ETV Bharat / bharat

ಮಹಡಿಯಿಂದ ಬಿದ್ದು ಮಂಕಿಮ್ಯಾನ್ ಸಾವು.. ಬಂಧಿಸಲು ಬಂದಿದ್ದ ಪೊಲೀಸರಿಗೆ ಹಿಗ್ಗಾಮುಗ್ಗಾ ಥಳಿತ!

author img

By

Published : Jul 4, 2021, 10:30 AM IST

ಆರೋಪಿಯನ್ನು ಬಂಧಿಸಲು ತೆರಳಿದ್ದ ವೇಳೆ ಮಂಕಿಮ್ಯಾನ್ ಮಹಡಿ ಮೇಲಿಂದ ಬಿದ್ದು ಮೃತಪಟ್ಟಿದ್ದಾನೆ. ಪೊಲೀಸರೇ ದೂಡಿದ್ದಾರೆ ಎಂದು ಆರೋಪಿಸಿ ಸಂಬಂಧಿಕರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.

Viral Vide
Viral Vide

ಥಾಣೆ(ಮಹಾರಾಷ್ಟ್ರ): ಪೊಲೀಸ್ ದಾಖಲೆಗಳಲ್ಲಿ ಮಂಕಿಮ್ಯಾನ್​ ಎಂದೇ ಹೆಸರುವಾಸಿಯಾಗಿರುವ ದರೋಡೆಕೋರ ಜಮಿಲ್​ ಅಲಿಯಾಸ್​ ತಕ್ಲಾ ಖುರೇಷಿಯನ್ನು ಬಂಧಿಸಲು ಬಂದಾಗ ಆತ ನಾಲ್ಕನೇ ಮಹಡಿಯ ಕಿಟಕಿಯಿಂದ ಹಾರಿ ಮೃತಪಟ್ಟಿದ್ದಾನೆ. ಇದರಿಂದ ರೊಚ್ಚಿಗೆದ್ದ ಆತನ ಸಂಬಂಧಿಕರು ಪೊಲೀಸರಿಗೇ ಥಳಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಮಹಡಿಯಿಂದ ಬಿದ್ದು ಮಂಕಿಮ್ಯಾನ್ ಮೃತಪಟ್ಟಿದ್ದಕ್ಕೆ ಪೊಲೀಸರ ಮೇಲೆ ಹಲ್ಲೆ!

ಭಿವಾಂಡಿ ನಗರದ ನಿಜಾಂಪುರ ಕಸಾಯಿ ವಾಡಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪ್ರಕರಣವೊಂದರಲ್ಲಿ ಜಮೀಲ್​ನನ್ನು ಬಂಧಿಸಲು ಗುಜರಾತ್​​ ಪೊಲೀಸರು ಹಾಗೂ ಭಿವಾಂಡಿ ಅಪರಾಧ ವಿಭಾಗದ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಮಂಕಿಮ್ಯಾನ್​ ಕಟ್ಟಡವೊಂದರ ನಾಲ್ಕನೇ ಮಹಡಿಯ ಕಿಟಕಿಯಿಂದ ಕೆಳಗೆ ಹಾರಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಆದರೆ, ಅವನ ಸಂಬಂಧಿಕರು ಪೊಲೀಸರೇ ಅವನನ್ನು ದೂಡಿ, ಸಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಅಧಿಕಾರಿಗಳ ಮೇಲೆಯೇ ಹಲ್ಲೆ ನಡೆಸಿರುವ ಆರೋಪವೂ ಕೇಳಿಬಂದಿದೆ. ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಪೊಲೀಸರ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಹಿಂದೆ ‘ಮಂಕಿಮ್ಯಾನ್​’ನನ್ನು ಪೊಲೀಸರು ಬೆನ್ನಟ್ಟಿದ್ದಾಗ ಐದಾರು ಬಾರಿ ಮನೆಗಳ ಮೇಲೆ ಹಾರಿ ತಪ್ಪಿಸಿಕೊಂಡಿದ್ದ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.