ETV Bharat / bharat

ಮುಂಬೈ ಏರ್​ಪೋರ್ಟ್​​ನಲ್ಲಿ ಚಿನ್ನ ಸಾಗಿಸುತ್ತಿದ್ದ ಆರೋಪದಲ್ಲಿ ಮಹಿಳೆ ಬಂಧನ - ಮಹಿಳೆಯ ಬಂಧಿಸಿದ ಕಸ್ಟಂ ಅಧಿಕಾರಿಗಳು

ಚಿನ್ನದ ಹಾಳೆಯನ್ನು ಕಾರ್ಬನ್ ಹಾಳೆಯೊಂದಿಗೆ ಸುತ್ತಿ ಅದನ್ನು ಚಾಕೋಲೇಟ್​ ಬಾಕ್ಸ್​ನಲ್ಲಿ ಸಾಗಿಸುತ್ತಿದ್ದ ಮಹಿಳೆಯನ್ನು ಮುಂಬೈ ಏರ್​ಪೋರ್ಟ್​ನ ಅಧಿಕಾರಿಗಳು ಬಂಧಿಸಿದ್ದಾರೆ.

Customs arrests woman, seizes 481 grams gold in Mumbai
ಮುಂಬೈ ಏರ್​ಪೋರ್ಟ್​​ನಲ್ಲಿ ಚಿನ್ನ ಸಾಗಿಸುತ್ತಿದ್ದ ಆರೋಪದಲ್ಲಿ ಮಹಿಳೆ ಬಂಧನ
author img

By

Published : Dec 29, 2020, 5:42 AM IST

ಮುಂಬೈ: ದುಬೈಗೆ ಆಗಮಿಸಿದ ಮಹಿಳೆಯನ್ನು ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ, ಆಕೆಯ ಬಳಿಯಿದ್ದ 24 ಕ್ಯಾರೆಟ್​ನ 481 ಗ್ರಾಮ್​ ತೂಕದ ಚಿನ್ನದ ಹಾಳೆಯನ್ನು ಜಪ್ತಿ ಮಾಡಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಸ್ಕ್ಯಾನರ್​ನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಚಿನ್ನದ ಹಾಳೆಯನ್ನು ಕಾರ್ಬನ್ ಹಾಳೆಯಲ್ಲಿ ಸುತ್ತಿ, ಅದನ್ನು ಚಾಕೋಲೇಟ್ ಬಾಕ್ಸ್​ನಲ್ಲಿ ಸಾಗಿಸಲು ಮಹಿಳೆ ಯತ್ನಿಸಿದ್ದಳು ಎಂದು ಕಸ್ಟಂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಮತ್ತೆ ಜಿಗಿದ ಬೆಳ್ಳಿ, ಚಿನ್ನದ ದರವೂ ಹೆಚ್ಚಳ... ಇಲ್ಲಿದೆ ಬೆಲೆಯ ವಿವರ

ಈಗ ಆಕೆಯನ್ನು ಬಂಧಿಸಿದ ಅಧಿಕಾರಿಗಳು ಚಿನ್ನದ ಕಳ್ಳ ಸಾಗಣೆ ಆರೋಪದಡಿಯಲ್ಲಿ ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ಕಸ್ಟಮ್ಸ್ ಇಲಾಖೆ ಶನಿವಾರ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬರನ್ನು ಬಂಧಿಸಿ 94 ಲಕ್ಷ ರೂಪಾಯಿ ಮೌಲ್ಯದ ಎರಡು ಕಿಲೋಗ್ರಾಂಗಳಷ್ಟು ಚಿನ್ನವನ್ನು ವಶಪಡಿಸಿಕೊಂಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.