ETV Bharat / bharat

ಕೋಬ್ರಾ ಕಮಾಂಡೋ, ಸಿಆರ್​​​ಪಿಎಫ್ ಜಂಟಿ ಕಾರ್ಯಾಚರಣೆ: 8 ಮಂದಿ ನಕ್ಸಲರ ಬಂಧನ - ಬಂಧಿತರಿಂದ ಸ್ಫೋಟಕಗಳ ವಶ

ಗುಪ್ತಚರ ದಳದ ಮಾಹಿತಿ ಮೇರೆಗೆ ಕಾರ್ಯಾಚರಣೆ ಆರಂಭಿಸಿದ್ದ ಕೋಬ್ರಾ ಮತ್ತು ಸಿಆರ್​ಪಿಎಫ್ ಪಡೆ 8 ಮಂದಿ ನಕ್ಸಲರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ.

Sukma Police & CRPF arrested 8 Naxals
ಕೋಬ್ರಾ ಕಮಾಂಡೋ, ಸಿಆರ್​​​ಪಿಎಫ್ ಜಂಟಿ ಕಾರ್ಯಚರಣೆ: 8 ಮಂದಿ ನಕ್ಸಲರ್ ಬಂಧನ
author img

By

Published : Nov 6, 2021, 12:11 PM IST

ಸುಕ್ಮಾ (ಛತ್ತೀಸ್​ಗಢ): ಇಲ್ಲಿನ ಮೋರ್ಪಲ್ಲಿ ಗ್ರಾಮದ ಜಿಂತಲ್ನಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ 8 ಮಂದಿ ನಕ್ಸಲರನ್ನು ಪೊಲೀಸರು ಬಂಧಿಸಿದ್ದಾರೆ. ಸಿಆರ್​ಪಿಎಫ್​​​ ಮತ್ತು ಸುಕ್ಮಾ ಪೊಲೀಸ್ ಠಾಣೆಯ ಕಾರ್ಯಾಚರಣೆ ಘಟಕವಾದ ಕೋಬ್ರಾ ಪಡೆಯ ಜಂಟಿ ಕಾರ್ಯಾಚರಣೆಯಲ್ಲಿ 8 ಮಂದಿ ನಕ್ಸಲರ ಬಂಧಿಸಲಾಗಿದೆ.

ಈ ಕುರಿತು ಮಾತನಾಡಿರುವ ಪೊಲೀಸ್ ವರಿಷ್ಠಾಧಿಕಾರಿ ಸುನೀಲ್ ಶರ್ಮಾ, ಈ ಪ್ರದೇಶದಲ್ಲಿ ನಕ್ಸಲರ ಚಲನವಲನದ ಕುರಿತಂತೆ ನಮಗೆ ಗುಪ್ತಚರ ದಳ ಮಾಹಿತಿ ನೀಡಿತ್ತು. ಹೀಗಾಗಿ ನವೆಂಬರ್ 2ರಿಂದ ರಕ್ಷಣಾ ಪಡೆಗಳು ಕಾರ್ಯಾಚರಣೆ ಆರಂಭಿಸಿದ್ದವು. ಇದೀಗ ಒಟ್ಟು 8 ಮಂದಿಯನ್ನ ಬಂಧಿಸಲಾಗಿದೆ ಎಂದಿದ್ದಾರೆ.

ಬಂಧಿತರಲ್ಲಿ ‘ಕವಾಸಿ ರಾಜು ಅಲಿಯಾಸ್ ಸಂತು’ ಬೆಟಾಲಿಯನ್ ಸದಸ್ಯನಾಗಿದ್ದು ಮತ್ತು ‘ಕಲ್ಮು ಮಾಡಾ’ ಮಿಲಿಷಿಯಾ ಕಂಪನಿ ಕಮಾಂಡರ್ ಆಗಿದ್ದಾನೆ. ಇವರಿಬ್ಬರ ತಲೆಗೆ ಕ್ರಮವಾಗಿ 8 ಮತ್ತು 5 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಇತರೆ ಆರೋಪಿಗಳ ಸುಳಿವು ನೀಡಿದ್ದವರಿಗೆ ತಲಾ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.

ಬಂಧಿಸಲಾದ ಎಲ್ಲಾ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು 35 ಡಿಟೋನೇಟರ್‌ಗಳು, 6 ಜಿಲೆಟಿನ್ ರಾಡ್‌ಗಳು, ಎರಡು ಸುಧಾರಿತ ಸ್ಫೋಟಕ ಸಾಧನಗಳು (ಐಇಡಿಗಳು), ಬ್ಯಾಟರಿಗಳು, ವೈರ್‌ಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ದಂತೇವಾಡದಲ್ಲಿ ಗುಂಡಿನ ಚಕಮಕಿ.. ಓರ್ವ ನಕ್ಸಲ್​ ಬೇಟೆಯಾಡಿದ ಪೊಲೀಸರು

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.