ನವದೆಹಲಿ: ಛತ್ತೀಸ್‌ಗಢದಲ್ಲಿ ನಡೆದ ನಕ್ಸಲರು ಹಾಗೂ ಭದ್ರತಾ ಪಡೆ ನಡುವಿನ ಎನ್ಕೌಂಟರ್ನಲ್ಲಿ ಓರ್ವ ಕೋಬ್ರಾ ಕಮಾಂಡೋನನ್ನು ನಕ್ಸಲರು ಅಪಹರಿಸಿದ್ದಾರೆ ಎಂದು ವರದಿಯಾಗಿತ್ತು. ನಕ್ಸಲರು ಬಿಜಾಪುರ ಮೂಲದ ಪತ್ರಕರ್ತರೊಬ್ಬರಿಗೆ ಕರೆ ಮಾಡಿ ಕಮಾಂಡೋವನ್ನು ಅಪರಿಸಿರುವುದಾಗಿ ಹೇಳಿದ್ದರು.
210ನೇ ಬೆಟಾಲಿಯನ್ನ ಕೋಬ್ರಾ ಕಮಾಂಡರ್ ಅವರನ್ನು ಪತ್ತೆ ಮಾಡಲು ಇದಿಗ ಎಲ್ಲಾ ಕಾರ್ಯ ನಡೆಯುತ್ತಿದೆ. ಆದರೆ ನಕ್ಸಲರು ಅವರನ್ನು ಅಪಹರಿಸಿದ್ದಾರೆ ಎಂಬುದನ್ನು ಸಾಬೀತು ಪಡಿಸಲು ನಮ್ಮಬಳಿ ಪ್ರಬಲ ಪುರಾವೆಯಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಹೇಳಿದ್ದಾರೆ.
ಭಾನುವಾರ ನಕ್ಸಲ್ ವಿರುದ್ಧದ ಕಾರ್ಯಾಚರಣೆಗಾಗಿ ಕಮಾಂಡೋ ಮಿನ್ಹಾಸ್ ತಂಡದ ಜೊತೆ ಹೊರಬಂದಿದ್ದ. ಆದರೆ ಕಾರ್ಯಾಚರಣೆ ವೇಳೆ 22 ಮಂದಿ ಭದ್ರತಾ ಪಡೆ ಸಿಬ್ಬಂದಿ ಹುತಾತ್ಮರಾದರೆ, 31 ಮಂದಿ ಗಾಯಗೊಂಡಿದ್ದರು. ಈ ನಡುವೆ ಜಮ್ಮುವಿನಲ್ಲಿರುವ ವಿನ್ಹಾಸ್ ನಿವಾಸಕ್ಕೆ ಭದ್ರತಾ ಅಧಿಕಾರಿ ಭೇಟಿ ನೀಡಿದ್ದು, ಮಾಹಿತಿ ಪಡೆದಿದ್ದಾರೆ.
ಇದನ್ನೂ ಓದಿ: 'U' ಆಕಾರದಲ್ಲಿ ಭದ್ರತಾ ಸಿಬ್ಬಂದಿಯನ್ನು ಸುತ್ತುವರೆದಿದ್ದ 400 ನಕ್ಸಲರು!