ETV Bharat / bharat

ಜೈಲಿನಲ್ಲಿರುವ ಆರ್ಯನ್​ ಖಾನ್​ಗೆ ₹4,500 ಮನಿ ಆರ್ಡರ್​, ಪೋಷಕರೊಂದಿಗೆ ವಿಡಿಯೋ ಕಾಲ್​! - ಶಾರುಖ್ ಖಾನ್​ ಪುತ್ರ ಆರ್ಯನ್​

ವಾರದಲ್ಲಿ 2 ಸಲ ಪೋಷಕರೊಂದಿಗೆ ವಿಡಿಯೋ ಕಾಲ್​ ಮೂಲಕ 10 ನಿಮಿಷಗಳ ಕಾಲ ಮಾತನಾಡಲು ಅವಕಾಶ ನೀಡಲಾಗಿದೆ. ಹೀಗಾಗಿ, ಪೋಷಕರಾದ ಶಾರುಖ್ ಖಾನ್​ ಹಾಗೂ ಗೌರಿ ಅವರ ಜೊತೆ ಮಾತನಾಡಿದ್ದಾಗಿ ತಿಳಿದು ಬಂದಿದೆ. ಜಾಮೀನು ಅರ್ಜಿ ಮೇಲಿಂದ ಮೇಲೆ ಮುಂದೂಡಿಕೆಯಾಗುತ್ತಿರುವ ಕಾರಣ ಈಗಾಗಲೇ ಆರ್ಯನ್​ ಖಾನ್​​ 12 ದಿನ ಜೈಲಿನಲ್ಲಿ ಕಳೆದಿದ್ದಾರೆ..

Aryan Khan
Aryan Khan
author img

By

Published : Oct 15, 2021, 2:50 PM IST

ಮುಂಬೈ : ಡ್ರಗ್ಸ್​​​​ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಜೈಲುವಾಸ ಅನುಭವಿಸುತ್ತಿರುವ ಬಾಲಿವುಡ್​ ಬಾದ್​ ಶಾ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ಗೆ 4,500 ರೂ. ಮನಿ ಆರ್ಡರ್​ ಮಾಡಲಾಗಿದೆ. ಪೋಷಕರೊಂದಿಗೆ ವಿಡಿಯೋ ಕಾಲ್​ ಮೂಲಕ ಮಾತನಾಡಲು ಅವಕಾಶ ನೀಡಲಾಗಿದೆ.

ಆರ್ಯನ್​ ಖಾನ್​​​ ಸಲ್ಲಿಸಿದ್ದ ಜಾಮೀನು ಕೋರಿ ಅರ್ಜಿ ಆದೇಶ ತೀರ್ಪು ಅಕ್ಟೋಬರ್​​ 20ಕ್ಕೆ ಮುಂದೂಡಿಕೆಯಾಗಿದೆ. ಹೀಗಾಗಿ, ಮತ್ತೊಂದು ವಾರ ಜೈಲಿನಲ್ಲಿ ಕಳೆಯಬೇಕಾಗಿರುವುದರಿಂದ ಆತನಿಗೆ ಜೈಲಿನಲ್ಲಿ ತನ್ನಿಷ್ಟದ ಆಹಾರ ಹಾಗೂ ಇತರೆ ವಸ್ತು ಖರೀದಿ ಮಾಡಲು 4,500 ರೂ. ಮನಿ ಆರ್ಡರ್ ಮಾಡಲಾಗಿದೆ. ಜೈಲಿನಲ್ಲಿರುವ ವ್ಯಕ್ತಿಗೆ ಗರಿಷ್ಠ ಇಷ್ಟು ಹಣ ಮನಿ ಆರ್ಡರ್ ಮಾಡಬಹುದಾಗಿದೆ.

ಇದರ ಜೊತೆಗೆ ವಾರದಲ್ಲಿ 2 ಸಲ ಪೋಷಕರೊಂದಿಗೆ ವಿಡಿಯೋ ಕಾಲ್​ ಮೂಲಕ 10 ನಿಮಿಷಗಳ ಕಾಲ ಮಾತನಾಡಲು ಅವಕಾಶ ನೀಡಲಾಗಿದೆ. ಹೀಗಾಗಿ, ಪೋಷಕರಾದ ಶಾರುಖ್ ಖಾನ್​ ಹಾಗೂ ಗೌರಿ ಅವರ ಜೊತೆ ಮಾತನಾಡಿದ್ದಾಗಿ ತಿಳಿದು ಬಂದಿದೆ. ಜಾಮೀನು ಅರ್ಜಿ ಮೇಲಿಂದ ಮೇಲೆ ಮುಂದೂಡಿಕೆಯಾಗುತ್ತಿರುವ ಕಾರಣ ಈಗಾಗಲೇ ಆರ್ಯನ್​ ಖಾನ್​​ 12 ದಿನ ಜೈಲಿನಲ್ಲಿ ಕಳೆದಿದ್ದಾರೆ.

ಇದನ್ನೂ ಓದಿರಿ: ಆರ್ಯನ್ ಖಾನ್ ಜಾಮೀನು ಅರ್ಜಿ:ತೀರ್ಪು ಕಾಯ್ದಿರಿಸಿದ ಕೋರ್ಟ್​- ಮತ್ತೆ ಒಂದು ವಾರ ಜೈಲೇ ಗತಿ

ಮುಂಬೈ ಕ್ರೂಸ್ ಹಡಗು ಮೇಲೆ ರೇವ್ ಪಾರ್ಟಿ ನಡೆಸುತ್ತಿದ್ದ ವೇಳೆ ಮಾದಕ ವಸ್ತುವಿನೊಂದಿಗೆ ಸಿಕ್ಕಿಬಿದ್ದ ಆರೋಪ ಹಿನ್ನೆಲೆ ಆರ್ಯನ್ ಖಾನ್ ಸೇರಿ ಇತರರನ್ನು ಕಳೆದ ಅ. 2ರಂದು ಎನ್​ಸಿಬಿ ಬಂಧಿಸಿತ್ತು.

ಮುಂಬೈಯ ಎನ್​ಡಿಪಿಎಸ್​ ಕೋರ್ಟ್ ಆರ್ಯನ್ ಖಾನ್, ಅರ್ಬಾಸ್ ಮರ್ಚೆಂಟ್ ಮತ್ತು ಮುನ್ಮುನ್ ಧಮೆಚ್​ ಅವರ ಜಾಮೀನು ಅರ್ಜಿಯನ್ನು ಆಲಿಸಲಾಗುತ್ತಿದೆ. ಆದರೆ, ಪ್ರಕರಣದಲ್ಲಿ ಈವರೆಗೂ ಒಟ್ಟು 20 ಮಂದಿಯನ್ನು ಎನ್​ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.