ETV Bharat / bharat

ವೇಶ್ಯಾಗೃಹದಲ್ಲಿ ಸಿಲುಕುವ ಗ್ರಾಹಕರ ವಿರುದ್ಧ ಕ್ರಮ ಕೈಗೊಳ್ಳುವಂತಿಲ್ಲ: ಆಂಧ್ರ ಹೈಕೋರ್ಟ್‌

ವೇಶ್ಯಾವಾಟಿಕೆಗೆ ಮನೆ ನೀಡುವವರನ್ನು ತನಿಖೆಗೆ ಒಳಪಡಿಸಬಹುದು. ಆದರೆ ಗ್ರಾಹಕನಾಗಿ ಹೋದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.

CUSTOMER OF SEX WORKERS NOT LIABLE FOR PROSECUTION: AP HC
ವೇಶ್ಯಾಗೃಹದಲ್ಲಿ ಸಿಲುಕುವ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತಿಲ್ಲ: ಆಂಧ್ರ ಹೈಕೋರ್ಟ್​
author img

By

Published : May 3, 2022, 10:05 AM IST

ಅಮರಾವತಿ(ಆಂಧ್ರಪ್ರದೇಶ): ವೇಶ್ಯಾಗೃಹದಲ್ಲಿ ಸಿಕ್ಕಿಕೊಳ್ಳುವ ವ್ಯಕ್ತಿಗಳ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವಂತಿಲ್ಲ ಎಂದು ಆಂಧ್ರಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ. ತನ್ನ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ವಜಾಗೊಳಿಸುವಂತೆ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಾಧೀಶರಾದ ಡಿ.ರಮೇಶ್ ಈ ತೀರ್ಪು ನೀಡಿದರು.

2020ರಲ್ಲಿ ಗುಂಟೂರು ಜಿಲ್ಲಾ ಪೊಲೀಸರು ದಾಖಲಿಸಿದ ಪ್ರಕರಣವೊಂದನ್ನು ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ಗುಂಟೂರಿನ ಪ್ರಥಮ ದರ್ಜೆ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ (ವಿಶೇಷ ಮೊಬೈಲ್ ನ್ಯಾಯಾಲಯ) ನಡೆಯುತ್ತಿತ್ತು. ಈ ಪ್ರಕರಣವನ್ನು ರದ್ದುಗೊಳಿಸುವಂತೆ ಆ ವ್ಯಕ್ತಿ ಹೈಕೋರ್ಟ್​ನ ಮೆಟ್ಟಿಲೇರಿದ್ದರು.

ವೇಶ್ಯಾಗೃಹದ ಮೇಲೆ ಪೊಲೀಸರು ದಾಳಿ ನಡೆಸಿದಾಗ ಅರ್ಜಿದಾರರು ಅಲ್ಲಿನ 'ಗ್ರಾಹಕ'ರಾಗಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ವೇಶ್ಯಾವಾಟಿಕೆಗೆ ಮನೆ ನೀಡುವವರನ್ನು ವಿಚಾರಣೆಗೆ ಒಳಪಡಿಸಬಹುದು, ಆದರೆ ಗ್ರಾಹಕನಾಗಿ ಹೋದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಈ ಹಿಂದೆಯೂ ವೇಶ್ಯಾಗೃಹಕ್ಕೆ ಹೋದ ವ್ಯಕ್ತಿಯ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಇದೇ ನ್ಯಾಯಾಲಯ ರದ್ದುಪಡಿಸಿತ್ತು ಎಂಬುದನ್ನು ಇದೇ ವೇಳೆ ಆದೇಶದ ವೇಳೆ ಉಲ್ಲೇಖಿಸಲಾಗಿತ್ತು.

ಇದನ್ನೂ ಓದಿ: ಮದುವೆಗೆ ಹುಡುಗಿ ಫೋಟೋ ತೋರಿಸಿ ಯುವಕನ ಹತ್ಯೆ; ಬಿಜೆಪಿ ಮುಖಂಡನ ಕೊಲೆ ರಹಸ್ಯ ಬಯಲು

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.