ETV Bharat / bharat

ಕ್ರಿಪ್ಟೊ ಹಗರಣ; ಎಸ್​ಐಟಿಯಿಂದ ನಾಲ್ವರು ಪೊಲೀಸರು ಸೇರಿ 8 ಜನರ ಬಂಧನ - ನಾಲ್ಕು ರೀತಿಯ ಕ್ರಿಪ್ಟೋಕರೆನ್ಸಿಗಳನ್ನು

ಬಹುಕೋಟಿ ಕ್ರಿಪ್ಟೊ ಕರೆನ್ಸಿ ಹಗರಣದಲ್ಲಿ ಭಾಗಿಯಾದ 8 ಜನರನ್ನು ಎಸ್​ಐಟಿ ಬಂಧಿಸಿದೆ.

Four cops among eight more arrests by SIT in cryptocurrency scam

author img

By PTI

Published : Nov 5, 2023, 5:13 PM IST

ಶಿಮ್ಲಾ: ಬಹುಕೋಟಿ ಕ್ರಿಪ್ಟೋಕರೆನ್ಸಿ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿ, ಓರ್ವ ಅರಣ್ಯ ರಕ್ಷಕ ಸೇರಿದಂತೆ ಎಂಟು ಜನರನ್ನು ಬಂಧಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಸುಮಾರು ಒಂದು ಲಕ್ಷ ಹೂಡಿಕೆದಾರರಿಂದ ತಲಾ 2 ಕೋಟಿ ರೂ.ಗಿಂತ ಹೆಚ್ಚು ಹಣ ಪಡೆದ 70 ರಿಂದ 80 ವಂಚಕರಲ್ಲಿ ಈ ಎಂಟು ಜನ ಸೇರಿದ್ದಾರೆ ಎಂದು ಡಿಜಿಪಿ ಸಂಜಯ್ ಕುಂಡು ಪಿಟಿಐಗೆ ತಿಳಿಸಿದ್ದಾರೆ.

ಈವರೆಗೆ ಪ್ರಮುಖ ಆರೋಪಿಗಳಾದ ಮಂಡಿಯ ಹೇಮರಾಜ್ ಮತ್ತು ಸುಖದೇವ್, ಉನಾದ ಅರುಣ್ ಗುಲೇರಿಯಾ ಮತ್ತು ಅಭಿಷೇಕ್ ಸೇರಿದಂತೆ 18 ಜನರನ್ನು ಬಂಧಿಸಲಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ. ಹೊಸದಾಗಿ ಹಣ ಹೂಡಿಕೆ ಮಾಡಿದವರಿಂದ ಕೋಟ್ಯಂತರ ರೂಪಾಯಿ ಹಣ ಗಳಿಸಿದ ಎರಡನೇ ಹಂತದ ವಂಚಕರನ್ನು ಹುಡುಕಲು ನಾವೀಗ ತನಿಖೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.

