ್ತಾರೆ. ಪ್ರವೇಶ ಹಾಗೂ ಪ್ರಮಾಣಪತ್ರ ಪಡೆಯಬೇಕಾದರೆ ಹಣ ಪಾವತಿಸಬೇಕೆಂದು ಲಕ್ಷಾಂತರ ವಸೂಲಿ ಮಾಡುತ್ತಾರೆ. ನಂತರ ತಮ್ಮ ಫೋನ್ ಆಫ್ ಮಾಡಿ ಬಿಡುತ್ತಾರೆ. ಕೆಲವರು ತಮ್ಮ ಪ್ರಮಾಣಪತ್ರ ಸತ್ಯಾಸತ್ಯತೆ ಬಗ್ಗೆ ತಿಳಿಯಲು ವಿಶ್ವವಿದ್ಯಾನಿಲಯಕ್ಕೆ ಹೋದಾಗ ನಕಲಿ ಪ್ರಮಾಣಪತ್ರ ಎಂದು ತಿಳಿದು ಬೆಚ್ಚಿ ಬೀಳಬೇಕಾಗುತ್ತದೆ.
ಕಾರ್ಪೊರೇಟ್ ಶೈಲಿಯ ಕಚೇರಿಗಳು... ಇಂತಹ ಗ್ಯಾಂಗ್ಗಳು ಯುವಕರನ್ನು ನಂಬಿಸಲೆಂದೇ ಮುಂಬೈ, ಕೋಲ್ಕತ್ತಾ ಮತ್ತು ದೆಹಲಿಯಲ್ಲಿ ಕಾರ್ಪೊರೇಟ್ ಕಚೇರಿಗಳನ್ನು ಸ್ಥಾಪಿಸುತ್ತಿವೆ. ಇತ್ತೀಚೆಗಷ್ಟೇ ಎಂಬಿಬಿಎಸ್ ಪ್ರವೇಶಕ್ಕೆ ಆನ್‌ಲೈನ್ ಜಾಹೀರಾತು ನೋಡಿದ ವಿದ್ಯಾರ್ಥಿಯ ತಂದೆಯನ್ನು ಕೋಲ್ಕತ್ತಾಕ್ಕೆ ಕರೆದುಕೊಂಡು ಹೋಗಿ ನಂಬಿಸಿ ಲಕ್ಷಾಂತರ ಹಣ ಪಾವತಿಸಿಕೊಂಡಿದ್ದಾರೆ.
ಹೈದರಾಬಾದ್ನ ಹಯತ್‌ನಗರದ ಯುವಕನೊಬ್ಬ ಕೆನಡಾಕ್ಕೆ ಹೋಗಲು ಐಇಎಲ್‌ಟಿಎಸ್ ಬರೆದರೂ ಅರ್ಹತೆ ಪಡೆದಿರಲಿಲ್ಲ. ಅದರ ಸರ್ಟಿಫಿಕೇಟ್ ಕೊಡುತ್ತೇನೆ ಎಂದು ಫೇಸ್ಬುಕ್ನಲ್ಲಿ ಬಂದ ಸಂದೇಶ ನೋಡಿ ಫೋನ್ ಮಾಡಿದ್ದಾರೆ. ಇತರರ ಮಾತು ನಂಬಿ 9 ಲಕ್ಷ ರೂ. ಬಳಿಕ ವಂಚನೆ ಎಂದು ತಿಳಿದು ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದರು.
ಇದೇ ರೀತಿ ಎಲ್ಬಿ ನಗರದ ವಿದ್ಯಾರ್ಥಿ ದೀರ್ಘಾವಧಿ ತರಬೇತಿ ಪಡೆದು ನೀಟ್ ಬರೆದರೂ ರ‍್ಯಾಂಕ್ ಉತ್ತಮ ಬರಲಿಲ್ಲ. ಆದರೆ, ತಂದೆ ಪ್ರಸಿದ್ಧ ವೈದ್ಯಕೀಯ ಕಾಲೇಜಿಗೆ ಪ್ರವೇಶಕ್ಕಾಗಿ ಆನ್‌ಲೈನ್‌ನಲ್ಲಿ ಹುಡುಕಿದಾಗ ನೇರ ಪ್ರವೇಶ ಎಂಬ ಜಾಹೀರಾತು ಕಂಡಿದೆ. ಆಗ ಆ ಸೈಬರ್ ಕ್ರಿಮಿನಲ್ ತನಗೆ ಎಂಸಿಐನಲ್ಲಿ ಹೆಸರಾಂತ ವ್ಯಕ್ತಿಗಳು ಗೊತ್ತು ಎಂದಿದ್ದಾನೆ... ವಿಶೇಷ ಕೋಟಾದಡಿ ಎಂಬಿಬಿಎಸ್ ಪ್ರವೇಶ ನೀಡಲಾಗುವುದು ಎಂದು 11.6 ಲಕ್ಷಗಳನ್ನು ಪಡೆದಿದ್ದ. ಅಲ್ಲದೇ, ತಾನು ಹೇಳಿದಂತೆ ಗಾಂಧಿ ವೈದ್ಯಕೀಯ ಕಾಲೇಜಿನ ಪ್ರವೇಶ ಪ್ರಮಾಣಪತ್ರವನ್ನು ಕಳುಹಿಸಿದ್ದ. ಆದರೆ, ವಿದ್ಯಾರ್ಥಿಯ ತಂದೆ ಗಾಂಧಿ ಮೆಡಿಕಲ್ ಕಾಲೇಜಿಗೆ ಸಂಪರ್ಕಿಸಿದಾಗ ಎಲ್ಲವೂ ಮೋಸ ಎಂಬುವುದು ಬಯಲಿಗೆ ಬಂದಿದೆ.
ಈ ಮುನ್ನೆಚ್ಚರಿಕೆ ವಹಿಸಿದರೆ ಉತ್ತಮ... ಎಂಬಿಬಿಎಸ್, ಪಿಎಚ್‌ಡಿ ಮತ್ತು ಐಐಟಿಗಳನ್ನು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಪ್ರವೇಶಿಸಲಾಗುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಜಾಹೀರಾತುಗಳನ್ನು ನಂಬಬಾರದು. ಯಾರಾದರೂ ವಿಶೇಷ ಕೋಟಾ ಆಮಿಷವೊಡ್ಡಿದರೆ ಮೊದಲು ನಂಬಬೇಡಿ.
ಪ್ರವೇಶದ ವಿಷಯವು ವಿಶ್ವವಿದ್ಯಾಲಯದ ನಿಯಂತ್ರಣದಲ್ಲಿದೆ. ಅಧಿಕೃತವಾಗಿ ಘೋಷಿಸಿದ ದಿನಾಂಕದಂದು ಕೌನ್ಸೆಲಿಂಗ್ ನಡೆಸಲಾಗುವುದು. ಕೌನ್ಸೆಲಿಂಗ್ ಇಲ್ಲದೆ ಪ್ರವೇಶ ನೀಡಲು ಸಾಧ್ಯವಿರುವುದಿಲ್ಲ.
ಇದನ್ನೂ ಓದಿ: ನಕಲಿ ಅಂಕಪಟ್ಟಿ ನೀಡಿ ಪದವಿಗೆ ದಾಖಲು: ಬೆಂಗಳೂರು ವಿವಿಯಲ್ಲಿ ಎಂಟು ವಿದ್ಯಾರ್ಥಿಗಳು ಪತ್ತೆ