ಚೆನ್ನೈ: ಕಳೆದ ಎರಡು ದಿನಗಳಲ್ಲಿ ಥಾಯ್ಲೆಂಡ್‌ನಿಂದ ಕಾಡು ಪ್ರಾಣಿಗಳನ್ನು ಕಳ್ಳಸಾಗಣೆ ಮಾಡುವ ಎರಡು ಪ್ರಕರಣಗಳು ಪತ್ತೆಯಾಗಿವೆ. ಚೆನ್ನೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಈ ಎರಡೂ ಪ್ರಕರಣಗಳನ್ನು ವಿಫಲಗೊಳಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿರ್ದಿಷ್ಟ ಮಾಹಿತಿಯ ಮೇರೆಗೆ ಅಧಿಕಾರಿಗಳು ಭಾನುವಾರ ಬ್ಯಾಂಕಾಕ್‌ನಿಂದ ಚೆನ್ನೈಗೆ ಆಗಮಿಸಿದ ಪ್ರಯಾಣಿಕರೊಬ್ಬರನ್ನು ತಡೆದು, ಅವರ ಬ್ಯಾಗ್‌ಗಳನ್ನು ಚೆಕ್ ಮಾಡಿದ್ದಾರೆ. ಆಗ ಅಲ್ಬಿನೋ ಮುಳ್ಳುಹಂದಿ ಮತ್ತು ಬಿಳಿ - ತುಟಿಯ ಕೆಂಪು ಟ್ಯಾಮರಿನ್ (ಮಂಗ)ನನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಇಲಾಖೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಕಂಟೈನರ್‌ನಲ್ಲಿ ಬಚ್ಚಿಟ್ಟಿದ್ದ ಲೂಸಿಸ್ಟಿಕ್ ಶುಗರ್ ಗ್ಲೈಡರ್ ಅನ್ನು ಅಧಿಕಾರಿಗಳು ರಕ್ಷಿಸಿದ ಮತ್ತೊಂದು ಘಟನೆ ಸೋಮವಾರ ನಡೆದಿದೆ. ಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕರೊಬ್ಬರ ಬ್ಯಾಗ್ನೊಳಗೆ ಕಂಟೇನರ್ನನ್ನು ಇರಿಸಲಾಗಿತ್ತು.
ಇದನ್ನೂ ಓದಿ: ರೈತರಿಗೆ ಬಂಪರ್: ಪ್ರತಿ ಎಕರೆಗೆ 1500 ರೂ. ಸಬ್ಸಿಡಿ ನೀಡಲು ಭಗವಂತ್ ಮಾನ್ ತೀರ್ಮಾನ!
ಈ ಎರಡೂ ಪ್ರಕರಣಗಳಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು ವಿಮಾನ ನಿಲ್ದಾಣದ ಹೊರಗೆ ಕಾಯುತ್ತಿರುವ ವ್ಯಕ್ತಿಗೆ ಅವುಗಳನ್ನು ನೀಡುವಂತೆ ಹೇಳಿ ಬ್ಯಾಗ್‌ಗಳನ್ನು ನೀಡಿದ್ದಾರೆ ಎಂದು ಪ್ರಯಾಣಿಕರು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅನಿಮಲ್ ಕ್ವಾರಂಟೈನ್ ಅಧಿಕಾರಿಗಳ ಸಲಹೆ ಮೇರೆಗೆ ಪ್ರಾಣಿಗಳನ್ನು ಥಾಯ್ಲೆಂಡ್‌ಗೆ ವಾಪಸ್ ಕಳುಹಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