ಪ್ರಕರಣದ ತನಿಖೆಯಲ್ಲಿ ಹಿಮಾಚಲ ಪ್ರದೇಶದ ಪೊಲೀಸರು ಕೇಂದ್ರ ಮತ್ತು ಹಣಕಾಸು ಸಂಸ್ಥೆಗಳು ಮತ್ತು ಇತರ ರಾಜ್ಯಗಳ ಪೊಲೀಸರೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ ಎಂದು ಡಿಜಿಪಿ ಹೇಳಿದರು. ಶನಿವಾರ ಬಂಧಿಸಲಾದ ಎಂಟು ಜನರಲ್ಲಿ ಮೂವರು ಹಮೀರ್​ಪುರದವರು, ಇಬ್ಬರು ಸೋಲನ್​ನ ಬಡ್ಡಿ ಮತ್ತು ಶಿಮ್ಲಾ, ಉನಾ ಮತ್ತು ಕಾಂಗ್ರಾದ ತಲಾ ಒಬ್ಬರು ಸೇರಿದ್ದಾರೆ. ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ 2019 ರ ಅಡಿಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದಾಗ್ಯೂ ಹಗರಣದ ಕಿಂಗ್​​ಪಿನ್ ಮಂಡಿಯ ಸರ್ಕಾಘಾಟ್​ ಪ್ರದೇಶದ ಸುಭಾಷ್ ಶರ್ಮಾ ಇನ್ನೂ ಪತ್ತೆಯಾಗಿಲ್ಲ. 2018 ರಲ್ಲಿ ರಾಜ್ಯದಲ್ಲಿ ಪ್ರಾರಂಭವಾದ ಬಹುಕೋಟಿ ಕ್ರಿಪ್ಟೋಕರೆನ್ಸಿ ಪೊಂಜಿ ಹಗರಣಕ್ಕೆ ಸಂಬಂಧಿಸಿದಂತೆ 300 ಕ್ಕೂ ಹೆಚ್ಚು ದೂರುಗಳು ಬಂದಿವೆ. ವಂಚಕರು ಕಡಿಮೆ ಅವಧಿಯಲ್ಲಿ ಅತ್ಯಧಿಕ ಆದಾಯದ ಭರವಸೆ ನೀಡುವ ಮೂಲಕ ಮುಗ್ಧ ಜನರನ್ನು ಆಕರ್ಷಿಸಿ ನೂರಾರು ಕೋಟಿ ರೂಪಾಯಿ ಕೊಳ್ಳೆ ಹೊಡೆದು ಪರಾರಿಯಾಗಿದ್ದಾರೆ.

ವಂಚಕರು ಸ್ಥಳೀಯವಾಗಿ ತಯಾರಿಸಿದ (ಮಂಡಿ ಜಿಲ್ಲೆಯಲ್ಲಿ) ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡುವಂತೆ ಜನರಿಗೆ ಆಮಿಷ ಒಡ್ಡಿದ್ದರು. "ಕೊರ್ವಿಯೊ ಕಾಯಿನ್" ಅಥವಾ ಕೆಆರ್​ಓ ಕಾಯಿನ್ ಎಂದು ಇದಕ್ಕೆ ಅವರು ಹೆಸರಿಟ್ಟಿದ್ದರು. ಮೂರರಿಂದ ನಾಲ್ಕು ರೀತಿಯ ಕ್ರಿಪ್ಟೋಕರೆನ್ಸಿಗಳನ್ನು ಬಳಸಿ, ಅವುಗಳ ಬೆಲೆಗಳನ್ನು ಕೃತಕವಾಗಿ ನಿರ್ವಹಿಸುವ ಸುಳ್ಳು ವೆಬ್​ಸೈಟ್​ಗಳನ್ನು ಈ ವಂಚಕರು ರಚಿಸಿದ್ದರು.

ಕ್ರಿಪ್ಟೋ ಹಗರಣಕ್ಕೆ ಬಳಸಲಾದ ವೆಬ್​ಸೈಟ್ ಸುಮಾರು 2.5 ಲಕ್ಷ ವಿಭಿನ್ನ ಐಡಿಗಳನ್ನು ಹೊಂದಿತ್ತು. ಯೋಜನೆಯ ಮೇಲೆ ನಿಯಂತ್ರಣ ಸಾಧಿಸಲು ಆರೋಪಿಗಳು ತಪ್ಪು ಮಾಹಿತಿ, ಮೋಸ ಮತ್ತು ಬೆದರಿಕೆಗಳ ಮೂಲಕ ಹೂಡಿಕೆದಾರರಿಗೆ ನಷ್ಟ ಉಂಟು ಮಾಡಿದ್ದರು. ಈ ಪ್ರಕರಣದಲ್ಲಿ ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಕೂಡ ವಂಚನೆಗೆ ಬಲಿಯಾಗಿರುವುದು ವಿಚಿತ್ರ.

ಇದನ್ನೂ ಓದಿ : 20 ವರ್ಷ ಹಿಂದಿನ ಕೊಲೆ ಪ್ರಕರಣ; 6 ಜನರಿಗೆ 10 ವರ್ಷ ಜೈಲು ಶಿಕ್ಷೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.