ETV Bharat / bharat

ಮಾಸ್ಕೋದಿಂದ ದೆಹಲಿಗೆ 44 ಲಕ್ಷ ಮೌಲ್ಯದ ರತ್ನ, ಮುತ್ತುಗಳ ಸಾಗಣೆ; ವಶ - ಏರ್ ಇಂಡಿಯಾ ವಿಮಾನ

ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ವಿಭಾಗವು ಮಾಸ್ಕೋದಿಂದ ಆಗಮಿಸಿದ ಪ್ರಯಾಣಿಕನನ್ನು ತಪಾಸಣೆ ನಡೆಸಿ, ರತ್ನ ಮತ್ತು ಮುತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

Customs seizes gemstones, pearls worth Rs 44L at Delhi airport
ಮಾಸ್ಕೋದಿಂದ ದೆಹಲಿಗೆ ರತ್ನ, ಮುತ್ತುಗಳ ಸಾಗಾಟ
author img

By

Published : Oct 25, 2021, 8:51 PM IST

ನವದೆಹಲಿ: ಮಾಸ್ಕೋದಿಂದ ಏರ್ ಇಂಡಿಯಾ ವಿಮಾನದಲ್ಲಿ ಬಂದ ಪ್ರಯಾಣಿಕರಿಂದ 44 ಲಕ್ಷ ರೂ. ಮೌಲ್ಯದ ರತ್ನದ ಹರಳುಗಳು ಮತ್ತು ಮುತ್ತುಗಳನ್ನು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಭಾರತೀಯ ಮೂಲದ ಪ್ರಯಾಣಿಕರೊಬ್ಬರು ಟರ್ಮಿನಲ್ 3, ಐಜಿಐ ವಿಮಾನ ನಿಲ್ದಾಣಕ್ಕೆ ಮಾಸ್ಕೋದಿಂದ ಎಐ -196 ವಿಮಾನದಲ್ಲಿ ಅಕ್ಟೋಬರ್ 21 ರಂದು ಆಗಮಿಸಿದ್ದರು. ಖಚಿತ ಮಾಹಿತಿ ಮೇರೆಗೆ ಇಲಾಖೆಯ ಅಧಿಕಾರಿಗಳು ಅವರ ಲಗೇಜ್​ನ್ನು ಅನ್ನು ಸ್ಕ್ಯಾನ್ ಮಾಡಿದಾಗ ಕೆಲವು ಅನುಮಾನಾಸ್ಪದ ಚಿತ್ರಗಳು ಕಂಡು ಬಂದಿವೆ.

ಇದಾದ ಬಳಿಕ ಹುಡುಕಾಟದ ನಂತರ ಅಧಿಕಾರಿಗಳು ಸುಮಾರು 21,626 ಗ್ರಾಂ ತೂಕದ ರತ್ನಗಳು ಮತ್ತು ಮುತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಸ್ತುಗಳ ಬೆಲೆ ರೂ 43,93,00 ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.